AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2: ಪುಷ್ಪ 2 ಈ ವರ್ಷ ಬಿಡುಗಡೆ ಅನುಮಾನ, ಮರು ಚಿತ್ರೀಕರಣ ಮಾಡಲಿರುವ ಸುಕುಮಾರ್?

ಪುಷ್ಪ 2 ಸಿನಿಮಾದ ಬಿಡುಗಡೆ ಈ ವರ್ಷ ಆಗುವುದು ಅನುಮಾನ. ಸಿನಿಮಾದ ಈವರೆಗಿನ ಔಟ್​ಕಮ್ ನಿರ್ದೇಶಕ ಸುಕುಮಾರ್​ಗೆ ಇಷ್ಟವಾಗದ ಕಾರಣ ಮರುಚಿತ್ರೀಕರಣಕ್ಕೆ ಯೋಜನೆ ಹಾಕಿದ್ದಾರಂತೆ..

Pushpa 2: ಪುಷ್ಪ 2 ಈ ವರ್ಷ ಬಿಡುಗಡೆ ಅನುಮಾನ, ಮರು ಚಿತ್ರೀಕರಣ ಮಾಡಲಿರುವ ಸುಕುಮಾರ್?
ಪುಷ್ಪ 2
ಮಂಜುನಾಥ ಸಿ.
|

Updated on: Apr 03, 2023 | 5:05 PM

Share

ಸುಕುಮಾರ್ (Sukumar) ನಿರ್ದೇಶನ ಮಾಡಿ, ಅಲ್ಲು ಅರ್ಜುನ್ (Allu Arjun) ನಟಿಸಿರುವ ಪುಷ್ಪ ಸಿನಿಮಾ 2021 ರಲ್ಲಿ ಬಿಡುಗಡೆ ಅಗಿ ಸೂಪರ್ ಹಿಟ್ ಆಗಿದೆ. ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ, ಆದರೆ ನಿರ್ದೇಶಕ ಸುಕುಮಾರ್​ಗೆ ಸಿನಿಮಾದ ಔಟ್​ಪುಟ್ ಇಷ್ಟವಾಗದ ಕಾರಣ ಸಿನಿಮಾವನ್ನು ಮತ್ತೆ ಚಿತ್ರೀಕರಣ (Shooting) ಮಾಡಲು ಯೋಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣದಿಂದಾಗಿ ಸಿನಿಮಾ ಈ ವರ್ಷ ತೆರೆಗೆ ಬರುವುದು ಅನುಮಾನವಾಗಿದೆ.

ಪುಷ್ಪ ಸಿನಿಮಾ ದೊಡ್ಡ ಹಿಟ್ ಆಗಿದ್ದು, ಸಿನಿಮಾದ ಸೀಕ್ವೆಲ್​ಗೆ ಹಲವರು ತುದಿಗಾಲ ಮೇಲೆ ನಿಂತಿದ್ದಾರೆ, ಪುಷ್ಪ 2 ಮೇಲೆ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದೆ. ಇದೇ ಕಾರಣದಿಂದ ಒತ್ತಡಕ್ಕೆ ಒಳಗಾಗಿರುವ ಸುಕುಮಾರ್​ ಸಿನಿಮಾದ ಕತೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆಯಾದರೂ ಸಿನಿಮಾದ ಔಟ್​ಪುಟ್ ಸುಕುಮಾರ್​ಗೆ ಹಿಡಿಸಿಲ್ಲವಂತೆ ಹಾಗಾಗಿ ಮತ್ತೊಮ್ಮೆ ಚಿತ್ರೀಕರಣ ಮಾಡುವ ದುಸ್ಸಾಹಸ ಮಾಡಲು ಹೊರಟಿದ್ದಾರೆ.

ಸುಕುಮಾರ್, ಪುಷ್ಪ 2 ಸಿನಿಮಾದ ಚಿತ್ರೀಕರಣಕ್ಕೆ ಈಗಾಗಲೇ ಸಾಕಷ್ಟು ಸಮಯವನ್ನೇ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ತಮ್ಮ ಹೊಯ್ಸಳ ಸಿನಿಮಾದ ಪ್ರಚಾರದ ವೇಳೆ ಪುಷ್ಪ 2 ಸಿನಿಮಾದ ಶೂಟಿಂಗ್ ಬಗ್ಗೆ ಮಾತನಾಡಿದ್ದ ಡಾಲಿ ಧನಂಜಯ್, ನನ್ನ ಪಾತ್ರಕ್ಕೆ ಇನ್ನೂ ಚಿತ್ರೀಕರಣ ಪ್ರಾರಂಭವೇ ಆಗಿಲ್ಲ ಎಂದಿದ್ದರು. ಪ್ರಾರಂಭವಾದಾಗ ಸುಕುಮಾರ್ ಹೇಳುತ್ತಾರೆ ಆಗ ಹೋಗಿ ಮುಗಿಸಿ ಬರುತ್ತೇನೆ ಎಂದಿದ್ದರು. ಈ ಬಾರಿ ಸುಕುಮಾರ್ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿಲ್ಲೇನವೋ ಎಂಬ ಅನುಮಾನವನ್ನು ಇದು ಮೂಡಿಸಿತ್ತು.

ಕೆಲವು ಮೂಲಗಳ ಪ್ರಕಾರ, ಪುಷ್ಪ ಸಿನಿಮಾವನ್ನು ಒಂದೇ ಸಿನಿಮಾ ಆಗಿ ಮುಗಿಸುವ ಯೋಜನೆ ಮೊದಲಿಗೆ ಇತ್ತಂತೆ. ಆದರೆ ಸಿನಿಮಾದ ಬಗ್ಗೆ ಕ್ರೇಜ್ ಹೆಚ್ಚುತ್ತಾ ಹೋದಂತೆ ಸಿನಿಮಾವನ್ನು ಎರಡು ಭಾಗಗಳಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹಾಗಾಗಿ ಸುಕುಮಾರ್ ಬಳಿ ಎರಡನೇ ಪಾರ್ಟ್​ಗೆ ಕತೆ ಇರಲಿಲ್ಲ. ಮೊದಲ ಪಾರ್ಟ್ ದೊಡ್ಡ ಹಿಟ್ ಆದ ಬಳಿಕವಷ್ಟೆ ಎರಡನೇ ಪಾರ್ಟ್​ ಕತೆ ಬರೆಯಲು ಕೂತಿದ್ದಾರೆ ಸುಕುಮಾರ್. ಆದರೆ ಪಾರ್ಟ್​ನ ಕತೆ ಸುಕುಮಾರ್ ಹಿಡಿತ ತಪ್ಪಿದೆ ಎನ್ನಲಾಗುತ್ತಿದೆ. ಮಾತ್ರವಲ್ಲ ಮೊದಲಿಗೆ ಪ್ಯಾನ್ ಇಂಡಿಯಾ ಮಾಡುವ ಐಡಿಯಾ ಸಹ ಚಿತ್ರತಂಡಕ್ಕೆ ಇರಲಿಲ್ಲ, ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕನ್ನು ತೀರ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಆದರೆ ಚಿತ್ರೀಕರಣದ ಹಂತದಲ್ಲಿ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡಲು ಮುಂದಾಗಿ ಕೊನೆಗೆ ಅಲ್ಲು ಅರ್ಜುನ್ ಮಧ್ಯ ಪ್ರವೇಶಿಸಿ ಹಿಂದಿ ಡಬ್ ಖರೀದಿಸಿದ್ದ ವ್ಯಕ್ತಿಯನ್ನು ಒಪ್ಪಿಸಿ ಬಳಿಕ ದೊಡ್ಡ ಬೆಲೆಗೆ ಬೇರೊಬ್ಬರಿಗೆ ಸಿನಿಮಾ ಮಾರಲಾಗಿತ್ತು.

ಇದನ್ನೂ ಓದಿ: ವಿಶ್ ಮಾಡಲಿಲ್ಲ, ಬರ್ತ್​ಡೇ ಪಾರ್ಟಿಗೂ ಬರಲಿಲ್ಲ; ರಾಮ್​ ಚರಣ್ ಬಗ್ಗೆ ಮುನಿಸಿಕೊಂಡ್ರಾ ಅಲ್ಲು ಅರ್ಜುನ್?

ಇನ್ನು ಪುಷ್ಪ 2 ಸಿನಿಮಾದ ಪಾತ್ರಗಳ ಬಗ್ಗೆಯೂ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಮೊದಲ ಪಾರ್ಟ್​ ಅಂತ್ಯದ ಪ್ರಕಾರ ಎರಡನೇ ಪಾರ್ಟ್​ನ ಮುಖ್ಯ ವಿಲನ್ ಫಹಾದ್ ಫಾಸಿಲ್ ಆದರೆ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಸಿನಿಮಾದಲ್ಲಿ ಜಗಪತಿ ಬಾಬು, ವಿಜಯ್ ಸೇತುಪತಿ ಸಹ ಇದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಮುಖ್ಯ ಪಾತ್ರವೊಂದಕ್ಕೆ ಸಾಯಿ ಪಲ್ಲವಿ ಸಹ ಬಂದಿದ್ದಾರೆ ಎನ್ನಲಾಗುತ್ತಿದೆ. ಇನ್ನೈದು ದಿನಗಳಲ್ಲಿ ಅಲ್ಲು ಅರ್ಜುನ್ ಹುಟ್ಟುಹಬ್ಬ ಬರುತ್ತಿದ್ದು ಆ ದಿನ ಸಿನಿಮಾದ ಟೀಸರ್, ಪೋಸ್ಟರ್ ಏನಾದರೂ ಬಿಡುಗಡೆ ಮಾಡುತ್ತಾರೆಯೇ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್