Allu Arjun: ‘ಪುಷ್ಪ 2’ ಶೂಟಿಂಗ್​ ಮಾಡಲು ಕಾಡಿಗೆ ಕಾಲಿಡುತ್ತಿಲ್ಲ ಸುಕುಮಾರ್​; ಹಾಗಾದ್ರೆ ಬೇರೆ ಪ್ಲ್ಯಾನ್​ ಏನು?

Pushpa 2 | Sukumar: ಕಾಡಿನಲ್ಲಿ ಶೂಟಿಂಗ್​ ಮಾಡುವುದು ಎಂದರೆ ಸುಲಭದ ಮಾತಲ್ಲ. ಅದಕ್ಕಾಗಿ ನಿರ್ದೇಶಕ ಸುಕುಮಾ​ರ್​ ಅವರು ಆ ರಿಸ್ಕ್​ ತೆಗೆದುಕೊಳ್ಳುತ್ತಿಲ್ಲ.

Allu Arjun: ‘ಪುಷ್ಪ 2’ ಶೂಟಿಂಗ್​ ಮಾಡಲು ಕಾಡಿಗೆ ಕಾಲಿಡುತ್ತಿಲ್ಲ ಸುಕುಮಾರ್​; ಹಾಗಾದ್ರೆ ಬೇರೆ ಪ್ಲ್ಯಾನ್​ ಏನು?
ಅಲ್ಲು ಅರ್ಜುನ್
Follow us
ಮದನ್​ ಕುಮಾರ್​
|

Updated on: Mar 05, 2023 | 2:49 PM

ನಟ ಅಲ್ಲು ಅರ್ಜುನ್​ (Allu Arjun) ಅವರು ‘ಪುಷ್ಪ 2’ ಸಿನಿಮಾ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ನಿರ್ದೇಶಕ ಸುಕುಮಾರ್​ (Sukumar) ಅವರು ದೊಡ್ಡ ಕ್ಯಾನ್ವಾಸ್​ನಲ್ಲಿ ಈ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಅದಕ್ಕಾಗಿ ಬಹುಕೋಟಿ ರೂಪಾಯಿ ಬಜೆಟ್​ ಮೀಸಲಿಡಲಾಗಿದೆ. ‘ಪುಷ್ಪ’ ಸಿನಿಮಾದ ಕಥೆ ಅರಣ್ಯ ಪ್ರದೇಶದ ಹಿನ್ನೆಲೆಯಲ್ಲಿ ಸಾಗಿತ್ತು. ಈಗ ಇದರ ಸೀಕ್ವೆಲ್​ನಲ್ಲೂ ಕಾಡಿನ ಪರಿಸರ ಇರಲಿದೆ. ಆದರೆ ನಿಜವಾದ ಕಾಡಿಗೆ ಕಾಲಿಡಲು ಚಿತ್ರತಂಡ ಸಿದ್ಧವಿಲ್ಲ. ಅದರ ಬದಲು ‘ಪುಷ್ಪ 2’ (Pushpa 2) ಬಳಗದವರು ಬೇರೆ ಮಾರ್ಗ ಅನುಸರಿಸುತ್ತಿದ್ದಾರೆ. ಅರಣ್ಯದ ಹಿನ್ನೆಲೆಯಲ್ಲಿ ಬರುವ ಎಲ್ಲ ದೃಶ್ಯಗಳನ್ನು ಗ್ರಾಫಿಕ್ಸ್​ ಮೂಲಕ ಸೃಷ್ಟಿಸಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ.

ಕಾಡಿನಲ್ಲಿ ಶೂಟಿಂಗ್​ ಮಾಡುವುದು ಎಂದರೆ ಸುಲಭದ ಮಾತಲ್ಲ. ಅದಕ್ಕಾಗಿ ನಿರ್ದೇಶಕ ಸುಕುಮಾ​ರ್​ ಅವರು ಆ ರಿಸ್ಕ್​ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅದರ ಬದಲು 10ಕ್ಕೂ ಹೆಚ್ಚು ಸೆಟ್​ಗಳನ್ನು ನಿರ್ಮಿಸಿ ಅದರಲ್ಲಿ ಶೂಟಿಂಗ್​ ಮಾಡಲಾಗುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್​ ಬಳಸಿ ಕಾಡಿನ ದೃಶ್ಯಗಳನ್ನು ಅದ್ದೂರಿಯಾಗಿ ತೋರಿಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ. ಇದರಿಂದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅನುಕೂಲ ಆಗಲಿದೆ.

ಇದನ್ನೂ ಓದಿ: ಸದ್ದಿಲ್ಲದೆ ಘೋಷಣೆ ಆಯ್ತು ಅಲ್ಲು ಅರ್ಜುನ್ ಹೊಸ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಕ್ಕೆ ಹಣ ಹೂಡಿದ ಹಿಂದಿ ನಿರ್ಮಾಪಕ

ಇದನ್ನೂ ಓದಿ
Image
‘ಸೈಮಾ’ ಅವಾರ್ಡ್ಸ್​ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ
Image
Pushpa 2: ಮತ್ತೆ ಫೀಲ್ಡ್​ಗೆ ಇಳಿದ ಪುಷ್ಪರಾಜ್​; ಇಲ್ಲಿದೆ ರಶ್ಮಿಕಾ, ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​
Image
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
Image
ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​

‘ಪುಷ್ಪ 2’ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಸಕಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ‘ಕೆಜಿಎಫ್​ 2’ ಚಿತ್ರಕ್ಕಿಂತಲೂ ದೊಡ್ಡ ಹಿಟ್​ ಆಗಬೇಕು ಎಂಬ ಗುರಿ ಇಟ್ಟುಕೊಂಡು ‘ಪುಷ್ಪ 2’ ತಂಡದವರು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಸ್ಕ್ರಿಪ್ಟ್​ನಲ್ಲಿಯೂ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ.

ಅಲ್ಲು ಅರ್ಜುನ್​ ಹುಟ್ಟುಹಬ್ಬಕ್ಕೆ ಟೀಸರ್​?

ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್​ 8ರಂದು ‘ಪುಷ್ಪ 2’ ಚಿತ್ರದ ಟೀಸರ್​ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೂ ಗಾಸಿಪ್​ ಬಲವಾಗಿ ಹಬ್ಬಿದೆ. ಏಪ್ರಿಲ್​ 8ರಂದು ಅಲ್ಲು ಅರ್ಜುನ್​ ಜನ್ಮದಿನ. ಆ ವಿಶೇಷ ದಿನದಂದು ಖಂಡಿತವಾಗಿಯೂ ನಿರ್ದೇಶಕ ಸುಕುಮಾರ್​ ಅವರು ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂಬುದು ಹಲವರ ನಂಬಿಕೆ. ಹಾಗಾಗಿ ಆ ದಿನಾಂಕದ ಮೇಲೆ ಕಣ್ಣಿಡಲಾಗಿದೆ.

ಇದನ್ನೂ ಓದಿ: ‘Allu Arjun: ‘ಪುಷ್ಪ 2’ ಚಿತ್ರದ ಎಲ್ಲ ಹಕ್ಕುಗಳಿಗೆ 1050 ಕೋಟಿ ರೂ. ಕೇಳ್ತಿದ್ದಾರಾ ಅಲ್ಲು ಅರ್ಜುನ್​?

ದೊಡ್ಡ ಕ್ಯಾನ್ವಾಸ್​ನಲ್ಲಿ ‘ಪುಷ್ಪ 2’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆಗೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು