Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೆ ಘೋಷಣೆ ಆಯ್ತು ಅಲ್ಲು ಅರ್ಜುನ್ ಹೊಸ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಕ್ಕೆ ಹಣ ಹೂಡಿದ ಹಿಂದಿ ನಿರ್ಮಾಪಕ

ಬಾಲಿವುಡ್​ನಲ್ಲಿ ಭೂಷಣ್ ಕುಮಾರ್ ಅವರದ್ದು ದೊಡ್ಡ ಹೆಸರು. ಹಲವು ಸೂಪರ್​ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಇತ್ತೀಚೆಗೆ ಅವರು ದಕ್ಷಿಣದ ಸ್ಟಾರ್ಸ್​ಗಳ ಜೊತೆ ಕೆಲಸ ಮಾಡೋಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಸದ್ದಿಲ್ಲದೆ ಘೋಷಣೆ ಆಯ್ತು ಅಲ್ಲು ಅರ್ಜುನ್ ಹೊಸ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಕ್ಕೆ ಹಣ ಹೂಡಿದ ಹಿಂದಿ ನಿರ್ಮಾಪಕ
Follow us
ರಾಜೇಶ್ ದುಗ್ಗುಮನೆ
|

Updated on:Mar 03, 2023 | 11:56 AM

ಅಲ್ಲು ಅರ್ಜುನ್ (Allu Arjun) ಅವರು ಸದ್ಯ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸ್ಕ್ರಿಪ್ಟ್ ಕೆಲಸ ವಿಳಂಬ ಆದ ಕಾರಣ ಸಿನಿಮಾ ಶೂಟಿಂಗ್ ಕೂಡ ತಡವಾಗಿ ಆರಂಭ ಆಗಿದೆ. ‘ಪುಷ್ಪ’ ಚಿತ್ರ ಹಿಟ್ ಆದ ಹಿನ್ನೆಲೆಯಲ್ಲಿ ಸಹಜವಾಗಿಯೇ ‘ಪುಷ್ಪ 2’ (Pushpa 2) ಬಗ್ಗೆ ನಿರೀಕ್ಷೆ ಜೋರಾಗಿದೆ. ಹೀಗಿರುವಾಗಲೇ ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘AA23’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಘಟಾನುಘಟಿಗಳು ಕೆಲಸ ಮಾಡುತ್ತಿದ್ದಾರೆ.

‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಫೇಮಸ್ ಆದವರು ನಿರ್ದೇಶಕ ಸಂದೀಪ್ ರೆಡ್ಡಿ ವಂಗ. ಈ ಚಿತ್ರ ಸೂಪರ್ ಹಿಟ್ ಆಯಿತು. ಇದರ ಹಿಂದಿ ರಿಮೇಕ್ ‘ಕಬೀರ್​ ಸಿಂಗ್​’ ಚಿತ್ರಕ್ಕೂ ಅವರು ಆ್ಯಕ್ಷನ್ ಕಟ್ ಹೇಳಿದರು. ಸದ್ಯ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರಕ್ಕೆ ಸಂದೀಪ್ ಆ್ಯಕ್ಷನ್​ಕಟ್ ಹೇಳುತ್ತಿದ್ದಾರೆ. ಹೀಗಿರುವಾಗಲೇ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಬಾಲಿವುಡ್​ನ ಟಿ-ಸೀರಿಸ್ ಅಡಿಯಲ್ಲಿ ಭೂಷಣ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಬಾಲಿವುಡ್​ನಲ್ಲಿ ಭೂಷಣ್ ಕುಮಾರ್ ಅವರದ್ದು ದೊಡ್ಡ ಹೆಸರು. ಹಲವು ಸೂಪರ್​ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಇತ್ತೀಚೆಗೆ ಅವರು ದಕ್ಷಿಣದ ಸ್ಟಾರ್ಸ್​ಗಳ ಜೊತೆ ಕೆಲಸ ಮಾಡೋಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಿಂದಿ ‘ದೃಶ್ಯಂ 2’, ‘ಆದಿಪುರುಷ್​’ ಚಿತ್ರಗಳನ್ನು ನಿರ್ಮಾಣ ಮಾಡಿರುವುದು ಇದೇ ಭೂಷಣ್​ ಕುಮಾರ್. ಈಗ ಅವರು ಅಲ್ಲು ಅರ್ಜುನ್ ಜೊತೆ ಕೈ ಜೋಡಿಸಿರುವುದು ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ ದಕ್ಷಿಣದ ಹೀರೋಗಳಲ್ಲಿ ಅಲ್ಲು ಅರ್ಜುನ್​​ ಫಸ್ಟ್​; ಯಶ್​ಗೆ ಎಷ್ಟನೇ ಸ್ಥಾನ?

ಅಂದಹಾಗೆ ಇದು ವದಂತಿ ಅಲ್ಲ. ಟಿ-ಸೀರಿಸ್ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಸಂದೀಪ್​ ರೆಡ್ಡಿ ಅವರು ‘ಅನಿಮಲ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲು ಅರ್ಜುನ್ ‘ಪುಷ್ಪ 2’ ಚಿತ್ರದ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಇವೆರಡೂ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕ ‘AA23’ ಚಿತ್ರ ಸೆಟ್ಟೇರಲಿದೆ. ತಂಡದಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ. ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:15 am, Fri, 3 March 23