Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಸಿನಿಮೀಯ ಶೈಲಿಯಲ್ಲಿ ಶಾರುಖ್ ಮನೆ ಪ್ರವೇಶಿಸಿದ ಫ್ಯಾನ್ಸ್; ದಾಖಲಾಯ್ತು ಪ್ರಕರಣ

ಸೆಲೆಬ್ರಿಟಿಗಳನ್ನು ಮೀಟ್ ಮಾಡೋಕೆ ಫ್ಯಾನ್ಸ್ ನಾನಾ ಕಸರತ್ತು ನಡೆಸುತ್ತಾರೆ. ಇದಕ್ಕಾಗಿ ಅವರು ಯಾವ ಹಂತಕ್ಕೆ ಹೋಗೋಕೂ ರೆಡಿ ಇರುತ್ತಾರೆ. ಈಗಲೂ ಹಾಗೆಯೇ ಆಗಿದೆ.

Shah Rukh Khan: ಸಿನಿಮೀಯ ಶೈಲಿಯಲ್ಲಿ ಶಾರುಖ್ ಮನೆ ಪ್ರವೇಶಿಸಿದ ಫ್ಯಾನ್ಸ್; ದಾಖಲಾಯ್ತು ಪ್ರಕರಣ
ಮನ್ನತ್​ನಲ್ಲಿ ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 03, 2023 | 11:32 AM

ಶಾರುಖ್ ಖಾನ್ (Shah Rukh Khan) ನಿವಾಸ ಮನ್ನತ್ ಅಭಿಮಾನಿಗಳ ಪಾಲಿಗೆ ತುಂಬಾನೇ ವಿಶೇಷ ಎನಿಸಿಕೊಂಡಿದೆ. ಮನೆಯ ಹೊರಭಾಗದಲ್ಲಿರುವ ರಸ್ತೆಯಲ್ಲಿ ಫ್ಯಾನ್ಸ್ ಸದಾ ನೆರೆದಿರುತ್ತಾರೆ. ಅಪರೂಪಕ್ಕೊಮ್ಮೆ ಶಾರುಖ್ ಖಾನ್ ಅವರು ಮನೆಯ ಗ್ಯಾಲರಿಗೆ ಬಂದು ಕೈ ಬೀಸಿ ಹೋಗುತ್ತಾರೆ. ಇದನ್ನು ಕಣ್ತುಂಬಿಕೊಳ್ಳುವುದೇ ಫ್ಯಾನ್ಸ್​ಗೆ ಹಬ್ಬ. ಈಗ ಶಾರುಖ್ ಖಾನ್ ಅವರ ಮನ್ನತ್ ನಿವಾಸದ ಆವರಣಕ್ಕೆ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆ ಒಳಗೆ ಹೋಗುವ ಪ್ಲ್ಯಾನ್​ನಲ್ಲಿದ್ದರು ಎನ್ನಲಾಗಿದೆ. ಅವರನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ನೀಡಿದ್ದು ಕೇಸ್ ದಾಖಲಾಗಿದೆ.

ಸೆಲೆಬ್ರಿಟಿಗಳನ್ನು ಮೀಟ್ ಮಾಡೋಕೆ ಫ್ಯಾನ್ಸ್ ನಾನಾ ಕಸರತ್ತು ನಡೆಸುತ್ತಾರೆ. ಇದಕ್ಕಾಗಿ ಅವರು ಯಾವ ಹಂತಕ್ಕೆ ಹೋಗೋಕೂ ರೆಡಿ ಇರುತ್ತಾರೆ. ಈಗಲೂ ಹಾಗೆಯೇ ಆಗಿದೆ. ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಗುಜರಾತ್​ನಿಂದ ಇಬ್ಬರು ಬಂದಿದ್ದಾರೆ. ಮನ್ನತ್ ನಿವಾಸದ ಹೊರಗೆ ಅವರು ಶಾರುಖ್​ಗಾಗಿ ಕಾದು ನಿಂತಿದ್ದರು. ಆದರೆ, ಶಾರುಖ್ ಬರುವ ಸೂಚನೆ ಸಿಕ್ಕಿಲ್ಲ. ಹೀಗಾಗಿ, ಅವರು ಮನೆಯ ಗೋಡೆ ಏರಿ ನಿವಾಸದ ಆವರಣಕ್ಕೆ ಜಿಗಿದಿದ್ದಾರೆ!

ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಅವರನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಓರ್ವ 20 ವರ್ಷದವನು, ಮತ್ತೋರ್ವ 22 ವರ್ಷದವನು. ‘ನಾವು ಶಾರುಖ್ ಖಾನ್ ಅಭಿಮಾನಿಗಳು. ಅವರನ್ನು ಭೇಟಿ ಆಗೋಕೆ ಈ ರೀತಿ ಮಾಡಿದೆವು’ ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ‘ಮನ್ನತ್’ ನಿವಾಸಕ್ಕೆ ಕಳೆದ ವರ್ಷ ಹೊಸ ನೇಮ್​ಪ್ಲೇಟ್ ಹಾಕಿಸಲಾಗಿದೆ. ಇದು ವಜ್ರಖಚಿತವಾಗಿದ್ದು, ಶಾರುಖ್ ಪತ್ನಿ ಗೌರಿ ಖಾನ್ ಅವರೇ ಇದನ್ನು ಡಿಸೈನ್ ಮಾಡಿದ್ದಾರೆ.

ಇದನ್ನೂ ಓದಿ
Image
‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್: ಏಪ್ರಿಲ್​ನಿಂದ ಶೂಟಿಂಗ್; ಸಂಭಾವನೆ ಎಷ್ಟು?
Image
‘ಇದು ಡ್ಯಾನ್ಸ್ ಅಲ್ಲ ವ್ಯಾಯಾಮ’; ಡ್ಯಾನ್ಸ್ ಮಾಡಲು ಹೋಗಿ ನಗೆಪಾಟಲಿಗೀಡಾದ ಸಲ್ಮಾನ್ ಖಾನ್
Image
ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು
Image
134ನೇ ದಿನಕ್ಕೆ ಪೂರ್ಣಗೊಂಡ ‘ಹಿಂದಿ ಬಿಗ್ ಬಾಸ್​’; ಸ್ಟಾರ್​ಗಳನ್ನು ಹಿಂದಿಕ್ಕಿ ವಿನ್ ಆದ ಎಂಸಿ ಸ್ಟಾನ್

‘ಪಠಾಣ್​’ ಚಿತ್ರದಿಂದ ಶಾರುಖ್​​ಗೆ ಯಶಸ್ಸು

ಶಾರುಖ್ ಖಾನ್ ಅವರು ಗೆಲುವು ಕಾಣದೇ ಹಲವು ವರ್ಷಗಳೇ ಕಳೆದಿದ್ದವು. ಅವರ ನಟನೆಯ ‘ಪಠಾಣ್​’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಹಿಂದಿ ವರ್ಷನ್​ನಿಂದ 509 ಕೋಟಿ ರೂಪಾಯಿ ಗಳಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:09 am, Fri, 3 March 23

ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ