Allu Arjun: ‘ಪುಷ್ಪ 2’ ಚಿತ್ರದ ಎಲ್ಲ ಹಕ್ಕುಗಳಿಗೆ 1050 ಕೋಟಿ ರೂ. ಕೇಳ್ತಿದ್ದಾರಾ ಅಲ್ಲು ಅರ್ಜುನ್​?

Pushpa 2 | Kamaal R Khan: ಕಮಾಲ್​ ಆರ್. ಖಾನ್​ ಅವರು ಒಮ್ಮೆ ಜೈಲಿಗೆ ಹೋಗಿಬಂದರೂ ಸೈಲೆಂಟ್​ ಆಗಿಲ್ಲ. ಸದ್ಯ ಅವರು ‘ಪುಷ್ಪ 2’ ಚಿತ್ರದ ಬಗ್ಗೆ ಅಚ್ಚರಿಯ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ.

Allu Arjun: ‘ಪುಷ್ಪ 2’ ಚಿತ್ರದ ಎಲ್ಲ ಹಕ್ಕುಗಳಿಗೆ 1050 ಕೋಟಿ ರೂ. ಕೇಳ್ತಿದ್ದಾರಾ ಅಲ್ಲು ಅರ್ಜುನ್​?
ಅಲ್ಲು ಅರ್ಜುನ್
Follow us
ಮದನ್​ ಕುಮಾರ್​
|

Updated on: Mar 02, 2023 | 11:03 AM

2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಪುಷ್ಪ 2’ ಚಿತ್ರ ಮುಂಚೂಣಿಯಲ್ಲಿದೆ. ಅಲ್ಲು ಅರ್ಜುನ್​ (Allu Arjun) ನಟನೆಯ ಈ ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್​ ಅವರು ಅದ್ದೂರಿಯಾಗಿ ಈ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಈಗಾಗಲೇ ಶೂಟಿಂಗ್​ ಆರಂಭವಾಗಿದೆ. ಘಟಾನುಘಟಿ ಕಲಾವಿದರು ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಎಷ್ಟು ಕಮಾಯಿ ಮಾಡಬಹುದು ಎಂಬ ಕೌತುಕ ಸಿನಿಪ್ರಿಯರ ಮನದಲ್ಲಿದೆ. ಅಚ್ಚರಿ ಏನೆಂದರೆ, ಬಿಡುಗಡೆಗೂ ಮುನ್ನವೇ ‘ಪುಷ್ಪ 2’ ಚಿತ್ರದಿಂದ ಅಲ್ಲು ಅರ್ಜುನ್​ ಅವರು 1050 ಕೋಟಿ ರೂಪಾಯಿ ನಿರೀಕ್ಷಿಸುತ್ತಿದ್ದಾರೆ ಎಂದು ಕಮಾಲ್​ ಆರ್​. ಖಾನ್​ ಮಾಹಿತಿ (Kamaal R Khan) ಹಂಚಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಕಮಾಲ್​ ಆರ್​. ಖಾನ್​ ಅವರು ಆ್ಯಕ್ಟೀವ್​ ಆಗಿದ್ದಾರೆ. ಅವರಿವರ ಬಗ್ಗೆ ಇಲ್ಲಸಲ್ಲದ ಟ್ವೀಟ್​ ಮಾಡಿದ ಕಾರಣಕ್ಕೆ ಅವರು ಈಗಾಗಲೇ ಒಂದು ಬಾರಿ ಜೈಲಿಗೂ ಹೋಗಿಬಂದಿದ್ದಾರೆ. ಆದರೂ ಅವರು ಸೈಲೆಂಟ್​ ಆಗಿಲ್ಲ. ಸದ್ಯ ಅವರು ‘ಪುಷ್ಪ 2’ ಚಿತ್ರದ ಬಗ್ಗೆ ಅಚ್ಚರಿಯ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ
Image
‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​
Image
‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
Image
ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್​​ಗೆ ಯುಎಇ ಇಂದ ಸಿಕ್ತು ಗೋಲ್ಡನ್ ವೀಸಾ; ಇದರ ವಿಶೇಷತೆ ಏನು?

‘ಅಲ್ಲು ಅರ್ಜುನ್​ ಅವರು ‘ಪುಷ್ಪ 2’ ಚಿತ್ರದ ಎಲ್ಲ ಹಕ್ಕುಗಳಿಗೆ 1050 ಕೋಟಿ ರೂಪಾಯಿ ಕೇಳುತ್ತಿದ್ದಾರೆ. ‘ಆರ್​ಆರ್​ಆರ್​’ ಚಿತ್ರದ ಹಕ್ಕುಗಳು ಮಾರಾಟ ಆಗಿದ್ದು 750 ಕೋಟಿ ರೂಪಾಯಿಗಳಿಗೆ. ಅಂದರೆ, ತಮ್ಮ ಸಿನಿಮಾ ‘ಆರ್​ಆರ್​ಆರ್​’ ಚಿತ್ರಕ್ಕಿಂತಲೂ ದೊಡ್ಡದು ಎಂಬುದು ಅಲ್ಲು ಅರ್ಜುನ್​ ನಂಬಿಕೆ. ಸರಿ ಬಿಡಿ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಏಪ್ರಿಲ್ 8ರಂದು ‘ಪುಷ್ಪ 2’ ಟೀಸರ್​:

‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆಗಿದ್ದರಿಂದ ಅದರ ಸೀಕ್ವೆಲ್​ ಮೇಲೆ ನಿರೀಕ್ಷೆ ಜೋರಾಗಿದೆ. ಎರಡನೇ ಪಾರ್ಟ್​ಗೆ ಶೂಟಿಂಗ್​ ನಡೆಯುತ್ತಿದೆ. ಆದಷ್ಟು ಬೇಗ ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್​ 8ರಂದು ‘ಪುಷ್ಪ 2’ ಚಿತ್ರದ ಟೀಸರ್​ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೂ ಗಾಸಿಪ್​ ಬಲವಾಗಿ ಹಬ್ಬಿದೆ.

ಇದನ್ನೂ ಓದಿ: Allu Arjun: ‘ಪುಷ್ಪ 2’ ಚಿತ್ರದ ಶೂಟಿಂಗ್​ಗೆ ಬಂದ ಅಲ್ಲು ಅರ್ಜುನ್​; ಹೊಸ ಲುಕ್​ ನೋಡಿ ಫ್ಯಾನ್ಸ್​ ಫಿದಾ

ಏಪ್ರಿಲ್​ 8ರಂದು ಅಲ್ಲು ಅರ್ಜುನ್​ ಜನ್ಮದಿನ. ಆ ವಿಶೇಷ ದಿನದಂದು ಖಂಡಿತವಾಗಿಯೂ ನಿರ್ದೇಶಕ ಸುಕುಮಾರ್​ ಅವರು ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂಬುದು ಹಲವರ ನಂಬಿಕೆ. ಹಾಗಾಗಿ ಆ ದಿನಾಂಕದ ಮೇಲೆ ಕಣ್ಣಿಡಲಾಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆಗೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ