ಯೂಟ್ಯೂಬರ್ ಗಂಗವ್ವನಿಗೆ ಹೊಸ ಮನೆ ಕಟ್ಟಲು ಲಕ್ಷಾಂತರ ಹಣ ಸಹಾಯ ಮಾಡಿದ ನಾಗಾರ್ಜುನ

ತೆಲುಗಿನ ಜನಪ್ರಿಯ ಯೂಟ್ಯೂಬರ್, ಮಾಜಿ ಬಿಗ್​ಬಾಸ್ ಸ್ಪರ್ಧಿ ಗಂಗವ್ವ ಮನೆ ಕಟ್ಟಲು ನಟ ಅಕ್ಕಿನೇನಿ ನಾಗಾರ್ಜುನ ಲಕ್ಷಾಂತರ ಹಣ ಸಹಾಯ ಮಾಡಿದ್ದಾರೆ.

ಯೂಟ್ಯೂಬರ್ ಗಂಗವ್ವನಿಗೆ ಹೊಸ ಮನೆ ಕಟ್ಟಲು ಲಕ್ಷಾಂತರ ಹಣ ಸಹಾಯ ಮಾಡಿದ ನಾಗಾರ್ಜುನ
ಗಂಗವ್ವನ ಹೊಸ ಮನೆ
Follow us
ಮಂಜುನಾಥ ಸಿ.
|

Updated on: Mar 05, 2023 | 3:45 PM

ತೆಲುಗು ಯೂಟ್ಯೂಬ್ ರಂಗದಲ್ಲಿ ಗಂಗವ್ವನ ಹೆಸರು ಚಿರಪರಿಚಿತ. ಹಿರಿಯ ಯೂಟ್ಯೂಬರ್ ಆಗಿರುವ ಜೊತೆಗೆ ಅತ್ಯಂತ ಜನಪ್ರಿಯ ಯೂಟ್ಯೂಬರ್ ಸಹ ಆಗಿದ್ದಾರೆ ಗಂಗವ್ವ. ತೆಲುಗು ಬಿಗ್​ಬಾಸ್​ನಲ್ಲಿಯೂ ಪಾಲ್ಗೊಂಡಿದ್ದ ಗಂಗವ್ವ ಐದು ವಾರಗಳ ಕಾಲ ಮನೆಯಲ್ಲಿದ್ದು ಹಲವರ ಮನಸ್ಸು ಗೆದ್ದರು. ಜೊತೆಗೆ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರ ಗೆಳೆತನವನ್ನೂ ಸಂಪಾದಿಸಿದ್ದರು.

ಆಸು-ಪಾಸು 70ರ ವಯಸ್ಸಿನ ಯೂಟ್ಯೂಬರ್ ಗಂಗವ್ವ ಕಳೆದ ವರ್ಷಾಂತ್ಯದಲ್ಲಿ ತಮಗಾಗಿ ಒಂದು ಸ್ವಂತ ಮನೆ ಕಟ್ಟಿಸಿಕೊಂಡಿದ್ದು, ಈ ಮನೆ ಕಟ್ಟಲು ನಟ ನಾಗಾರ್ಜುನ ಆರ್ಥಿಕ ಸಹಾಯ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ತೆಲಂಗಾಣದ ಜಗಿತ್ಯಾಲ ಜಿಲ್ಲೆ, ಮಲ್ಯಾಲ ತಾಲ್ಲೂಕು ಲಂಬಾಡಿಪಲ್ಲಿ ಗ್ರಾಮದವರಾಗಿರುವ ಗಂಗವ್ವ ಗ್ರಾಮದಲ್ಲಿ ತಮಗಾಗಿ, ತಮ್ಮ ಕುಟುಂಬಕ್ಕಾಗಿ ಒಂದು ಹೊಸ ಮನೆ ಕಟ್ಟಿಸಿಕೊಂಡಿದ್ದಾರೆ. ಕಳೆದ ನವೆಂಬರ್​ನಲ್ಲಿ ತಮ್ಮ ಆಪ್ತರು, ತೆಲುಗಿನ ಜನಪ್ರಿಯ ಯೂಟ್ಯೂಬರ್​ಗಳನ್ನು ಆಹ್ವಾನಿಸಿ ಮನೆ ಗೃಹ ಪ್ರವೇಶ ಸಹ ಮಾಡಿದ್ದ್ದರು.

ಗಂಗವ್ವ, ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮನೆ ಕಟ್ಟಲು ಎಷ್ಟು ಖರ್ಚಾಯಿತು, ಹಣ ಹೊಂದಿಸಿದ್ದು ಹೇಗೆ? ನಟ ನಾಗಾರ್ಜುನ ಎಷ್ಟು ಹಣ ಕೊಟ್ಟರು ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮನೆ ಕಟ್ಟಲು 20 ಲಕ್ಷ ರುಪಾಯಿ ಖರ್ಚು ಮಾಡಿರುವುದಾಗಿ ಹೇಳಿರುವ ಗಂಗವ್ವ, ನಟ ನಾಗಾರ್ಜುನ ಏಳು ಲಕ್ಷ ರುಪಾಯಿ ಹಣವನ್ನು ಮನೆ ಕಟ್ಟಲೆಂದು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ತಾನು ಬಿಗ್​ಬಾಸ್​ನಲ್ಲಿ ಭಾಗವಹಿಸಿ ಐದು ವಾರ ಇದ್ದಿದ್ದಕ್ಕೆ ಸಂಭಾವನೆಯಾಗಿ ಹತ್ತು ಲಕ್ಷ ಹಣ ಕೊಟ್ಟಿದ್ದರು. ಎಲ್ಲವನ್ನೂ ಸೇರಿಸಿ ಮನೆ ಕಟ್ಟಿಸಿದ್ದಾಗಿ ಗಂಗವ್ವ ಹೇಳಿದ್ದಾರೆ.

ಬಿಗ್​ಬಾಸ್​ನಿಂದ ಎಲಿಮಿನೇಶನ್ ಆಗುವಾಗ ತನ್ನೂರಿನಲ್ಲಿ ತನಗೆ ಮನೆ ಕಟ್ಟುವ ಆಸೆಯಿದೆಯೆಂದು ಗಂಗವ್ವ ಹೇಳಿಕೊಂಡಿದ್ದರು. ಅಂತೆಯೇ ಈಗ ಗಂಗವ್ವ ಮನೆ ಕಟ್ಟುವ ಸಂದರ್ಭದಲ್ಲಿ ಬಿಗ್​ಬಾಸ್ ನಿರೂಪಕರೂ ಆಗಿರುವ ನಾಗಾರ್ಜುನ ಸಹಾಯ ಮಾಡಿದ್ದಾರೆ.

ತನ್ನೂರಿನಲ್ಲಿ ಕೂಲಿ ಕೆಲಸ, ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದ ಗಂಗವ್ವ 2016 ರಲ್ಲಿ ಯೂಟ್ಯೂಬ್ ವಿಡಿಯೋಗಳಿಂದ ಬಹಳ ಜನಪ್ರಿಯರಾದರು. ಅವರ ಅಳಿಯ ಶ್ರೀಕಾಂತ್ ಶ್ರೀರಾಮ್ ಅವರ ಒತ್ತಾಯದ ಮೇರೆಗೆ ಅವರು ಮಾಡುತ್ತಿದ್ದ ವಿಲೇಜ್ ಲೈಫ್ ಹೆಸರಿನ ಕಾಮಿಡಿ ಸರಣಿಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪ್ರೇಕ್ಷಕರಿಗೆ ಗಂಗವ್ವ ಮಾತನಾಡುವ ರೀತಿ, ಅವರ ತೆಲಂಗಾಣ ಭಾಷಾ ವಿಧಾನ ಬಹುವಾಗಿ ಇಷ್ಟವಾಗಿತ್ತು. 2017 ರಿಂದಾಚೆಗೆ ಯೂಟ್ಯೂಬ್ ವಿಡಿಯೋಗಳಲ್ಲಿ ನಟಿಸುವುದನ್ನೇ ಕಾಯಕ ಮಾಡಿಕೊಂಡರು.

ಅವರ ನಟನೆ, ಕಾಮಿಡಿ ಟೈಮಿಂಗ್ ಗುರುತಿಸಿ ಕೆಲವು ಸಿನಿಮಾಗಳಲ್ಲಿಯೂ ನಟಿಸಲು ಅವಕಾಶ ನೀಡಿಲಾಯ್ತು ಅಲ್ಲಿಯೂ ಗಂಗವ್ವ ಸೈ ಎನಿಸಿಕೊಂಡರು. 2019 ರಿಂದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಗಂಗವ್ವ, ರಾಮ್ ಪೋತಿನೇನಿ, ನಟ ಚಿರಂಜೀವಿ, ಅಕ್ಕಿನೇನಿ ನಾಗ ಚೈತನ್ಯ ಅವರುಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ