Mrunal Thakur: ಮೃಣಾಲ್ ಠಾಕೂರ್ಗೆ ಆಂಟಿ ಎಂದು ಕರೆದ ವ್ಯಕ್ತಿ; ಉತ್ತರಿಸದೆ ಸುಮ್ಮನಾದ ನಟಿ
ಕೆಲವೊಮ್ಮೆ ನೆಚ್ಚಿನ ಹೀರೋ/ಹೀರೋಯಿನ್ ಮಾಡಿದ ಪಾತ್ರ ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗುತ್ತದೆ. ನಿಜ ಜೀವನದಲ್ಲಿ ಅವರು ಅದೇ ರೀತಿ ಇರಬೇಕು ಎಂದು ಫ್ಯಾನ್ಸ್ ಬಯಸುತ್ತಾರೆ. ಆದರೆ, ಅದು ಸಾಧ್ಯವಿಲ್ಲ.

ನಟಿ ಮೃಣಾಲ್ ಠಾಕೂರ್ (Mrunal Thakur) ಬಗ್ಗೆ ಅಭಿಮಾನಿಗಳು ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ‘ಸೀತಾ ರಾಮಂ’ ಸಿನಿಮಾದಲ್ಲಿ (Sita Ramam) ಅವರು ಮಾಡಿರೋ ಪ್ರಿನ್ಸಸ್ ನೂರ್ ಜಹಾನ್ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಟ್ರೆಡಿಷನಲ್ ಲುಕ್ನಲ್ಲಿ ಅವರು ಎಲ್ಲರ ಮನ ಗೆದ್ದಿದ್ದರು. ಈಗ ಮೃಣಾಲ್ ಠಾಕೂರ್ ಅವರು ಬೋಲ್ಡ್ ಫೋಟೋಶೂಟ್ ಮೂಲಕ ಮಿಂಚಿದ್ದಾರೆ. ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವರನ್ನು ಕೆಲವರು ಆಂಟಿ ಎಂದು ಕರೆದಿದ್ದಾರೆ. ಈ ಕಮೆಂಟ್ಗಳಿಗೆ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ.
ಕೆಲವೊಮ್ಮೆ ನೆಚ್ಚಿನ ಹೀರೋ/ಹೀರೋಯಿನ್ ಮಾಡಿದ ಪಾತ್ರ ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗುತ್ತದೆ. ನಿಜ ಜೀವನದಲ್ಲಿ ಅವರು ಅದೇ ರೀತಿ ಇರಬೇಕು ಎಂದು ಫ್ಯಾನ್ಸ್ ಬಯಸುತ್ತಾರೆ. ಆದರೆ, ಅದು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಫ್ಯಾನ್ಸ್ಗೆ ಬೇಸರ ಆಗುತ್ತದೆ. ಇದೇ ಬೇಸರದಲ್ಲಿ ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಾರೆ. ಈಗ ಮೃಣಾಲ್ ಠಾಕೂರ್ಗೂ ಇದೇ ಆಗಿದೆ.
‘ಸೀತಾ ರಾಮಂ’ ಸಿನಿಮಾದಲ್ಲಿ ಮೃಣಾಲ್ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಈ ಸಿನಿಮಾ ನೋಡಿ ಅನೇಕರು ಫಿದಾ ಆದರು. ಮೃಣಾಲ್ ಅವರು ನಿಜ ಜೀವನದಲ್ಲೂ ಟ್ರೆಡಿಷನಲ್ ಆಗಿರಬೇಕು ಎಂದು ಅನೇಕರು ಬಯಸುತ್ತಿದ್ದಾರೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ಕೆಲವರು ಇದನ್ನು ಟ್ರೋಲ್ ಮಾಡಿದ್ದಾರೆ.
ಫಸ್ಟ್ ಲುಕ್ ಮ್ಯಾಗಜಿನ್ಗೆ ಮೃಣಾಲ್ ಫೋಟೋಶೂಟ್ ಮಾಡಿಸಿದ್ದಾರೆ. ಸಖತ್ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಬಹುತೇಕರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಒಂದು ವರ್ಗದ ಜನರು ಕೊಂಕು ತೆಗೆದಿದ್ದಾರೆ. ಮೃಣಾಲ್ ಅವರನ್ನು ಆಂಟಿ ಎಂದು ಕರೆದಿದ್ದಾರೆ. ಮೃಣಾಲ್ ಅವರು ಈ ರೀತಿಯ ಟ್ರೋಲ್ಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಮಗಿಷ್ಟವಾದದ್ದನ್ನು ಮಾಡುತ್ತಾರೆ. ಹೀಗಾಗಿ, ಅವರು ಈ ರೀತಿಯ ಕಮೆಂಟ್ಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ.
ಇದನ್ನೂ ಓದಿ: Mrunal Thakur: ಬಿಕಿನಿ ಫೋಟೋ ಪೋಸ್ಟ್ ಮಾಡಿದ ಮೃಣಾಲ್ ಠಾಕೂರ್; ‘ಹೀಗೇಕೆ ಆದ್ರಿ’ ಎಂದು ಕೇಳಿದ ಫ್ಯಾನ್ಸ್
View this post on Instagram
ಇದನ್ನೂ ಓದಿ: ಮತ್ತೆ ಬೋಲ್ಡ್ ಅವತಾರ ತಾಳಿದ ಮೃಣಾಲ್ ಠಾಕೂರ್; ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ
ಮೃಣಾಲ್ ಠಾಕೂರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಮರಾಠಿ ಸಿನಿಮಾ ಮೂಲಕ. 2014ರಲ್ಲಿ ರಿಲೀಸ್ ಆದ ‘ವಿಟೀ ದಾಂಡು’ ಅವರ ಮೊದಲ ಸಿನಿಮಾ. ಬಳಿಕ ಅವರು ಹಿಂದಿ ಚಿತ್ರರಂಗಕ್ಕೆ ಪರಿಚಯಗೊಂಡರು. ‘ಸೂಪರ್ 30’, ‘ಬಾಟ್ಲಾ ಹೌಸ್’ ಮೊದಲಾದ ಸಿನಿಮಾಗಳಲ್ಲಿ ಮೃಣಾಲ್ ನಟಿಸಿದ್ದಾರೆ. 2022ರಲ್ಲಿ ರಿಲೀಸ್ ಆದ ‘ಸೀತಾ ರಾಮಂ’ ಸಿನಿಮಾದಿಂದ ಅವರು ಗೆದ್ದರು. ಸದ್ಯ ನಾಲ್ಕು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




