11ನೇ ವಯಸ್ಸಿಗೆ ಕೋರ್ಟ್ ಮೇಟ್ಟಿಲೇರಿದ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್
Aaradhya Bachchan: ಆರಾಧ್ಯಗೆ ಈಗಿನ್ನೂ 11 ವರ್ಷ. ಬಚ್ಚನ್ ಕುಟುಂಬದ ಕುಡಿ ಎನ್ನುವ ಕಾರಣಕ್ಕೆ ಅವಳು ಹೆಚ್ಚು ಹೈಲೈಟ್ ಆಗುತ್ತಿದ್ದಾಳೆ.

ಸೆಲೆಬ್ರಿಟಿ ಮಕ್ಕಳು ಎನಿಸಿಕೊಳ್ಳೋದು ಶಾಪ ಹಾಗೂ ವರ ಎರಡೂ ಹೌದು. ಸ್ಟಾರ್ ಕಿಡ್ ಆದರೆ ಚಿತ್ರರಂಗದಲ್ಲಿ ಸುಲಭವಾಗಿ ಅವಕಾಶ ಸಿಗುತ್ತದೆ ಅನ್ನೋದು ಒಂದು ಕಡೆಯಾದರೆ, ಬೇಡಬೇಡವೆಂದರೂ ಮಾಧ್ಯಮದಲ್ಲಿ ಇವರ ಬಗ್ಗೆ ಸುದ್ದಿ ಪ್ರಸಾರ ಆಗುತ್ತದೆ. ಕೆಲವೊಮ್ಮೆ ಫೇಕ್ ಸುದ್ದಿಗಳು ಕೂಡ ಭರಪೂರವಾಗಿ ಹರಿದಾಡುತ್ತವೆ. ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಹಾಗೂ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ (Aaradhya Bachchan) ಕೂಡ ಸುದ್ದಿಯಲ್ಲಿದ್ದಾಳೆ. ಅವರ ಬಗ್ಗೆ ನಕಲಿ ಸುದ್ದಿ ಹರಿದಾಡಿತ್ತು. ಇದರ ವಿರುದ್ಧ ಅವಳು ಕೋರ್ಟ್ ಮೆಟ್ಟಿಲೇರಿದ್ದಾಳೆ.
ಆರಾಧ್ಯಗೆ ಈಗಿನ್ನೂ 11 ವರ್ಷ. ಬಚ್ಚನ್ ಕುಟುಂಬದ ಕುಡಿ ಎನ್ನುವ ಕಾರಣಕ್ಕೆ ಅವಳು ಹೆಚ್ಚು ಹೈಲೈಟ್ ಆಗುತ್ತಿದ್ದಾಳೆ. ತಾಯಿ ಐಶ್ವರ್ಯಾ ರೈ ಜೊತೆ ಅವರು ಅನೇಕ ಕಡೆಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಆರಾಧ್ಯ ಹೆಸರಲ್ಲಿ ಅನೇಕ ಫ್ಯಾನ್ಪೇಜ್ಗಳು ಸಿದ್ಧಗೊಂಡಿವೆ. ಇದರ ಜೊತೆ ಕೆಲವು ಯೂಟ್ಯೂಬ್ ಚಾನೆಲ್ಗಳು ವೀವ್ಸ್ ಗಿಟ್ಟಿಸಿಕೊಳ್ಳಲು ಆರಾಧ್ಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದವು. ಅವುಗಳ ವಿರುದ್ಧ ಆರಾಧ್ಯ ಈಗ ಕ್ರಮಕ್ಕೆ ಮುಂದಾಗಿದ್ದಾರೆ.
ದೆಹಲಿ ಹೈಕೋರ್ಟ್ನಲ್ಲಿ ತಮ್ಮ ಬಗ್ಗೆ ಈ ರೀತಿ ಸುದ್ದಿ ಪ್ರಕಟ ಆಗದಂತೆ ತಡೆ ನೀಡಬೇಕು ಎಂದು ಆರಾಧ್ಯ ಕೋರಿದ್ದಾಳೆ. ಈ ಪ್ರಕರಣದ ವಿಚಾರಣೆ ಇಂದು (ಏಪ್ರಿಲ್ 20) ನಡೆಯಲಿದೆ. ಸೆಲೆಬ್ರಿಟಿಗಳ ಬಗ್ಗೆ ಅನೇಕ ವದಂತಿಗಳು ಹಬ್ಬುತ್ತಲೇ ಇರುತ್ತವೆ. ಆದರೆ, ಅವರ ಮಕ್ಕಳ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹುಟ್ಟಿಕೊಂಡಾಗ ಅದನ್ನು ಅರಗಿಸಿಕೊಳ್ಳೋಕೆ ಬಚ್ಚನ್ ಕುಟುಂಬಕ್ಕೆ ಹಾಗೂ ಆರಾಧ್ಯಗೆ ಸಾಧ್ಯವಾಗಿಲ್ಲ. ಹೀಗಾಗಿ, ಕೋರ್ಟ್ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ: ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಇಬ್ಬರ ಬಂಧನ
‘ಇದನ್ನು ನಾನು ಸಹಿಸುವುದಿಲ್ಲ. ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿ. ಆದರೆ ನನ್ನ ಮಗಳು ಹಾಗಲ್ಲ. ಅವಳಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಿಮಗೆ ಏನಾದರೂ ಹೇಳಬೇಕಾದರೆ ನನ್ನ ಬಳಿ ಬಂದು ಹೇಳಿ’ ಎಂದು ಅಭಿಷೇಕ್ ಬಚ್ಚನ್ ಈ ಮೊದಲು ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯಾ ರೈ; ಸ್ಟಾರ್ ನಟನ ಚಿತ್ರಕ್ಕೆ ಸಹಿ
ಐಶ್ವರ್ಯಾ ರೈ ಅವರು ಸದ್ಯ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಏಪ್ರಿಲ್ 28ರಂದು ರಿಲೀಸ್ ಆಗುತ್ತಿದೆ. ಮಣಿರತ್ನಂ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಯಶಸ್ಸು ಕಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




