ಬ್ಯಾಕ್​ ಟು ಬ್ಯಾಕ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯಾ ರೈ; ಸ್ಟಾರ್ ನಟನ ಚಿತ್ರಕ್ಕೆ ಸಹಿ

ಸಿನಿಮಾ ಆಯ್ಕೆ ವಿಚಾರದಲ್ಲಿ ಐಶ್ವರ್ಯಾ ಆತುರ ಮಾಡುತ್ತಿಲ್ಲ. ತಮಗೆ ಸಿಕ್ಕ ಆಫರ್​​ಗಳೆಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಅಳೆದು ತೂಗಿ ಸಿನಿಮಾಗೆ ಸಹಿ ಹಾಕುತ್ತಿದ್ದಾರೆ.

ಬ್ಯಾಕ್​ ಟು ಬ್ಯಾಕ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯಾ ರೈ; ಸ್ಟಾರ್ ನಟನ ಚಿತ್ರಕ್ಕೆ ಸಹಿ
ಐಶ್ವರ್ಯಾ ರೈ-ಅಜಿತ್ ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 18, 2023 | 6:30 AM

ನಟಿ ಐಶ್ವರ್ಯಾ ರೈ (Aishwarya Rai) ಅವರು ಇತ್ತೀಚೆಗೆ ಕುಟುಂಬದ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಸಿನಿಮಾ ಕೆಲಸಗಳತ್ತ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಿನಿಮಾ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್​ 1’ ಚಿತ್ರದಲ್ಲಿ (Ponniyin Selvan: I Movie) ನಟಿಸಿ ಐಶ್ವರ್ಯಾ ಗಮನ ಸೆಳೆದಿದ್ದರು. ಈಗ ಅವರು ಮತ್ತೊಂದು ತಮಿಳು ಚಿತ್ರಕ್ಕೆ ಸಹಿ ಹಾಕಲು ರೆಡಿ ಆಗಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಸಿನಿಮಾ ಆಯ್ಕೆ ವಿಚಾರದಲ್ಲಿ ಐಶ್ವರ್ಯಾ ಆತುರ ಮಾಡುತ್ತಿಲ್ಲ. ತಮಗೆ ಸಿಕ್ಕ ಆಫರ್​​ಗಳೆಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಅಳೆದು ತೂಗಿ ಸಿನಿಮಾಗೆ ಸಹಿ ಹಾಕುತ್ತಿದ್ದಾರೆ. ಈಗ ಅಜಿತ್ ಕುಮಾರ್ ನಟನೆಯ ‘ಅಜಿತ್ 62’ ಸಿನಿಮಾಗೆ ಐಶ್ವರ್ಯಾ ರೈ ನಾಯಕಿ ಆಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಅಜಿತ್ ಕುಮಾರ್ ಅವರು ‘ತುನಿವು’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಎನಿಸಿಕೊಂಡಿದೆ. ‘ವಾರಿಸು’ ಚಿತ್ರದಿಂದ ಸ್ಪರ್ಧೆ ಎದುರಿಸಿದ ಹೊರತಾಗಿಯೂ ಈ ಚಿತ್ರ ಗೆಲುವು ಕಂಡಿದೆ. ಈಗ ‘ಅಜಿತ್ 62’ನೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಯನತಾರಾ ಪತಿ ವಿಘ್ನೇಶ್ ಶಿವನ್ ಅವರು ಡೈರೆಕ್ಷನ್ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’-‘ವಾರಿಸು’ ಮಧ್ಯೆ ಸಮಬಲದ ಫೈಟ್; ಯಾವ ಚಿತ್ರದ ಕಲೆಕ್ಷನ್ ಎಷ್ಟು?
Image
ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಕಂಬ್ಯಾಕ್; ಖ್ಯಾತ ನಿರ್ದೇಶಕನ ಜತೆ ಸಿನಿಮಾ
Image
Sapthami Gowda: ಬಾಲಿವುಡ್​ಗೆ ಕಾಲಿಟ್ಟ ಸಪ್ತಮಿ ಗೌಡ; ವಿವೇಕ್​ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಲ್ಲಿ ‘ಕಾಂತಾರ’ ನಟಿ
Image
ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’ ಚಿತ್ರ ಹಿಂದಿಕ್ಕಿದ ವಿಜಯ್ ಸಿನಿಮಾ ‘ವಾರಿಸು’

ಮೂಲಗಳ ಪ್ರಕಾರ ಐಶ್ವರ್ಯಾ ರೈ ಅವರ ಜತೆ ಒಂದು ಹಂತದ ಮಾತುಕತೆ ನಡೆದಿದೆ. ಕಥೆ ಹಾಗೂ ಪಾತ್ರವನ್ನು ಐಶ್ವರ್ಯಾ ರೈ ಅವರು ಇಷ್ಟಪಟ್ಟಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಸಿಗಲಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’-‘ವಾರಿಸು’ ಮಧ್ಯೆ ಸಮಬಲದ ಫೈಟ್; ಯಾವ ಚಿತ್ರದ ಕಲೆಕ್ಷನ್ ಎಷ್ಟು?

‘ಅಜಿತ್ 62’ ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಹೀಗಾಗಿ ಗ್ರ್ಯಾಂಡ್ ಆಗಿ ಈ ಚಿತ್ರವನ್ನು ಲಾಂಚ್ ಮಾಡಲು ಲೈಕಾ ಪ್ರೊಡಕ್ಷನ್ ಸಂಸ್ಥೆ ಆಲೋಚನೆ ಮಾಡಿದೆ. ಈ ವಿಚಾರ ಕೇಳಿ ಅಜಿತ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಅಜಿತ್ ಅವರು ರಗಡ್ ಅವತಾರ ತಾಳಲಿದ್ದಾರೆ. ಕಾಮಿಡಿ-ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್