AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ಜೂ.16ಕ್ಕೆ ‘ಆದಿಪುರುಷ್​’ ರಿಲೀಸ್​ ಖಚಿತ; ಪ್ರಭಾಸ್​ ಫ್ಯಾನ್ಸ್​ಗೆ ಸಮಾಧಾನ ತಂದ ಚಿತ್ರತಂಡದ ಸ್ಪಷ್ಟನೆ

Adipurush Release Date: ಜೂನ್​ 16ರಂದು ‘ಆದಿಪುರುಷ್​’ ಸಿನಿಮಾ ಬಿಡುಗಡೆ ಆಗಲಿದೆ ಎಂಬುದನ್ನು ‘ಆದಿಪುರುಷ್​’ ಟೀಮ್​ ಖಚಿತ ಪಡಿಸಿದೆ. ಈ ಸುದ್ದಿ ಕೇಳಿ ಪ್ರಭಾಸ್​ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

Adipurush: ಜೂ.16ಕ್ಕೆ ‘ಆದಿಪುರುಷ್​’ ರಿಲೀಸ್​ ಖಚಿತ; ಪ್ರಭಾಸ್​ ಫ್ಯಾನ್ಸ್​ಗೆ ಸಮಾಧಾನ ತಂದ ಚಿತ್ರತಂಡದ ಸ್ಪಷ್ಟನೆ
ಪ್ರಭಾಸ್
TV9 Web
| Edited By: |

Updated on:Jan 17, 2023 | 9:09 PM

Share

ಪ್ರಭಾಸ್​ (Prabhas) ನಟನೆಯ ‘ಆದಿಪುರುಷ್​’ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರವನ್ನು ದೊಡ್ಡ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2023ರ ಜನವರಿ 12ರಂದು ‘ಆದಿಪುರುಷ್​’ (Adipurush Movie) ಬಿಡುಗಡೆ ಆಗಬೇಕಿತ್ತು. ಆದರೆ ಕಳೆದ ವರ್ಷ ಬಿಡುಗಡೆ ಆದ ಟೀಸರ್​ಗೆ ಸಿಕ್ಕಾಪಟ್ಟೆ ನೆಗೆಟಿವ್​ ಪ್ರತಿಕ್ರಿಯೆ ಸಿಕ್ಕ ಕಾರಣ ಚಿತ್ರಕ್ಕೆ ಕೆಲವು ಬದಲಾವಣೆಗಳನ್ನು ಮಾಡುವುದು ಅನಿವಾರ್ಯ ಆಯಿತು. ಅಲ್ಲಿಂದೀಚೆಗೆ ‘ಆದಿಪುರುಷ್​’ ರಿಲೀಸ್​ ದಿನಾಂಕದ (Adipurush Release Date) ಬಗ್ಗೆ ಅನುಮಾನ ವ್ಯಕ್ತವಾಗುತ್ತಲೇ ಇದೆ. ಅದಕ್ಕೀಗ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ. ಜೂನ್​ 16ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದನ್ನು ‘ಆದಿಪುರುಷ್​’ ಟೀಮ್​ ಖಚಿತಪಡಿಸಿದೆ.

ಜೂನ್​ 16ಕ್ಕೆ ‘ಆದಿಪುರುಷ್​’ ಸಿನಿಮಾ ರಿಲೀಸ್​ ಆಗುವುದು ಅನುಮಾನ ಎಂದು ಇತ್ತೀಚೆಗೆ ಕೆಲವರು ಗಾಸಿಪ್​ ಹಬ್ಬಿಸಿದ್ದರು. ಈ ಸಿನಿಮಾದ ವಿಎಫ್​ಎಕ್ಸ್​ ಕೆಲಸಗಳು ಸಾಕಷ್ಟು ಬಾಕಿ ಇರುವುದರಿಂದ ಅಂದುಕೊಂಡ ದಿನಾಂಕದಲ್ಲಿ ಚಿತ್ರವನ್ನು ತೆರೆಕಾಣಿಸಲು ಸಾಧ್ಯವಿಲ್ಲ ಎಂದು ಗಾಳಿ ಸುದ್ದಿ ಹರಡಿಸಲಾಗಿತ್ತು. ಅದು ಪ್ರಭಾಸ್​ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿತ್ತು. ಆದರೆ ಈಗ ಸ್ವತಃ ಚಿತ್ರತಂಡವೇ ಎಲ್ಲ ಗಾಸಿಪ್​ಗಳಿಗೆ ತೆರೆ ಎಳೆದಿದೆ.

ಇದನ್ನೂ ಓದಿ
Image
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
Image
Puneetha Parva: ‘ಮಿಸ್​ ಯೂ ಅಪ್ಪು’: ಪುನೀತ ಪರ್ವ ವೇದಿಕೆಯಲ್ಲಿ ‘ಪವರ್​ ಸ್ಟಾರ್​’ಗೆ ನುಡಿ ನಮನ ಸಲ್ಲಿಸಿದ ಗಣ್ಯರು
Image
‘ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ’; ‘ಪುನೀತ ಪರ್ವ’ ವೇದಿಕೆ ಮೇಲೆ ರಾಘಣ್ಣ ಭಾವುಕ ನುಡಿ
Image
Puneetha Parva: ‘ಪುನೀತ ಪರ್ವ’ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ; ಅರಮನೆ ಮೈದಾನದಲ್ಲಿ ತಾರೆಯರ ಸಂಗಮ

ಇದನ್ನೂ ಓದಿ: Adipurush: ರಾವಣನ ಗಡ್ಡಕ್ಕೆ ಗ್ರಾಫಿಕ್ಸ್​ ಮೂಲಕ ಶೇವಿಂಗ್​; ‘ಆದಿಪುರುಷ್​’ ಚಿತ್ರಕ್ಕೆ ಎಂಥ ಗತಿ ಬಂತು

ನಿರ್ದೇಶಕ ಓಂ ರಾವತ್​ ಅವರು ಹೊಸ ಪೋಸ್ಟರ್​ ಹಂಚಿಕೊಂಡಿದ್ದಾರೆ. ಇನ್ನು 150 ದಿನ ಬಾಕಿ ಇದೆ ಎಂದು ಈ ಪೋಸ್ಟರ್​ನಲ್ಲಿ ಬರೆದಿರುವುದು ಹೈಲೈಟ್​ ಆಗಿದೆ. ಪ್ರಭಾಸ್​ ಅಭಿಮಾನಿಗಳ ಬಳಗದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ. ಈ ಸಿನಿಮಾ ಬಗ್ಗೆ ಕಾಯುತ್ತಿರುವುದಾಗಿ ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಆದಿಪುರುಷ್​​’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್​ ಆದೇಶ

ರಾಮಾಯಣದ ಕಥೆಯನ್ನು ಇಟ್ಟುಕೊಂಡು ‘ಆದಿಪುರುಷ್​’ ಸಿನಿಮಾ ಮಾಡಲಾಗುತ್ತಿದೆ. ರಾಮನ ಪಾತ್ರವನ್ನು ಪ್ರಭಾಸ್​ ಮಾಡುತ್ತಿದ್ದರೆ, ಸೀತೆಯಾಗಿ ಕೃತಿ ಸನೋನ್​ ನಟಿಸುತ್ತಿದ್ದಾರೆ. ರಾವಣನ ಪಾತ್ರವನ್ನು ಸೈಫ್​ ಅಲಿ ಖಾನ್​ ಮಾಡುತ್ತಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್​ನಲ್ಲಿ ರಾವಣನ ಲುಕ್​ ನೋಡಿ ನೆಟ್ಟಿಗರು ಅಪಸ್ವರ ತೆಗೆದಿದ್ದರು.

‘ಆದಿಪುರುಷ್​ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ‘ಆದಿಪುರುಷ್​’ ಚಿತ್ರ ಜೂನ್​ 16ರಂದು ರಿಲೀಸ್​ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ’ ಎಂದು ಓಂ ರಾವತ್​ ಈ ಹಿಂದೆ ಟ್ವೀಟ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:09 pm, Tue, 17 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್