AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ರಾವಣನ ಗಡ್ಡಕ್ಕೆ ಗ್ರಾಫಿಕ್ಸ್​ ಮೂಲಕ ಶೇವಿಂಗ್​; ‘ಆದಿಪುರುಷ್​’ ಚಿತ್ರಕ್ಕೆ ಎಂಥ ಗತಿ ಬಂತು

Saif Ali Khan | Prabhas: ‘ಆದಿಪುರುಷ್​’ ಚಿತ್ರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆಂಜನೇಯ ಮತ್ತು ವಾನರ ಸೇನೆಯ ಲುಕ್​ ಕೂಡ ಬದಲಾಗುವ ಸಂಭವ ಇದೆ.

Adipurush: ರಾವಣನ ಗಡ್ಡಕ್ಕೆ ಗ್ರಾಫಿಕ್ಸ್​ ಮೂಲಕ ಶೇವಿಂಗ್​; ‘ಆದಿಪುರುಷ್​’ ಚಿತ್ರಕ್ಕೆ ಎಂಥ ಗತಿ ಬಂತು
ಸೈಫ್ ಅಲಿ ಖಾನ್
TV9 Web
| Edited By: |

Updated on: Nov 15, 2022 | 2:52 PM

Share

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಭಾಸ್​ (Prabhas) ನಟನೆಯ ‘ಆದಿಪುರುಷ್​’ ಚಿತ್ರ 2023ರ ಜನವರಿಯಲ್ಲಿ ರಿಲೀಸ್​ ಆಗುವುದರಲ್ಲಿತ್ತು. ಆದರೆ ಈಗ ಈ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ ಏನೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಸಿನಿಮಾದಲ್ಲಿ ಕಳಪೆ ಗ್ರಾಫಿಕ್ಸ್​ ಇದೆ ಎಂದು ಸಿನಿಪ್ರಿಯರು ಕಟು ಟೀಕೆ ಮಾಡಿದ್ದಾರೆ. ಟೀಸರ್​ ಬಿಡುಗಡೆ ಆದ ನಂತರ ಈ ಚಿತ್ರ ಸಿಕ್ಕಾಪಟ್ಟೆ ಟ್ರೋಲ್​ ಆಗಿದೆ. ಅದರಲ್ಲೂ ರಾವಣನ ಪಾತ್ರ ನೋಡಿದ ಬಹುತೇಕರು ಅಸಮಾಧಾನ ಹೊರಹಾಕಿದ್ದಾರೆ. ಸೈಫ್​ ಅಲಿ ಖಾನ್​ (Saif Ali Khan) ನಿರ್ವಹಿಸಿರುವ ರಾವಣನ ಪಾತ್ರದ ಗೆಟಪ್​ ಬಗ್ಗೆ ತುಂಬ ಟೀಕೆ ವ್ಯಕ್ತವಾಗಿದೆ. ಅದಕ್ಕೆ ಒಂದು ಪರಿಹಾರ ಕಂಡುಕೊಳ್ಳಲು ‘ಆದಿಪುರುಷ್​’ (Adipurush) ತಂಡ ನಿರ್ಧರಿಸಿದೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಟೀಸರ್​ ನೋಡಿ ಬಹುತೇಕರಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಆದಿಪುರುಷ್​’ ಚಿತ್ರದಲ್ಲೀಗ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ರಾವಣನ ಗೆಟಪ್​ ಬದಲಿಸಲು ಸರ್ಕಸ್​ ನಡೆಯುತ್ತಿದೆ. ಟೀಸರ್​ನಲ್ಲಿ ರಾವಣನ ಪಾತ್ರಕ್ಕೆ ಉದ್ದ ಗಡ್ಡ ಇತ್ತು. ಅದು ಅಲ್ಲಾವುದ್ದೀನ್​ ಖಿಲ್ಜಿಯ ಗಡ್ಡದ ರೀತಿ ಕಾಣುತ್ತಿದೆ ಎಂದು ಟ್ರೋಲ್​ ಮಾಡಲಾಗಿತ್ತು. ಆ ಗಡ್ಡಕ್ಕೀಗ ಮುಕ್ತಿ ಕೊಡಿಸಲು ನಿರ್ಧರಿಸಲಾಗಿದೆ. ಹಾಗಂತ ಸೈಫ್​ ಅಲಿ ಖಾನ್​ ಅವರು ಹೊಸದಾಗಿ ಶೂಟಿಂಗ್​ನಲ್ಲಿ ಭಾಗಿ ಆಗುವುದಿಲ್ಲ. ಬದಲಿಗೆ, ಗ್ರಾಫಿಕ್ಸ್​ ಮೂಲಕ ಅವರ ಗಡ್ಡಕ್ಕೆ ಕ್ಲೀನ್​ ಶೇವ್​ ಮಾಡಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇನ್ನೂ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆಂಜನೇಯ ಮತ್ತು ವಾನರ ಸೇನೆಯ ಲುಕ್​ ಕೂಡ ಬದಲಾಗುವ ಸಂಭವ ಇದೆ. ಇದಕ್ಕೆಲ್ಲ ಗ್ರಾಫಿಕ್ಸ್​ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಪ್ರೇಕ್ಷಕರಿಗೆ ಈ ಚಿತ್ರವನ್ನು ಉತ್ತಮವಾಗಿ ಕಟ್ಟಿಕೊಡಬೇಕು ಎಂಬ ಕಾರಣಕ್ಕಾಗಿ ನಿರ್ದೇಶಕ ಓಂ ರಾವತ್​ ಅವರು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದ್ದರ ಬಗ್ಗೆ ಅವರು ಇತ್ತೀಚೆಗೆ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ
Image
ಅಯೋಧ್ಯೆ ರಾಮ ಮಂದಿರದ ಅರ್ಚಕರಿಂದಲೂ ‘ಆದಿಪುರುಷ್​’ ಚಿತ್ರಕ್ಕೆ ವಿರೋಧ; ಬ್ಯಾನ್ ಮಾಡಲು ಆಗ್ರಹ
Image
Adipurush: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​: ಎಲ್ಲ ಬಿಟ್ಟು ಯೂಟ್ಯೂಬ್​ ಮೇಲೆ ಆರೋಪ ಹೊರಿಸಿದ ನಿರ್ದೇಶಕ
Image
Prabhas: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​; ‘ಈ ಕೆಲಸ ನಾವು ಮಾಡಿಲ್ಲ’ ಎಂದು ಪ್ರಕಟಣೆ ನೀಡಿದ ಖ್ಯಾತ ಸಂಸ್ಥೆ
Image
Prabhas: ರಾಮಾಯಣ ಆಧಾರಿತ ‘ಆದಿಪುರುಷ್’ ಚಿತ್ರಕ್ಕೆ ಟ್ರೋಲ್​ ಕಾಟ;​ ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಏನು?

‘ಆದಿಪುರುಷ್​ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ‘ಆದಿಪುರುಷ್​’ ಚಿತ್ರ ಜೂನ್​ 16ರಂದು ರಿಲೀಸ್​ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ’ ಎಂದು ಓಂ ರಾವತ್​ ಪೋಸ್ಟ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!