ಕಾಜೋಲ್ ಅಭಿನಯದ ‘ಸಲಾಮ್ ವೆಂಕಿ’ ಚಿತ್ರದ ಟ್ರೈಲರ್ ಬಿಡುಗಡೆ; ಅತಿಥಿ ಪಾತ್ರದಲ್ಲಿ ಆಮಿರ್ ಖಾನ್
‘ಸಲಾಮ್ ವೆಂಕಿ'(salaam venky)ಟ್ರೈಲರ್ ಬಿಡುಗಡೆಯಾಗಿದ್ದು, ಕಾಜೋಲ್(kajol)ವಿಕಲಚೇತನ ಮಗನನ್ನು ನೋಡಿಕೊಳ್ಳುವ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಅವರು ಗುರುವಾರ (ನವೆಂಬರ್ 10) ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಚಿತ್ರದ ಮೊದಲ ಪೊಸ್ಟ್ ಹಂಚಿಕೊಳ್ಳುವ ಮೂಲಕ ನವೆಂಬರ್ 14 ರಂದು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ವಿಚಾರವನ್ನು ಬಹಿರಂಗಪಡಿಸಿದ್ದರು.
ಕಾಜೋಲ್(kajol)ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸಲಾಮ್ ವೆಂಕಿ'(salaam venky)ಚಿತ್ರದ ಟ್ರೈಲರ್ ಸೋಮವಾರ (ನವೆಂಬರ್ 14) ಮಧ್ಯಾಹ್ನ ಬಿಡುಗಡೆಯಾಗಿದೆ. ಲಕ್ಷಾಂತರ ಅಭಿಮಾನಿಗಳು ಟ್ರೈಲರ್ ವೀಕ್ಷಣೆ ಮಾಡಿದ್ದಾರೆ. ಚಿತ್ರದಲ್ಲಿ ವಿಶಾಲ್ ಜೇತ್ವಾ, ರಾಹುಲ್ ಬೋಸ್, ರಾಜೀವ್ ಖಂಡೇಲ್ವಾಲ್, ಅಹಾನಾ ಕುಮ್ರಾ ಮತ್ತು ಪ್ರಕಾಶ್ರಾಜ್ ಕೂಡ ನಟಿಸಿದ್ದಾರೆ. ಟ್ರೇಲರ್ ಕೊನೆಯಲ್ಲಿ ಆಮಿರ್ ಖಾನ್ ಅವರು ಅತಿಥಿ ಪಾತ್ರ ಕಾಣಿಸಿದೆ.
ಕಾಜೋಲ್ ಸುಜಾತಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶಾಲ್ ಜೇತ್ವಾ ವೆಂಕಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ವೆಂಕಿಯು ವಿಲ್ಚೇರ್ ಮೇಲೆ ಕುಳಿತಿದ್ದಾನೆ. ತಾಯಿ ಸುಜಾತಾ, ಮಗ ವೆಂಕಿಯ ಜೀವನದ ಭಾಗವಾಗಿದ್ದಾಳೆ. ಟ್ರೇಲರ್ನಲ್ಲಿ ವೆಂಕಿಯು ಅವನ ಕೊನೆಯ ಬಯಕೆಯನ್ನು ಹೇಳುತ್ತಾನೆ. ಅದು ಏನು ಎಂಬುದು ಬಹಿರಂಗವಾಗಿಲ್ಲ. ಅದರೆ ಸುಜಾತಾ ಅದಕ್ಕೆ ನಿರಾಕರಿಸುತ್ತಾಳೆ. ತಾಯಿ-ಮಗನ ದೃಶ್ಯಗಳು ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸುತ್ತವೆ.
ಇದನ್ನೂ ಓದಿ:Kajol: ಒಟಿಟಿ ಜಗತ್ತಿಗೆ ನಟಿ ಕಾಜೋಲ್ ಎಂಟ್ರಿ; ಪ್ರತಿ ಎಪಿಸೋಡ್ಗೆ ಪಡೆಯುವ ಸಂಭಾವನೆ ಇಷ್ಟೊಂದಾ?
ಸುಜಾತಾ ಮತ್ತು ಅವಳ ಮಗ ವೆಂಕಿ ಜೀವನದಲ್ಲಿ ನಡೆಯಬಹುದಾದ ನೋವು ಹಾಗೂ ಅದನ್ನು ನಗುವಿನ ಮೂಲಕ ಹೇಗೆ ಮರೆಯಬೇಕು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ನೈಜ ಕಥೆಯನ್ನಾಧರಿಸಿದ ಈ ಸಿನಿಮಾದ ಟ್ರೈಲರ್ಗೆ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯೊಬ್ಬರು ‘ತುಂಬಾ ಹೃದಯ ಸ್ಪರ್ಶಿಯಾಗಿದೆ, ಸಿನಿಮಾ ನೋಡಲು ಕಾಯುತ್ತಿದ್ದೇನೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸಿನಿಮಾವನ್ನು ರೇವತಿ ನಿರ್ದೇಶಿಸಿದ್ದು, ಸೂರಜ್ ಸಿಂಗ್ ಹಾಗೂ ಶ್ರದ್ಧಾ ಅಗರ್ವಾಲ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್ 9ರಂದು ತೆರೆಯ ಮೇಲೆ ಬರಲಿದ್ದು, ಬಾಕ್ಸ್ಆಫೀಸ್ನಲ್ಲಿ ಎಷ್ಟರ ಮಟ್ಟಿಗೆ ಕಮಾಯಿ ಮಾಡುತ್ತದೆ ಎಂದು ಕಾದುನೋಡಬೇಕಾಗಿದೆ.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ