AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajol: ಒಟಿಟಿ ಎಂಟ್ರಿ ಬಗ್ಗೆ ಕಡೆಗೂ ನಿಜ ಒಪ್ಪಿಕೊಂಡ ನಟಿ ಕಾಜೋಲ್​; ಹೆಚ್ಚಿತು ಫ್ಯಾನ್ಸ್​ ನಿರೀಕ್ಷೆ

Kajol | Web Series: ಕಾಜೋಲ್​ ಅವರ ಹೊಸ ಪ್ರಯತ್ನಕ್ಕೆ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಒಟಿಟಿ ಎಂಟ್ರಿ ಬಗ್ಗೆ ಹೊರಬಿದ್ದಿರುವ ಸುದ್ದಿ ಕೇಳಿ ಅಭಿಮಾನಿಗಳು ಸಖತ್​ ಖುಷಿ​ ಆಗಿದ್ದಾರೆ.

Kajol: ಒಟಿಟಿ ಎಂಟ್ರಿ ಬಗ್ಗೆ ಕಡೆಗೂ ನಿಜ ಒಪ್ಪಿಕೊಂಡ ನಟಿ ಕಾಜೋಲ್​; ಹೆಚ್ಚಿತು ಫ್ಯಾನ್ಸ್​ ನಿರೀಕ್ಷೆ
ಕಾಜೋಲ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 18, 2022 | 3:19 PM

ಬಾಲಿವುಡ್​ನ ಸ್ಟಾರ್​ ನಟಿ ಕಾಜೋಲ್​ (Kajol) ಅವರು ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಒಟಿಟಿ (OTT) ಜಗತ್ತಿಗೆ ಕಾಲಿಡುತ್ತಾರೆ ಎಂಬ ಗುಸುಗುಸು ಇತ್ತೀಚೆಗೆ ಹಬ್ಬಿತ್ತು. ಆ ಬಗ್ಗೆ ಯಾರೂ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಈಗ ಸ್ವತಃ ಕಾಜೋಲ್​ ಅವರು ಆ ಕುರಿತು ಮಾತನಾಡಿದ್ದಾರೆ. ಅದು ಕೂಡ ಒಂದು ವಿಶೇಷವಾದ ಪ್ರೋಮೋ ಹಂಚಿಕೊಳ್ಳುವ ಮೂಲಕ ಎಂಬುದು ವಿಶೇಷ. ಈಗಾಗಲೇ ಅನೇಕ ನಟಿಯರು ಒಟಿಟಿ ಜಗತ್ತಿಗೆ ಕಾಲಿಟ್ಟು ಯಶಸ್ಸು ಕಂಡಿದ್ದಾರೆ. ಈಗ ಕಾಜೋಲ್​ ಸರದಿ. ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ (Disney Plus Hotstar) ಮೂಲಕ ಅವರು ಒಟಿಟಿಗೆ ಎಂಟ್ರಿ ನೀಡುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಾಗಿದೆ.

1995ರಲ್ಲಿ ಶಾರುಖ್​ ಖಾನ್ ಮತ್ತು ಕಾಜೋಲ್​ ಅವರು ಜೋಡಿಯಾಗಿ ನಟಿಸಿದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾ ಬಿಡುಗಡೆಯಾಗಿ ಜಯಭೇರಿ ಬಾರಿಸಿತ್ತು. ಆ ಸಿನಿಮಾದ ಒಂದು ದೃಶ್ಯವನ್ನು ಅನುಕರಿಸುವ ರೀತಿಯಲ್ಲಿ ಈ ಹೊಸ ಒಟಿಟಿ ಶೋ ಪ್ರೋಮೋ ಮೂಡಿಬಂದಿದೆ. ಆದರೆ ಇದರಲ್ಲಿ ಹೆಚ್ಚು ಮಾಹಿತಿ ಬಿಟ್ಟುಕೊಡಲಾಗಿಲ್ಲ. ಕೇವಲ ಕೌತುಕ ಮೂಡಿಸಲಷ್ಟೇ ಈ ಪ್ರೋಮೋ ಯಶಸ್ವಿ ಆಗಿದೆ.

ಕಾಜೋಲ್​ ಅವರು ನಟಿಸಲಿರುವ ವೆಬ್​ ಸಿರೀಸ್ ಯಾವುದು? ಅದರ ಶೀರ್ಷಿಕೆ ಏನು? ಅವರ ಜೊತೆ ಬೇರೆ ಯಾರೆಲ್ಲ ನಟಿಸಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಮೂಲಗಳ ಪ್ರಕಾರ, ಮುಂಬೈನಲ್ಲಿ ಜುಲೈ 11ರಂದು ಇದರ ಶೂಟಿಂಗ್​ ಆರಂಭ ಆಗಿದೆ. ಇದರ ಪ್ರತಿ ಎಪಿಸೋ​ಡ್​ಗೆ ಕಾಜೋಲ್​ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಕನಿಷ್ಠ 8 ಎಪಿಸೋಡ್​ ಇದ್ದರೆ, 40 ಕೋಟಿ ರೂಪಾಯಿ ಸಿಕ್ಕಂತೆ ಆಗುತ್ತದೆ. ಆದರೆ ಸಂಭಾವನೆ ವಿಚಾರದ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬರೀ ಅಂತೆ-ಕಂತೆಗಳು ಹರಿದಾಡುತ್ತಿವೆ.

ಇದನ್ನೂ ಓದಿ
Image
Bhool Bhulaiyaa 2: ಒಟಿಟಿಗೆ ಬರ್ತಿದೆ ‘ಭೂಲ್​ ಭುಲಯ್ಯ 2’; ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ಗೆ ಸಿಹಿ ಸುದ್ದಿ​ ನೀಡಿದ ನೆಟ್​ಫ್ಲಿಕ್ಸ್​
Image
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
Image
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ಸದ್ಯ ಕಾಜೋಲ್​ ಹಂಚಿಕೊಂಡಿರುವ ಪ್ರೋಮೋ ವೈರಲ್​ ಆಗಿದೆ. ಅಭಿಮಾನಿಗಳು ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಕಾಜೋಲ್​ ಅವರ ಹೊಸ ಪ್ರಯತ್ನಕ್ಕೆ ಅನೇಕ ಸೆಲೆಬ್ರಿಟಿಗಳು ಕೂಡ ಅಭಿನಂದನೆ ತಿಳಿಸುತ್ತಿದ್ದಾರೆ.

Published On - 3:19 pm, Mon, 18 July 22

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ