‘ಸಲಾಮ್​ ವೆಂಕಿ’ ಫಸ್ಟ್​ ಲುಕ್ : ಸುಜಾತಾ ಮತ್ತು ವೆಂಕಟೇಶ್​ ಪಾತ್ರದಲ್ಲಿ ಕಾಜೋಲ್​ ಮತ್ತು ವಿಶಾಲ್​ ಜೇತ್ವಾ

ಸಲಾಮ್​ ವೆಂಕಿ ಚಿತ್ರದ ಟ್ರೇಲರ್​ ಸೋಮವಾರ (ನವೆಂಬರ್​ 14) ರಂದು ಬಿಡುಗಡೆಯಾಗಲಿದೆ.

‘ಸಲಾಮ್​ ವೆಂಕಿ' ಫಸ್ಟ್​ ಲುಕ್ : ಸುಜಾತಾ ಮತ್ತು ವೆಂಕಟೇಶ್​ ಪಾತ್ರದಲ್ಲಿ ಕಾಜೋಲ್​ ಮತ್ತು ವಿಶಾಲ್​ ಜೇತ್ವಾ
ಸಲಾಮ್​ ವೆಂಕಿ ಮೂವಿ ಫಸ್ಟ್​ ಲುಕ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 11, 2022 | 11:23 AM

ಕಾಜೋಲ್​ (kajol) ಅವರ ಇತ್ತೀಚಿನ ಇನ್​ಸ್ಟಾಗ್ರಾಮ್​ ಪೋಸ್ಟ್​ ಪ್ರಕಾರ ಕಾಜೋಲ್​ ಮತ್ತು ವಿಶಾಲ್​ ಜೇತ್ವಾ ಅವರ ‘ಸಲಾಮ್​ ವೆಂಕಿ’(salaam venky)ಚಿತ್ರದ ಟ್ರೇಲರ್​ ನವೆಂಬರ್​ 14 ರಂದು ಬಿಡುಗಡೆಯಾಗಲಿದೆ. ಗುರುವಾರ ಕಾಜೋಲ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ‘ಏಕ್​ ಬಡಿ ಜಿಂದಗಿ ಕಾ ಬಡಾ ಸೆಲೆಬ್ರೇಶನ್​ ಪ್ರಾರಂಭವಾಗಲಿದೆ’ ಎಂದು ಬರೆಯುವ ಮೂಲಕ ಚಿತ್ರದ ಮೊದಲ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ.ಚಿತ್ರದ ಮೊದಲ ಪೋಸ್ಟ್​ರ್​ನಲ್ಲಿ ಕಾಜೋಲ್​ ಕೆಂಪು ಸೀರೆ ಧರಿಸಿದ್ದು ಹಾಗೂ ವಿಶಾಲ್​ ವಿಲ್​ಚೇರ್​ನಲ್ಲಿ ಕುಳಿತಿದ್ದಾರೆ.

ಇನ್ನು ಈ ಸಿನಿಮಾವನ್ನು ನಟಿ ಮತ್ತು ನಿರ್ಮಾಪಕಿ ರೇವತಿ ಅವರು ನಿರ್ದೇಶನ ಮಾಡಿದ್ದು, ಸೂರಜ್​ ಸಿಂಗ್​, ಶ್ರದ್ಧಾ ಅಗರವಾಲ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಡಿಸೆಂಬರ್ 9 ರಂದು ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಸಿನಿಮಾವು ಮಹಿಳೆಯ ನೈಜ ಕಥೆಯನ್ನ ಆಧಾರಿಸಿದ್ದು, ಜೀವನದಲ್ಲಿ ಅವಳು ಎದುರಿಸುವ ಸವಾಲುಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಹೊಸ ಸಿನಿಮಾ ಕೆಲಸ ಆರಂಭಿಸಿದ ಕಾಜೋಲ್​; ನಿರ್ದೇಶಕಿ ರೇವತಿ ಜೊತೆ ಕೈ ಜೋಡಿಸಿದ ನಟಿ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಮಿತ್ರ’ ವನ್ನು ನಿರ್ದೇಶಿಸಿರುವ ರೇವತಿಯವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ‘ಸಲಾಮ್​ ವೆಂಕಿ’ ಚಿತ್ರದ ಅನೇಕ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಇನ್ನು ದುರ್ಗಾ ಪೂಜೆಯ ಸಂದರ್ಭದಲ್ಲಿ ನಟಿ ಕಾಜೋಲ್​ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ನಿರ್ಮಾಪಕಿ ರೇವತಿಯವರೊಂದಿಗೆ ತಮ್ಮ ಸಿನಿಮಾಗೆ ಶುಭವಾಗಲಿ ಎಂದು ಆರ್ಶಿವಾದ ಪಡೆಯುತ್ತಿರುವ ವಿಡಿಯೋವನ್ನ ಹಂಚಿಕೊಂಡಿದ್ದರು.

View this post on Instagram

A post shared by Kajol Devgan (@kajol)

ಕಾಜೋಲ್​ ಅವರ ಈ ಹಿಂದೆ ನಟಿಸಿದ ತನ್ಹಾಜಿ ಚಿತ್ರವು ಬ್ಲಾಕ್​ ಬಸ್ಟರ್​ ಆಗಿ ಹೊರಹೊಮ್ಮಿತು, ಇದಾದ ಬಳಿಕ ಸಲಾಮ್​ ವೆಂಕಿ ಸಿನಿಮಾವೊಂದಿಗೆ ಬಂದಿದ್ದು ಗಲ್ಲಾ ಪೆಟ್ಟಗೆಯಲ್ಲಿ ಎಷ್ಟು ಗಳಿಕೆ ಮಾಡಬಹುದು ಎಂದು ಕಾದು ನೋಡಬೇಕಾಗಿದೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!