Viral News: ದ್ರಾಕ್ಷಿ ಕ್ಯಾಂಡಿ ಮೂಲಕ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಾಳೆ ಈ ಮಹಿಳೆ

|

Updated on: Apr 11, 2024 | 4:37 PM

ಇಲ್ಲೊಬ್ಬಳು ಮಹಿಳೆ ಮನೆಯಲ್ಲೇ ಕುಳಿತು ಮನೆ ಕೆಲಸದ ಜೊತೆಗೆ ಸೈಡ್​​ ಬ್ಯುಸಿನೆಸ್​ ಮೂಲಕ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ. ದ್ರಾಕ್ಷಿಗಳಿಂದ ವಿಶೇಷ ಕ್ಯಾಂಡಿಯನ್ನು ತಯಾರಿಸಿ ನಂತರ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತದೆ.

Viral News: ದ್ರಾಕ್ಷಿ ಕ್ಯಾಂಡಿ ಮೂಲಕ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಾಳೆ ಈ ಮಹಿಳೆ
Follow us on

ಪ್ರತಿಯೊಬ್ಬ ವ್ಯಕ್ತಿಯೂ ತಾನು ಶ್ರೀಮಂತನಾಗಬೇಕೆಂಬ ಆಸೆಯನ್ನು ಇಟ್ಟುಕೊಂಡು ದಿನನಿತ್ಯ ಕಷ್ಟಪಟ್ಟು ದುಡಿಯುತ್ತಾನೆ. ಆದರೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಜೀವನ ನಡೆಸುತ್ತಿರುವವರಿಗೆ ಸಂಬಳ ಎಷ್ಟು ಇದ್ದರೂ ಕಡಿಮೆಯೇ, ತಿಂಗಳ ಅಂತ್ಯದಲ್ಲಿ ಜೇಬು ಖಾಲಿ. ಆದರೆ ಇಲ್ಲೊಬ್ಬಳು ಮಹಿಳೆ ಮನೆಯಲ್ಲೇ ಕುಳಿತು ಮನೆ ಕೆಲಸದ ಜೊತೆಗೆ ಸೈಡ್​​ ಬ್ಯುಸಿನೆಸ್​ ಮೂಲಕ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ.

ಮಹಿಳೆಯ ಹೆಸರು ಬ್ರಿಜಾ ಗಿಜೆಲ್. ದಿ ಸನ್ ನಲ್ಲಿನ ವರದಿಯ ಪ್ರಕಾರ, ಬ್ರಿಜಾ ದ್ರಾಕ್ಷಿಗಳಿಂದ ವಿಶೇಷ ಕ್ಯಾಂಡಿಯನ್ನು ತಯಾರಿಸುತ್ತಾರೆ. ಇದು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ದ್ರಾಕ್ಷಿ ಗೊಂಚಲುಗಳನ್ನು 158 ರೂಪಾಯಿಗೆ ಖರೀದಿಸಿ ಕೇವಲ 10 ದ್ರಾಕ್ಷಿ ಬಳಸಿ ಕ್ಯಾಂಡಿ ತಯಾರಿಸಿ ಸುಮಾರು 844 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ದ್ರಾಕ್ಷಿ ಗೊಂಚಲುಗಳಿಂದ ಹಲವು ಸಿಹಿ ತಯಾರಿಸಿ ಮಾರಾಟ ಮಾಡಿ ಸುಮಾರು 16 ಸಾವಿರ ರೂ. ಗಳಿಸುತ್ತಾರೆ.

ಇದನ್ನೂ ಓದಿ: ಮಗು ಹೀಗೆ ಹುಟ್ಟಲು ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸ ತಿಂದಿದ್ದೆ ಕಾರಣ ಎಂದ ತಾಯಿ 

ದ್ರಾಕ್ಷಿಯಿಂದ ತಯಾರಿಸಿದ ಕ್ಯಾಂಡಿಗೆ ಭಾರಿ ಬೇಡಿಕೆ ಇದೆ. ಈ ಕ್ಯಾಂಡಿ ತಯಾರಿಸಲು ತಾನು ಸಕ್ಕರೆ, ಜೋಳ, ಸಿರಪ್, ರೆಡ್ ಫುಡ್ ಕಲರ್ ಮತ್ತು ಮೆಕ್ಸಿಕನ್ ಮಸಾಲೆ ಬಳಸುತ್ತಿದ್ದೇನೆ ಎಂದು ಬ್ರಿಜಾ ಹೇಳುತ್ತಾರೆ. ಬ್ರಿಜಾ ತಯಾರಿಸುವ ಸಿಹಿತಿಂಡಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಅನೇಕರು ಅವಳ ಮನೆಗೆ ಬಂದು ಆರ್ಡರ್ ಮಾಡಿ ಅದನ್ನು ತಯಾರಾದ ನಂತರ ತೆಗೆದುಕೊಂಡು ಹೋಗುತ್ತಾರೆ. ಈ ಮೂಲಕ ದಿನದಲ್ಲಿ ಒಂದರಿಂದ ಎರಡು ಗಂಟೆ ಕೆಲಸ ಮಾಡಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಾಳೆ ಬ್ರಿಜಾ ಗಿಜೆಲ್.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ