Viral News: ಹಲ್ಲುಜ್ಜುತ್ತಲೇ ಟೂತ್ ಬ್ರಶ್ ನುಂಗಿದ ಮಹಿಳೆ; ಮುಂದೇನಾಯಿತು ನೋಡಿ
ಹಲ್ಲುಜ್ಜುತ್ತಿದ್ದಾಗ ಇದ್ದಕ್ಕಿದ್ದಂತೆ 20 ಸೆಂ.ಮೀ ಟೂತ್ ಬ್ರಶ್ ಜಾರಿ ಅವಳ ಗಂಟಲಿಗೆ ಹೋಗಿದೆ. ಇದರಿಂದ ಹೆದರಿದ ಮಹಿಳೆ ಟೂತ್ ಬ್ರಶ್ ತೆಗೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆಕೆಯ ಪತಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಮುಂದೇನಾಯಿತು ಗೊತ್ತಾ?
ಮಹಿಳೆಯೊಬ್ಬಳು ಹಲ್ಲುಜ್ಜುತ್ತಿದ್ದಂತೆ ಬ್ರಶ್ ಅನ್ನು ನುಂಗಿದ್ದು, ಏನೇ ಮಾಡಿದರೂ ತೆಗೆಯಲಾಗದೇ ಕೊನೆಗೆ ಆಸ್ಪತ್ರೆಗೆ ಓಡೋಡಿ ಬಂದಿದ್ದಾಳೆ. ಕೊನೆಗೂ ಸಾಕಷ್ಟು ಪ್ರಯತ್ನದ ಬಳಿಕ ವೈದ್ಯರ ತಂಡ ಆಕೆಯ ಹೊಟ್ಟೆಯಿಂದ ಬ್ರಶ್ ಹೊರ ತೆಗೆದಿದೆ. ಈ ಘಟನೆ ಕ್ರೊಯೇಷಿಯಾದಿಂದ ನಡೆದಿದೆ ಎಂದು ವರದಿಯಾಗಿದೆ.
ಅಂಬರ್ ಹಂಟ್(38) ಬ್ರಶ್ ನುಂಗಿದ ಮಹಿಳೆ. ಅಂಬರ್ ತನ್ನ ಪತಿ ಅಮೀರ್ ಡರ್ವಿಕ್ ಮತ್ತು ಇಬ್ಬರು ಮಕ್ಕಳೊಂದಿಗೆ ರಜಾದಿನದಲ್ಲಿ ಅತ್ತೆಯ ಮನೆಗೆ ಬಂದಿದ್ದರು. ಆ ದಿನ ರಾತ್ರಿ ಮಲಗುವ ಮುನ್ನ ಅಂಬರ್ ಹಲ್ಲುಜ್ಜಲು ಹೋಗಿದ್ದಾರೆ. ಹಾಗೆಯೇ ಹಲ್ಲುಜ್ಜುತ್ತಿದ್ದಾಗ ಇದ್ದಕ್ಕಿದ್ದಂತೆ 20 ಸೆಂ.ಮೀ ಟೂತ್ ಬ್ರಶ್ ಜಾರಿ ಅವಳ ಗಂಟಲಿಗೆ ಹೋಗಿದೆ. ಇದರಿಂದ ಹೆದರಿದ ಅಂಬರ್ ಟೂತ್ ಬ್ರಶ್ ತೆಗೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಅಂಬರ್ ತನ್ನ ಪತಿಗೆ ಹೇಳಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಮಹಿಳೆಯ ತಲೆ ತುಂಬಾ ಹೇನು, ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ ಪ್ರಯಾಣಿಕರು
ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಗೆ ಒಳಗಾದ ವೇಳೆ ಹೊಟ್ಟೆಯಲ್ಲಿ ಬ್ರಷ್ ಇರುವುದು ಪತ್ತೆಯಾಗಿದೆ. ಆದರೆ ವೈದ್ಯರು ಟೂತ್ ಬ್ರಶ್ ತೆಗೆಯಲು ಸಾಧ್ಯವಾಗದ ಕಾರಣ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಾರು 45 ನಿಮಿಷಗಳ ನಂತರ ವೈದ್ಯರು ಅಂತಿಮವಾಗಿ ಬ್ರಷ್ ಅನ್ನು ಹೊರತೆಗೆದಿದ್ದಾರೆ. ವೈದ್ಯರು ಆಕೆಯ ಕುತ್ತಿಗೆಯಲ್ಲಿ ಅಳವಡಿಸಲಾದ ಕ್ಯಾಮರಾಗೆ ತಂತಿಯನ್ನು ಜೋಡಿಸಿ ಹಲ್ಲುಜ್ಜುವ ಬ್ರಷ್ ಅನ್ನು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ