
ಯಾರು ಎಷ್ಟೇ ಸಂಪಾದನೆ ಮಾಡಿದರೂ ಅದು ಕುಟುಂಬವನ್ನು ಸಲಹುವ ಸಲುವಾಗಿಯೇ, ಹಾಗಾಗಿ ಕೆಲಸ ಕುಟುಂಬ ಎಂದು ಬಂದಾಗ ಎಲ್ಲರೂ ಕುಟುಂಬವನ್ನೇ ಆರಿಸಿಕೊಳ್ಳುತ್ತಾರೆ. ಹಾಗೆಯೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗಳ ಆರೈಕೆಗಾಗಿ ಮಹಿಳೆ ರಜೆ ತೆಗೆದುಕೊಂಡಿದ್ದರೆ, ಕಂಪನಿಯು ಮಹಿಳೆಯನ್ನು ಕೆಲಸದಿಂದ ವಜಾ ಮಾಡಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದೆ.
ಈ ಘಟನೆ ನಡೆದಿದೆ, ಮಹಿಳೆ ಕಳೆದ 30 ವರ್ಷಗಳಿಂದ ಮಿಚಿಗನ್ನಲ್ಲಿ ಹಂಟಿಂಗ್ಟನ್ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದಳು, ಮಗಳಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹಾಗಾಗಿ ಆಕೆ ರಜೆ ತೆಗೆದುಕೊಂಡಿದ್ದರು. ತನ್ನಾ ಎಲ್ಲಾ ರಜೆಗಳನ್ನು ಪೂರೈಸಿ, ಬಳಿಕ 12 ವಾರಗಳ ಎಫ್ಎಂಎಲ್ಎ ರಜೆಯಲ್ಲಿ ನಾಲ್ಕು ವಾರಗಳನ್ನು ಬಳಸಿದ್ದಾರೆ ಎಂದು ಸಿಬಿಎಸ್ ನ್ಯೂಸದ ವರದಿ ಮಾಡಿದೆ.
ಈ ಸುದ್ದಿ ಕೇಳಿ ಮಗಳು ಈ ಘಟನೆ ನನ್ನಿಂದಲೇ ನಡೆದಿದೆ, ನನಗೋಸ್ಕರ ಅಮ್ಮ ರಜೆ ತೆಗೆದುಕೊಳ್ಳದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಫೋನ್ನಲ್ಲಿ ಹೇಳಿಕೊಂಡು ಅತ್ತಿದ್ದಾಳೆ, ನನ್ನಿಂದಾಗಿ ನಿನ್ನ ಕೆಲಸ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾಳೆ ಎಂದು ಹೇಳಿದ್ದಾರೆ.
31 ವರ್ಷ ಯುವತಿ ತನ್ನ ತಾಯಿ ಕೆಲಸ ಕಳೆದುಕೊಂಡ 10 ದಿನಗಳ ಬಳಿಕ ನಿಧನರಾದರು, ಇದು ನಂಬಲಾಗದ ಆಘಾತವಾಗಿತ್ತು, ಕೆಲಸದಿಂದ ತೆಗೆದು ಹಾಕಿದ್ದಕ್ಕಾಗಿ ಬ್ಯಾಂಕಿನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸಮಂತಾ ಅವರಿಗೆ ಏಪ್ರಿಲ್ 2023 ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಮತ್ತು ಕಾಲಾನಂತರದಲ್ಲಿ ಅವರ ಸ್ಥಿತಿ ಹದಗೆಟ್ಟಿತು.ಎಸ್ಟೆಪ್ ಅವರು ತಮ್ಮ ಆರೈಕೆಗಾಗಿ ಲಭ್ಯವಿರುವ ಎಲ್ಲಾ ರಜೆಗಳನ್ನು ಬಳಸಬೇಕಾಯಿತು.
ಅವರು ಚಿಕಿತ್ಸೆ ಪಡೆಯುತ್ತಿರುವಾಗ ತಮ್ಮ ಮಗಳ ಜೊತೆ ಇರಲು ಬಯಸಿದ್ದರು ಮತ್ತು ವೈದ್ಯಕೀಯ ಮತ್ತು ಕೌಟುಂಬಿಕ ಕಾರಣಗಳಿಗಾಗಿ ಉದ್ಯೋಗಿಗಳಿಗೆ ಉದ್ಯೋಗ-ರಕ್ಷಿತ, ವೇತನವಿಲ್ಲದ ರಜೆ ತೆಗೆದುಕೊಳ್ಳಲು ಅನುಮತಿಸುವ ಫೆಡರಲ್ ಕಾನೂನನ್ನು ಬಳಸಿದರು.
ಮತ್ತಷ್ಟು ಓದಿ: ಕುಡಿದ ಅಮಲಿನಲ್ಲಿ ಚಾಲಕನ ತೊಡೆ ಮೇಲೆ ಕುಳಿತ ರಷ್ಯನ್ ಯುವತಿ, ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಢಿಕ್ಕಿ
ಎಸ್ಟೆಪ್ ಹೆಚ್ಚಿನ ರಜೆಯನ್ನು ಕೋರಿದರು ಆದರೆ ಕಂಪನಿಯಲ್ಲಿ ಅವರ ದೀರ್ಘಾವಧಿಯ ಸೇವಾವಧಿಯ ಹೊರತಾಗಿಯೂ ಅದೇ ದಿನ ಅವರನ್ನು ವಜಾಗೊಳಿಸಲಾಯಿತು.
ಕುಟುಂಬ ಮತ್ತು ವೈದ್ಯಕೀಯ ರಜೆ ಕಾಯ್ದೆ ಸೇರಿದಂತೆ ಎಲ್ಲಾ ಉದ್ಯೋಗ ಕಾನೂನುಗಳನ್ನು ಅನುಸರಿಸಲು ಬದ್ಧವಾಗಿದೆ ಮತ್ತು ನಾವು ಈ ವಿಷಯದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ಬ್ಯಾಂಕ್ ಹೇಳಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ