AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೃತರ ಹೆಸರನ್ನು ಪ್ರಿಂಟ್ ಮಾಡಿಸಿದ ಕುಟುಂಬ

ಕೆಲವರು ತಮ್ಮ ಲಗ್ನ ಪತ್ರಿಕೆಯನ್ನು ವಿವಿಧ ಥೀಮ್ ಗಳಲ್ಲಿ ಪ್ರಿಂಟ್ ಮಾಡಿಸುತ್ತಾರೆ. ಇಂತಹ ಸಾಕಷ್ಟು ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಗಳ ಫೋಟೋಗಳು ಸೋಷಿಯಲ್ ಮೀಡಿಯಾ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಫೋಟೋವೊಂದು ವೈರಲ್ ಆಗಿದ್ದು, ಮನೆಯವರು ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಸುಖಾಗಮನವನ್ನು ಬಯಸುವವರು ಎಂದು ಮೃತ ಕುಟುಂಬ ಸದಸ್ಯರ ಹೆಸರನ್ನು ಪ್ರಿಂಟ್ ಮಾಡಿಸಿದ್ದಾರೆ.

Viral: ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೃತರ ಹೆಸರನ್ನು ಪ್ರಿಂಟ್ ಮಾಡಿಸಿದ ಕುಟುಂಬ
ವೈರಲ್​ ಪೋಸ್ಟ್​
ಮಾಲಾಶ್ರೀ ಅಂಚನ್​
| Edited By: |

Updated on: Feb 10, 2025 | 10:34 AM

Share

ಈಗೀಗ ಜನ ಮದುವೆ ಸಮಾರಂಭಗಳನ್ನು ಬಲು ಜೋರಾಗಿ ಮಾಡುವುದರ ಜೊತೆಗೆ ವಿವಾಹ ಆಮಂತ್ರಣ ಪತ್ರಿಕೆಗಳನ್ನು ಕೂಡಾ ಬಹಳ ವಿಶೇಷವಾಗಿ ಪ್ರಿಂಟ್ ಮಾಡಿಸುತ್ತಾರೆ. ಕೆಲವರು ದುಬಾರಿ ಬೆಲೆಯ ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿದರೆ, ಇನ್ನೂ ಕೆಲವರು ಪರಿಸರ ಕಾಳಜಿ, ಮತದಾನದ ಬಗ್ಗೆ ಅರಿವು ಮೂಡಿಸುವಂತಹ, ಆಧಾರ್ ಕಾರ್ಡ್ ನಂತಿರುವ ವಿಶಿಷ್ಟ ರೀತಿಯ ಆಮಂತ್ರಣ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸುತ್ತಾರೆ. ಇಂತಹ ಸಾಕಷ್ಟು ಯೂನಿಕ್ ಲಗ್ನ ಪತ್ರಿಕೆಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಫೋಟೋವೊಂದು ವೈರಲ್ ಆಗಿದ್ದು, ಮನೆಯವರು ಲಗ್ನ ಪತ್ರಿಕೆಯಲ್ಲಿ ತಮ್ಮ ಸುಖಾಗಮನವನ್ನು ಬಯಸುವವರು ಎಂದು ಮೃತ ಕುಟುಂಬ ಸದಸ್ಯರ ಹೆಸರನ್ನು ಪ್ರಿಂಟ್ ಮಾಡಿಸಿದ್ದಾರೆ. ಲಗ್ನ ಪತ್ರಿಕೆಯಲ್ಲಿ ಮೃತರ ಹೆಸರನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.

ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ತಮ್ಮ ಸುಖಾಗಮನವನ್ನು ಬಯಸುವವರು ಎಂದು ಮನೆಯ ಸದಸ್ಯರ ಹೆಸರನ್ನು ಪ್ರಿಂಟ್ ಮಾಡಿಸುತ್ತಾರೆ. ಆದ್ರೆ ಇಲ್ಲೊಂದು ಮದುವೆ ಪತ್ರಿಕೆಯಲ್ಲಿ ಸುಖಾಗಮನವನ್ನು ಬಯಸುವವರು ಎಂದು ಮೃತ ಕುಟುಂಬ ಸದಸ್ಯರ ಹೆಸರನ್ನು ಬರೆಸಿದ್ದಾರೆ. ಹೌದು ತಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ ಎಂದು ಸತ್ತವರ ಹೆಸರನ್ನು ಪ್ರಿಂಟ್ ಮಾಡಿಸಿದ್ದಾರೆ.

ಫೈಕ್ ಅತೀಕ್ ಕಿದ್ವಾಯಿ (Faiq Ateeq Kidwai) ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ಕುರಿತ ಫೋಟೋವನ್ನು ಶೇರ್ ಮಾಡಲಾಗಿದ್ದು, “ಸತ್ತವರು ಕಾಯುತ್ತಿದ್ದರೆ ಸಹೋದರ ನಾನು ಮದುವೆಗೆ ಹೋಗುವುದಿಲ್ಲ” ಎಂದು ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ಫೋಟೋದಲ್ಲಿ ನಿಮ್ಮ ಆಗಮನಕ್ಕಾಗಿ ಕಾಯುತ್ತಿರುವವರು ಎಂದು ದಿವಂಗತ ನೂರುಲ್ ಹಕ್, ಲೇಟ್ ಲಾಲು ಹಕ್, ಲೇಟ್ ಬಾಬು ಹಕ್, ಲೇಟ್ ಎಜಾಜ್ ಹಕ್ ಫಾರೂಕ್, ಮೊಹಮ್ಮದ್. ಇಕ್ಬಾಲ್, ಮೊ. ಲಿಯಾಕತ್ ಮೊಹಮ್ಮದ್ ಶೋಕೃತ್, ಮೊಹಮ್ಮದ್. ಫರ್ಹಾನ್, ಮೊಹಮ್ಮದ್. ಫೈಜಾನ್, ಮೊಹಮ್ಮದ್. ಅನಸ್, ಮೊಹಮ್ಮದ್. ಆಕಿಬ್, ತಾಯಿ. ತೌಸಿಫ್, ಅಬ್ಬಾಸ್, ಮೊಹಮ್ಮದ್ ಇನ್ನಿತರರ ಹೆಸರನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮದುವೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ವೇಳೆ ಹೃದಯಾಘಾತ, ಯುವತಿ ಸಾವು

ನಾಲ್ಕು ದಿನಗಳ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ತುಂಬಾ ತಮಾಷೆಯಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಮದುವೆ ನಡೆಯುವ ಸ್ಥಳದ ಹೆಸರು ಸ್ಮಶಾನದ ಹೆಸರಿನಂತಿದೆ’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಪೋಸ್ಟ್ ನೋಡಿ ಫುಲ್ ಶಾಕ್ ಆಗಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ