ದಮ್ಮಯ್ಯ ಶರ್ಟ್ ಬಿಟ್ಬಿಡೋ ನನ್ನಮ್ಮ ಬೈತಾರೆ; ಬಟ್ಟೆನಾ ಎಳಿಬೇಡವೆಂದು ಹುಲಿಯ ಮುಂದೆ ಗೋಗರೆದ ಬಾಲಕ
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ದೃಶ್ಯಗಳು ಭಯಾನಕವಾಗಿದ್ದರೂ ನಮ್ಮ ಮುಖದಲ್ಲಿ ನಗು ತರಿಸುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದ್ದು, ಮೃಗಾಲಯಕ್ಕೆ ಭೇಟಿ ನೀಡಿದ್ದ ಬಾಲಕನೊಬ್ಬ ಹುಲಿಯ ಬೋನಿನ ಬಳಿ ಹೋಗಿ ಪಜೀತಿಗೆ ಸಿಲುಕಿದ್ದಾನೆ. ಹೌದು ಬೋನಿನ ಬಳಿ ಹೋದಾಗ ಹುಲಿ ಥಟ್ಟನೆ ಆತನ ಬಟ್ಟೆಯನ್ನು ಹಿಡಿದು ಎಳೆದಾಡಿದ್ದು, ದಮ್ಮಯ್ಯ ಶರ್ಟ್ ಬಿಟ್ಬಿಡೋ ನನ್ನಮ್ಮ ಬೈತಾರೆ ಎಂದು ಗೋಗರೆದಿದ್ದಾನೆ.

ಪುಟ್ಟ ಪುಟ್ಟ ಮಕ್ಕಳು ಯಾರಿಗೆ ಭಯ ಪಡ್ತಾರೋ ಇಲ್ವೋ ಗೊತ್ತಿಲ್ಲ, ಆದ್ರೆ ಅಮ್ಮಂದಿರಿಗಂತೂ ಸಿಕ್ಕಾಪಟ್ಟೆ ಭಯ ಪಡ್ತಾರೆ. ಇದಕ್ಕೆ ಸೂಕ್ತ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಬಾಲಕನೊಬ್ಬ ಶರ್ಟ್ ಬಿಟ್ಬಿಡೋ ಅಮ್ಮ ಬೈತಾರೆ ಎಂದು ಹುಲಿಯ ಮುಂದೆ ಗೋಗರೆದಿದ್ದಾನೆ. ಮೃಗಾಲಯಕ್ಕೆ ಭೇಟಿ ನೀಡಿದ್ದ ಈ ಪುಟ್ಟ ಪೋರ ಹುಲಿರಾಯನನ್ನು ಹತ್ತಿರದಿಂದ ನೋಡಬೇಕೆಂದು ಬೋನಿನ ಸಮೀಪಕ್ಕೆ ಹೋಗಿದ್ದು, ಆ ಸಂದರ್ಭದಲ್ಲಿ ಹುಲಿ ಥಟ್ಟನೆ ಆತನ ಬಟ್ಟೆಯನ್ನು ಹಿಡಿದು ಎಳೆದಾಡಿದೆ. ಹುಲಿಗಿಂತ ಶರ್ಟ್ ಹರಿದು ಹೋಗುತ್ತೆ ಅನ್ನೋ ಭಯದಿಂದ ಬಾಲಕ ದಮ್ಮಯ್ಯ ಶರ್ಟ್ ಬಿಟ್ಬಿಡೋ ನನ್ನಮ್ಮ ಬೈತಾರೆ ಎಂದು ಗೋಗರೆದಿದ್ದಾನೆ. ಈ ದೃಶ್ಯವನ್ನು ಕಂಡು ಬಾಲಕನಿಗೆ ಹುಲಿಗಿಂತ ಅಮ್ಮನ ಬಗ್ಗೆಯೇ ಭಯ ಜಾಸ್ತಿ ಇದ್ದಂಗಿದೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಮೃಗಾಲಯವೊಂದರಲ್ಲಿ ಬೋನಿನೊಳಗಿದ್ದ ಹುಲಿ, ಅಪ್ರಾಪ್ತ ಬಾಲಕನೊಬ್ಬನ ಶರ್ಟ್ ಹಿಡಿದು ಎಳೆದಾಡಿದ್ದು, ಹುಲಿಗಿಂತ ಶರ್ಟ್ ಹರಿದು ಹೋದ್ರೆ ಅಮ್ಮನ ಕೈಯಿಂದ ಒದೆ ಬೀಳುತ್ತೆ ಎಂಬ ಕಾರಣಕ್ಕೆ ದಮ್ಮಯ್ಯ ಶರ್ಟ್ ಬಿಟ್ಬಿಡೋ ನನ್ನಮ್ಮ ಬೈತಾರೆ ಎಂದು ಸಹಾಯಕ್ಕಾಗಿ ಜೋರಾಗಿ ಕಿರಿಚಾಡಿದ್ದಾನೆ. ಆದ್ರೆ ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Kid Starts shouting “Meri shirt chhod de, mummy Daantegi” after Tiger grabeed his shirt in Zoo pic.twitter.com/gl07jglZ46
— Ghar Ke Kalesh (@gharkekalesh) February 9, 2025
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬೋನಿನ ಒಳಗಿದ್ದ ಹುಲಿಯೊಂದು ಬಾಲಕನೊಬ್ಬನ ಶರ್ಟ್ ಹಿಡಿದು ಎಳೆಯುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಬಾಲಕ ಅಯ್ಯೋ ನನ್ನ ಶರ್ಟ್ ಬಿಟ್ಬಿಡೋ ನನ್ನ ಅಮ್ಮ ಬೈತಾರೇ ಪ್ಲೀಸ್ ಬಿಟ್ಬಿಡೋ ಎಂದು ಹುಲಿಯ ಮುಂದೇ ಗೋಗರೆದಿದ್ದಾನೆ.
ಇದನ್ನೂ ಓದಿ: ಊಟದ ವಿಚಾರಕ್ಕೆ ನಿಂತ ವಿವಾಹ ಸಮಾರಂಭ; ಠಾಣೆಯಲ್ಲಿ ಮದುವೆ ನೆರವೇರಿಸಿದ ಪೊಲೀಸರು
ಫೆಬ್ರವರಿ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ವಿಡಿಯೋ ಮಾಡುವ ಬದಲು ಬಾಲಕನಿಗೆ ಸಹಾಯ ಮಾಡಬಹುದಿತ್ತಲ್ವೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಗುವಿಗೆ ಸಹಾಯ ಮಾಡುವ ಬದಲು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಿಡಿಗೇಡಿಗಳು ಯಾರದುʼ ಎಂದು ಗರಂ ಆಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆತನಿಗೆ ಹುಲಿಗಿಂತ ಅಮ್ಮನ ಬಗ್ಗೆಯೇ ಭಯ ಜಾಸ್ತಿಯಿದೆʼ ಎಂದು ತಮಾಷೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ