Mahakumbh 2025: ದಟ್ಟಣೆಯಲ್ಲಿ ರೈಲು ಹತ್ತಲು ಸಾಧ್ಯವಾಗದಿದ್ದಕ್ಕೆ ರೈಲು ಧ್ವಂಸಗೊಳಿಸಿದ ಜನ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ದೇಶದ ವಿವಿಧ ಮೂಲೆಗಳಿಂದ ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಹೋಗುತ್ತಿದ್ದಾರೆ. ಪ್ರಯಾಗ್ರಾಜ್ಗೆ ಹೋಗಲು ಭಕ್ತರು ಬಿಹಾರದ ಮಧುಬನಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ದಟ್ಟಣೆಯಿಮದಾಗಿ ರೈಲು ಹತ್ತಲು ಸಾಧ್ಯವಾಗದಿದ್ದಿದ್ದಕ್ಕೆ ಜನರು ಎಸಿ ಬೋಗಿಗಳನ್ನು ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ. ವಿಡಿಯೋದಲ್ಲಿ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ, ಕಿಟಕಿಗಳನ್ನು ಒಡೆದು, ಬಲವಂತವಾಗಿ ಬೋಗಿಗಳಿಗೆ ಪ್ರವೇಶಿಸುವುದನ್ನು ಕಾಣಬಹುದು.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ದೇಶದ ವಿವಿಧ ಮೂಲೆಗಳಿಂದ ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಹೋಗುತ್ತಿದ್ದಾರೆ. ಪ್ರಯಾಗ್ರಾಜ್ಗೆ ಹೋಗಲು ಭಕ್ತರು ಬಿಹಾರದ ಮಧುಬನಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ದಟ್ಟಣೆಯಿಮದಾಗಿ ರೈಲು ಹತ್ತಲು ಸಾಧ್ಯವಾಗದಿದ್ದಿದ್ದಕ್ಕೆ ಜನರು ಎಸಿ ಬೋಗಿಗಳನ್ನು ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ.
ವಿಡಿಯೋದಲ್ಲಿ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ, ಕಿಟಕಿಗಳನ್ನು ಒಡೆದು, ಬಲವಂತವಾಗಿ ಬೋಗಿಗಳಿಗೆ ಪ್ರವೇಶಿಸುವುದನ್ನು ಕಾಣಬಹುದು. ಎಸಿ ಬೋಗಿಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು, ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದಂತೆ, ಕೆಲವು ಪ್ರಯಾಣಿಕರು ಕಿಟಕಿಗಳ ಮೂಲಕ ಹತ್ತಲು ಪ್ರಯತ್ನಿಸಿದರು, ಆದರೆ ಇತರರು ಕೋಪದಿಂದ ಕಲ್ಲುಗಳನ್ನು ಎಸೆದು ಗಾಜು ಒಡೆದರು. ಮಧುಬನಿ ಮತ್ತು ದರ್ಭಂಗಾ ನಡುವಿನ ಪ್ರದೇಶಗಳಲ್ಲಿ ರೈಲು ಇದೇ ರೀತಿಯ ಅವ್ಯವಸ್ಥೆಯನ್ನು ಎದುರಿಸಿತು. ಮಿಥಿಲಾಂಚಲ್ ಪ್ರದೇಶದ ಸಾವಿರಾರು ಜನರು ಮಾಘ ಪೂರ್ಣಿಮೆಗೆ ಪ್ರಯಾಗರಾಜ್‌ಗೆ ಧಾವಿಸುತ್ತಿರುವುದರಿಂದ ಜನದಟ್ಟಣೆ ಹೆಚ್ಚಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ