ಕುಡಿದ ಅಮಲಿನಲ್ಲಿ ಚಾಲಕನ ತೊಡೆ ಮೇಲೆ ಕುಳಿತ ರಷ್ಯನ್ ಯುವತಿ, ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಢಿಕ್ಕಿ
ಎಣ್ಣೆ ಒಳಗೆ ಇಳಿದರೆ ಕುಡಿದ ಅಮಲಿನಲ್ಲಿ ಏನ್ ಮಾಡ್ತಾನೆ ಅನ್ನೋದು ಅವನಿಗೆನೇ ಗೊತ್ತಾಗಲ್ಲ. ಹೌದು, ಬುಧವಾರ ರಾತ್ರಿ ನಡೆದ ಅಪಘಾತದ ನಂತರ ಕುಡಿದ ಅಮಲಿನಲ್ಲಿ ರಷ್ಯಾದ ಯುವತಿಯೊಬ್ಬಳು ಕೋಲಾಹಲ ಎಬ್ಬಿಸಿದ್ದಾರೆ. ಅಪಘಾತದ ಬಳಿಕ ಕಿರುಚುತ್ತಾ ಗಲಾಟೆಗೆ ಮುಂದಾಗಿದ್ದಾಳೆ. ಈ ಘಟನೆಯೂ ಛತ್ತೀಸ್‌ಗಢದ ರಾಯ್‌ಪುರದ ಜನನಿಬಿಡ ರಸ್ತೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕುಡಿದ ಮತ್ತಿನಲ್ಲಿ ಕುಡುಕರು ಮಾಡುವ ಎಡವಟ್ಟುಗಳು ಹಾಗೂ ಅವಾಂತರಗಳು ಒಂದೆರಡಲ್ಲ ಬಿಡಿ. ಹೌದು, ಈ ಕುಡುಕರು ನಶೆಯಲ್ಲಿ ಬೀದಿಬದಿಯಲ್ಲಿ ರಂಪ ಮಾಡುವ, ಎಡವಟ್ಟು ಮಾಡಿ ಪ್ರಾಣಕ್ಕೆ ಕುತ್ತು ತರುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇಂತಹದೊಂದು ಘಟನೆ ನಡೆದಿದ್ದು, ಛತ್ತೀಸ್‌ಗಢದ ರಾಯ್‌ಪುರದ ಜನನಿಬಿಡ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದ ಅಪಘಾತದ ಬಳಿಕ ಕುಡಿದ ಅಮಲಿನಲ್ಲಿದ್ದ ರಷ್ಯಾದ ಯುವತಿಯೊಬ್ಬಳು ಗಲಾಟೆ ಮಾಡಿದ್ದಾಳೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಯ್‌ಪುರದ ವಿಐಪಿ ರಸ್ತೆಯಲ್ಲಿ ಬುಧವಾರ ರಾತ್ರಿ ವೇಗವಾಗಿ ಚಲಿಸುತ್ತಿದ್ದ ಇಂಡಿಗೋ ಕಾರು ಸ್ಕೂಟರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ಹೊಡೆದ ಬಳಿಕ ಪೊಲೀಸರು ಅಪಘಾತ ಸ್ಥಳಕ್ಕೆ ಧಾವಿಸಿದ್ದು, ಗೊಂದಲದ ವಾತಾವರಣವು ಉಂಟಾಗಿದೆ. ಇತ್ತ ರಷ್ಯನ್ ಯುವತಿಯೂ ಅವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿ ಗಲಾಟೆ ಮಾಡಿದ್ದಾಳೆ. ಅದಲ್ಲದೇ, ಈ ಯುವತಿಯೂ ಪೊಲೀಸರೊಂದಿಗೆ ಠಾಣೆಗೆ ಹೋಗಲು ನಿರಾಕರಸಿದ್ದಾಳೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳದಲ್ಲಿ ನೆರೆದಿದ್ದ ಜನರ ಸಮ್ಮುಖದಲ್ಲಿ ಯುವತಿಯೂ ಅಳುತ್ತಿರುವುದು ಹಾಗೂ ಕಿರುಚುತ್ತಿರುವುದನ್ನು ಕಾಣಬಹುದು. ತನ್ನ ಫೋನ್ ಕಾಣೆಯಾಗಿದೆ ಎಂದು ಕಿರುಚುತ್ತಿದ್ದು, ಇದೇ ವೇಳೆ, ಪೊಲೀಸ್ ಠಾಣೆಗೆ ಕರೆದೊಯ್ಯಲು ಪೊಲೀಸರು ಪ್ರಯತ್ನಿಸಿದಾಗ ಯುವತಿ ವಿರೋಧಿಸುತ್ತಿರುವುದು ಕಾಣಬಹುದು. “ದಯವಿಟ್ಟು ಸಹಕರಿಸಿ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಯುವತಿಗೆ ಹೇಳುತ್ತಿದ್ದು, ಆದರೆ ಆಕೆ ಮಾತ್ರ ಇದನ್ನು ವಿರೋಧಿಸಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A speeding car hit three youths riding an Activa at midnight on VIP Road, they have been admitted in critical condition (It is being told that the Russian girl was driving the car while sitting on the lap of the man) Raipur CG pic.twitter.com/mR0yT3LvhD
— Ghar Ke Kalesh (@gharkekalesh) February 6, 2025
ಪ್ರತ್ಯಕ್ಷದರ್ಶಿಗಳು ಯುವಕ ಮತ್ತು ರಷ್ಯನ್ ಯುವತಿ ಇಬ್ಬರೂ ಕುಡಿದ ಮತ್ತಿನಲ್ಲಿದ್ದರು. ರಷ್ಯನ್ ಯುವತಿ ಚಾಲಕನ ತೊಡೆಯ ಮೇಲೆ ಕುಳಿತಿದ್ದಳು, ಇದರಿಂದ ವಾಹನವನ್ನು ನಿಯಂತ್ರಿಸಲು ಚಾಲಕನಿಗೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಗಾಯಗೊಂಡ ಮೂವರನ್ನು ತಕ್ಷಣವೇ ಮೆಕಹಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ರೈಲಿನ ಶೌಚಾಲಯದೊಳಗೆ ನಿಂತು ಸ್ನೇಹಿತೆಯರೊಂದಿಗೆ ಕುಂಭಮೇಳಕ್ಕೆ ಹೊರಟ ಯುವತಿ
ಅದಲ್ಲದೇ, ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿರುವ ಚಾಲಕ ಹಾಗೂ ರಷ್ಯನ್ ಯುವತಿ ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಖಾಸಗಿ ವ್ಯಕ್ತಿಗೆ ಸೇರಿದ ವಾಹನವಾಗಿದ್ದರೂ, ಅದರ ಮೇಲೆ “ಭಾರತ್ ಸರ್ಕಾರ” ಫಲಕವನ್ನು ಪ್ರದರ್ಶಿಸಿದ್ದಕ್ಕಾಗಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇತ್ತ ಕಾರಿನ ಮಾಲೀಕ ಮತ್ತು ರಷ್ಯನ್ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ