Viral: ಹಣ್ಣಿನಂಗಡಿಯ ಬಿಲ್ ರಶೀದಿಯಲ್ಲಿ ದಾಳಿಂಬೆ ಬದಲು ಅನಾರ್ ಪದ ಬಳಕೆ; ಗರಂ ಆದ ಕನ್ನಡಿಗ
ಕನ್ನಡ ಭಾಷೆ ಮತ್ತು ಹಿಂದಿ ಭಾಷೆ ವಿಷಯ ಕುರಿತು ಸದಾ ಒಂದಲ್ಲಾ ಒಂದು ವಿವಾದ ಇದ್ದೇ ಇದೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರು ಅಸಮಾಧಾನವನ್ನು ಹೊರ ಹಾಕುತ್ತಲೇ ಇರುತ್ತಾರೆ. ಇದೀಗ ಹಣ್ಣಿನಂಗಡಿಯ ಬಿಲ್ ರಶೀದಿಯಲ್ಲಿ ದಾಳಿಂಬೆ ಬದಲು ಅನಾರ್ ಪದ ಬಳಕೆ ಮಾಡಿದ್ದಕ್ಕೆ ಕನ್ನಡಿಗ ಗರಂ ಆಗಿದ್ದು, ದಿನಕ್ಕೊಂದು ಪದ ಅಂತ ನಾವು ಅವರಿಗೆ ಕಲಿಸಬೇಕಿತ್ತು, ಆದ್ರೆ ಅವ್ರು ಇಲ್ಲಿ ಬಂದು ದಿನಕ್ಕೊಂದು ಪದ ತುರುಕ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ನಮ್ಮ ಬೆಂಗಳೂರಿನಲ್ಲಿ ಕನ್ನಡ ಭಾಷೆ ಮತ್ತು ಹಿಂದಿ ಭಾಷೆ ವಿಷಯ ಕುರಿತು ಸದಾ ಒಂದಲ್ಲಾ ಒಂದು ವಿವಾದ, ಚರ್ಚೆ ನಡೆಯುತ್ತಲೇ ಇರುತ್ತವೆ. ಹೀಗೆ ಸೋಷಿಯಲ್ ಮೀಡಿಯಾದಲ್ಲೂ ಹಿಂದಿ, ಕನ್ನಡ ಭಾಷೆಯ ಪರ ವಿರೋಧದ ಚರ್ಚೆ, ಪೈಪೋಟಿಗಳು ನಡೆಯುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಪೋಸ್ಟ್ ಒಂದು ವೈರಲ್ ಆಗಿದ್ದು, ಬೆಂಗಳೂರಿನ ಹಣ್ಣಿನಂಗಡಿಯ ಬಿಲ್ ರಶೀದಿಯಲ್ಲಿ ದಾಳಿಂಬೆ ಬದಲು ಅನಾರ್ ಪದ ಬಳಕೆ ಮಾಡಿದ್ದಕ್ಕೆ ಕನ್ನಡಿಗರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಹೌದು ದಿನಕ್ಕೊಂದು ಪದ ಅಂತ ನಾವು ಅವರಿಗೆ ಕಲಿಸಬೇಕಿತ್ತು, ಆದ್ರೆ ಅವ್ರು ಇಲ್ಲಿ ಬಂದು ದಿನಕ್ಕೊಂದು ಪದ ತುರುಕ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ತರಕಾರಿ ಮತ್ತು ಹಣ್ಣಿನಂಗಡಿಯ ಬಿಲ್ ರಶೀದಿಯಲ್ಲಿ ದಾಳಿಂಬೆ ಬದಲು ಹಿಂದಿ ಪದವಾದ ಅನಾರ್ ಪದವನ್ನು ಬಳಸಿದ್ದಕ್ಕೆ ಕನ್ನಡಿಗರೊಬ್ಬರು ಫುಲ್ ಗರಂ ಆಗಿದ್ದಾರೆ. ಕನ್ನಡಿಗ ದೇವರಾಜ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ದಿನಕೊಂದು ಪದ ಅಂತ ನಾವ್ ಅವರಿಗೆ ಕಲಿಸಬೇಕಿತ್ತು.. ಆದರೇ ಇಲ್ಲಿ ಅವರು ನಮಗೆ ದಿನಕೊಂದು ತುರುಕ್ತಾ ಇದ್ದಾರೆ.. pic.twitter.com/gmG8KhChUG
— ಕನ್ನಡಿಗ ದೇವರಾಜ್ (@sgowda79) February 5, 2025
Sgowda79 ಹೆಸರಿನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಶೇರ್ ಮಾಡಲಾಗಿದ್ದು, “ದಿನಕ್ಕೊಂದು ಪದ ಅಂತ ನಾವ್ ಅವರಿಗೆ ಕಲಿಸಬೇಕಿತ್ತು… ಅದ್ರೆ ಇಲ್ಲಿ ಅವರು ನಮಗೆ ದಿನಕ್ಕೊಂದು ತುರುಕ್ತಾ ಇದ್ದಾರೆ…” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ಹಣ್ಣಿನಂಗಡಿ ಬಿಲ್ ರಶೀದಿ ಫೋಟೋದಲ್ಲಿ ದಾಳಿಂಬೆ ಬದಲು ʼಅನಾರ್ʼ ಎಂದು ಹಿಂದಿ ಪದವನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಶ್ವಾಸಕೋಶದ ಆರೋಗ್ಯ ವೃದ್ಧಿ ಮತ್ತು ಫಿಟ್‌ನೆಸ್‌ಗಾಗಿ ಪ್ರತಿನಿತ್ಯ ಶಂಖ ಊದುವ ಬಾಲಿವುಡ್ ನಟ; ವಿಡಿಯೋ ವೈರಲ್
ಫೆಬ್ರವರಿ 5 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 14 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಲ್ಲಿರುವ ಎಷ್ಟೋ ಜ್ಯೂಸ್ ಅಂಗಡಿಯವರಿಗೆ ದಾಳಿಂಬೆ ಅಂದ್ರೆ ಏನು ಅಂತಾನೆ ಗೊತ್ತಿಲ್ಲ, ಪೊಮೊಗ್ರೇನೆಟ್, ಅನಾರ್ ಅಂದ್ರೆ ಥಟ್ಟನೆ ಅರ್ಥವಾಗುತ್ತೆ ಅವರಿಗೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರ ʼನನ್ಗೆ ಅನಾರ್ ಅಂದ್ರೆ ಏನು ಎಂದು ಈಗ್ಲೇ ಗೊತ್ತಾಗಿದ್ದು ಮಾರ್ರೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Fri, 7 February 25




