
Optical Illusion: ಹೊರಗೆ ಮೋಡಬಿಸಿಲು, ಕೆಲ ಪ್ರದೇಶಗಳಲ್ಲಿ ಮಳೆ. ಒಟ್ಟಿನಲ್ಲಿ ಈ ಹವಾಮಾನಕ್ಕೆ ಬೆಚ್ಚಗೆ ಹೊದ್ದು ಮಲಗಬೇಕು ಎನ್ನಿಸುತ್ತದೆ. ಇಂಪಾದ ಹಾಡುಗಳನ್ನು ಕೇಳುತ್ತ, ಕೈಯಲ್ಲೊಂದು ಪುಸ್ತಕ ಹಿಡಿದು ಆಗಾಗ ಕಾಫಿ (Coffee) ಬಟ್ಟಲಿಗೆ ತುಟಿ ಇಡುತ್ತಿದ್ದರೆ ಇದೇ ಸ್ವರ್ಗ! ಆದರೆ ದುಡಿಮೆ ಎನ್ನವುದು ಇದೆಲ್ಲದಕ್ಕೆ ಅನುಕೂಲ ಮಾಡಿಕೊಡುವುದೆ? ಕೆಲಸದ ಒತ್ತಡಕ್ಕೆ ಬಿದ್ದ ಮೆದುಳು ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಹಠ ಹಿಡಿದು ಕುಳಿತುಬಿಡುತ್ತದೆ. ಆದರೆ ಕೆಲಸ ನಿಮಗಾಗಿ ಕಾಯುವುದೇ? ಗಡಿಯಾರ ನಿಮಗಾಗಿ ನಿಲ್ಲುವುದೆ? ಹೀಗಾದಾಗ ಏನು ಮಾಡಬೇಕು? ನಿಮ್ಮ ಬುದ್ಧಿಗೆ, ಕಣ್ಣಿಗೆ ಕಸರತ್ತು ಕೊಡಬೇಕು. ಇಲ್ಲೊಂದು ಭ್ರಮಾತ್ಮಕ ಚಿತ್ರವಿದೆ, ಗಮನಿಸಿ.
ಇಲ್ಲಿರುವ ರಾಶಿ ಝೀಬ್ರಾಗಳಲ್ಲಿ (Zebra) ಪಿಯಾನೊ ಅಡಗಿದೆ. 21 ಸೆಕೆಂಡುಗಳಲ್ಲಿ ನೀವದನ್ನು ಕಂಡುಹಿಡಿಯಬೇಕು. ಅನೇಕರು ಸೋಲನ್ನೊಪ್ಪಿಕೊಂಡಿದ್ದಾರೆ. ಕೆಲವೇ ಕೆಲವರು ಗುರುತಿಸುವಲ್ಲಿ ಶಕ್ಯರಾಗಿದ್ದಾರೆ. ಯಾಕೆ ಎಲ್ಲರೂ ಗುರುತಿಸಲು ಸಾಧ್ಯವಾಗಿಲ್ಲ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಕಣ್ಣಿನ ದೃಷ್ಟಿಗೆ ಇದು ಸವಾಲನ್ನೊಡ್ಡುತ್ತದೆ. ಹಾಗಿದ್ದರೆ ನಿಮ್ಮ ಸಮಯ ಇದೀಗ ಶುರು.
ಸಿಕ್ಕಿತೇ ನಿಮಗೆ ಪಿಯಾನೋ? ಇಲ್ಲವಾ? ಪಿಯಾನೋ ನಿಮ್ಮ ಕಣ್ಣ ಮುಂದೆಯೇ ಅಡಗಿದೆ ಆದರೂ ಸಿಗುತ್ತಿಲ್ಲವೆ? ಸುಳಿವು ಬೇಕೆ? ಪಿಯಾನೋ ಕೀಗಳ ಆಕಾರವನ್ನು ಕಲ್ಪಿಸಿಕೊಳ್ಳೀ. ಈಗ ಮತ್ತೊಮ್ಮೆ ಗಮನಿಸಿ. ಆದರೆ ನಿಮ್ಮ ಸಮಯ ಮುಗಿದಿದೆ. ನೀವು ಈಗಾಗಲೇ ಪಿಯಾನೋ ಕಂಡುಹಿಡಿದಿದ್ದರೆ ನಿಮಗೆ ಅಭಿನಂದನೆ. ಇಲ್ಲವಾದರೆ ಬೇಸರಿಸಿಕೊಳ್ಳಬೇಡಿ. ಒಳ್ಳೆಯ ಪಝಲ್ ಮಾಸ್ಟರ್ಗಳು ಕೂಡ ಇಂಥ ಚಿತ್ರಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಸೋಲುತ್ತಾರೆ. ಈಗ ಈ ಕೆಳಗಿನ ಚಿತ್ರ ನೋಡಿ.
ಇಲ್ಲಿದೆ ಉತ್ತರ!
ಅಂತೂ ಉತ್ತರ ಸಿಕ್ಕಿತಲ್ಲವೆ? ಇಂಥ ಭ್ರಮಾತ್ಮ ಚಿತ್ರಗಳಲ್ಲಿ ನಿಮ್ಮ ಮನಸ್ಸು ಮೆದುಳನ್ನು ತೊಡಗಿಸಿಕೊಳ್ಳುವುದರಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ಸಿಕ್ಕು ಚುರುಕುಗೊಳ್ಳುತ್ತದೆ. ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಉತ್ಸಾಹ ನಿಮ್ಮದಾಗುತ್ತದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:54 pm, Thu, 22 June 23