Viral Video: ಟಿವಿಯಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಿಸುತ್ತ ಈ ಬೆಕ್ಕಿನ ಮರಿ ಮಾಡಿದೇನು ನೋಡಿ? ಈ ಬೆಕ್ಕು ಅತ್ಯುತ್ತಮ ಗೋಲ್ ಕೀಪರ್ ಎಂದ ನೆಟ್ಟಿಗರು

ಮುದ್ದಾದ ಬೆಕ್ಕಿನ ಮರಿಯೊಂದು ಟಿವಿ ಮುಂದೆ ಕುಳಿತು ವೀಕ್ಷಿಸುತ್ತಿದ್ದ, ಫುಟ್ಬಾಲ್ ಪಂದ್ಯದಲ್ಲಿ ಆಟಗಾರರ ಚೆಂಡನ್ನು ಎಸೆಯುವಾಗ ಆ ಬೆಕ್ಕು ಗೋಲ್ ಕೀಪರ್ ನಂತೆ ಚೆಂಡನ್ನು ಹಿಡಿಯಲು ಪ್ರಯತ್ನಿಸುತ್ತದೆ. ಈ ಮುದ್ದಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಖಂಡಿತವಾಗಿಯೂ ಈ ಬೆಕ್ಕಿನ ಮರಿ ಹಿಂದಿನ ಜನ್ಮದಲ್ಲಿ ಗೋಲ್ ಕೀಪರ್ ಆಗಿತ್ತೇನೋ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.

Viral Video: ಟಿವಿಯಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಿಸುತ್ತ ಈ ಬೆಕ್ಕಿನ ಮರಿ ಮಾಡಿದೇನು ನೋಡಿ? ಈ ಬೆಕ್ಕು ಅತ್ಯುತ್ತಮ ಗೋಲ್ ಕೀಪರ್ ಎಂದ ನೆಟ್ಟಿಗರು
ವೈರಲ್​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 22, 2023 | 11:02 AM

ಸಾಕು ಪ್ರಾಣಿಗಳು ಮನೆಯಲ್ಲಿದ್ದರೆ, ಆ ಮನೆಯಲ್ಲಿ ಮನರಂಜನೆಗೆ ಯಾವ ಕೊರತೆಯೂ ಇಲ್ಲ. ಆ ಮುಗ್ಧ ಜೀವಿಗಳ ತುಂಟಾಟ, ತರ್ಲೆ ಆಟಗಳು ನೋಡಲು ಮುದ್ದಾಗಿರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಇಂತಹ ಸಾಕುಪ್ರಾಣಿಗಳ ಮುದ್ದಾದ ವೀಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹ ಮನರಂಜನಾತ್ಮಕ ವೀಡಿಯೋಗಳು ನಮ್ಮನ್ನು ಮನಸ್ಸು ಬಿಚ್ಚಿ ನಗುವಂತೆ ಮಾಡುತ್ತದೆ. ಮಾತ್ರವಲ್ಲದೆ ಇಂತಹ ವೀಡಿಯೋಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ. ಇತ್ತೀಚಿಗೆ ಇದೇ ರೀತಿಯ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಮನಸಾರೆ ನಗುವಂತೆ ಮಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮುಗ್ಧ ಬೆಕ್ಕಿನ ಮರಿಯೊಂದು ಟಿವಿ ಮುಂದೆ ಕುಳಿತು ವೀಕ್ಷಿಸುತ್ತಿದ್ದ, ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಟಗಾರರು ಎಸೆಯುತ್ತಿದ್ದ ಬಾಲ್ ನ್ನು ಕ್ಯಾಚ್ ಹಿಡಿಯಲು ಶತಪ್ರಯತ್ನಪಡುವುದನ್ನು ಕಾಣಬಹುದು. ಬೆಕ್ಕಿನ ಮರಿಯ ಈ ತರ್ಲೆ ಆಟ ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

ಫ್ಲಫಿ ಕಿಟನ್ಸ್ (@fluffy kittens) ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿರುವ ಈ ವೀಡಿಯೋದಲ್ಲಿ ಟಿವಿ ಮುಂದೆ ಫುಟ್ಬಾಲ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿದ್ದ ಬೆಕ್ಕಿನ ಮರಿ ಚೆಂಡನ್ನು ಹಿಡಿಯಲು ಪ್ರಯತ್ನಿಸುವ ದೃಶ್ಯಾವಳಿಯನ್ನು ಕಾಣಬಹುದು. ಮನೆಯವರೆಲ್ಲರೂ ಟಿವಿ ಮುಂದೆ ಕುಳಿತು ಫುಟ್ಬಾಲ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿದ್ದರು. ಜೊತೆಗೆ ಪುಟ್ಟ ಬೆಕ್ಕಿನ ಮರಿಯೊಂದು ಟಿವಿ ಕ್ಯಾಬಿನೆಟ್ ಪಕ್ಕದಲ್ಲಿಯೇ ಕುಳಿತು ಫುಟ್ಬಾಲ್ ಪಂದ್ಯಾವಳಿಯನ್ನು ಕುತೂಹಲದಿಂದ ವೀಕ್ಷಿಸುತ್ತಿರುತ್ತದೆ. ಆಟಗಾರರು ಚೆಂಡನ್ನು ಕಾಲಿನಿಂದ ಎಸೆಯುತ್ತಿದ್ದಂತೆ, ಟಿವಿ ಮುಂದೆ ಕುಳಿತು ಪಂದ್ಯಾವಳಿಯನ್ನು ನೋಡುತ್ತಿದ್ದ ಬೆಕ್ಕಿನ ಮರಿ ಗೋಲ್ ಕೀಪರ್ ನಂತೆ ಚೆಂಡನ್ನು ಹಿಡಿಯಲು ಪ್ರಯತ್ನಿಸುತ್ತದೆ. ಇದೇ ರೀತಿ ಆಟಗಾರರು ಚೆಂಡು ಎಸೆಯುವಾಗಲೆಲ್ಲಾ ಬೆಕ್ಕಿನ ಮರಿ ಟಿವಿ ಮುಂದೆ ಕುಳಿತು ಚೆಂಡನ್ನು ಹಿಡಿಯಲು ಯತ್ನಿಸುತ್ತದೆ. ಈ ಬೆಕ್ಕಿನ ತರ್ಲೆ ಆಟಕ್ಕೆ ಅಲ್ಲಿರುವರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುವುದನ್ನು ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:Viral News: 1 ರೂಪಾಯಿ ಚಿಕನ್ ಬಿರಿಯಾನಿಗಾಗಿ ಹೋಟೆಲ್ ಮುಂದೆ ಜಮಾಯಿಸಿದ ಜನ

ಇನ್ಸ್ಟಾಗ್ರಾಮ್​​​ನಲ್ಲಿ ವೈರಲ್ ಆಗಿರುವ ವೀಡಿಯೋ 4.2 ಮಿಲಿಯಲ್ ವೀಕ್ಷಣೆಗಳನ್ನು ಹಾಗೂ 318 K ಲೈಕ್ಸ್ ಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ‘ಈ ಬೆಕ್ಕು ಹಿಂದಿನ ಜನ್ಮದಲ್ಲಿ ಗೋಲ್ ಕೀಪರ್ ಆಗಿತ್ತು’ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಬೆಕ್ಕುಗಳು ನಿಜವಾಗಿಯೂ ಅದ್ಭುತವಾದ ಜೀವಿಗಳು. ನನ್ನ ಬೆಕ್ಕು ಯಾವಾಗಲೂ ಇದೇ ರೀತಿ ನೊಣಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುತ್ತದೆ’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಬೆಕ್ಕು ಎಷ್ಟು ಅದ್ಭುತವಾಗಿ ಗೋಲ್ ಕೀಪಿಂಗ್ ಮಾಡುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್