AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಈ ಝೀಬ್ರಾಗಳ ಹಿಂಡಿನಲ್ಲಿ ಪಿಯಾನೋ ಅಡಗಿದೆ, ಕಂಡುಹಿಡಿಯಬಲ್ಲಿರೆ?

Brain Teaser : ಇಷ್ಟೊಂದು ಝೀಬ್ರಾಗಳಿವೆ ಇಲ್ಲಿ. ಇವುಗಳ ಮಧ್ಯೆಯೇ ಪಿಯಾನೋ ಅಡಗಿದೆ. 21 ಸೆಕೆಂಡುಗಳಲ್ಲಿ ನೀವು ಅದನ್ನು ಕಂಡುಹಿಡಿಯಬೇಕು. ಆಗಬಹುದೆ?

Viral: ಈ ಝೀಬ್ರಾಗಳ ಹಿಂಡಿನಲ್ಲಿ ಪಿಯಾನೋ ಅಡಗಿದೆ, ಕಂಡುಹಿಡಿಯಬಲ್ಲಿರೆ?
ಎಲ್ಲಿದೆ ಇಲ್ಲಿ ಪಿಯಾನೋ?
ಶ್ರೀದೇವಿ ಕಳಸದ
|

Updated on:Jun 22, 2023 | 12:58 PM

Share

Optical Illusion: ಹೊರಗೆ ಮೋಡಬಿಸಿಲು, ಕೆಲ ಪ್ರದೇಶಗಳಲ್ಲಿ ಮಳೆ. ಒಟ್ಟಿನಲ್ಲಿ ಈ ಹವಾಮಾನಕ್ಕೆ ಬೆಚ್ಚಗೆ ಹೊದ್ದು ಮಲಗಬೇಕು ಎನ್ನಿಸುತ್ತದೆ. ಇಂಪಾದ ಹಾಡುಗಳನ್ನು ಕೇಳುತ್ತ, ಕೈಯಲ್ಲೊಂದು ಪುಸ್ತಕ ಹಿಡಿದು ಆಗಾಗ ಕಾಫಿ (Coffee) ಬಟ್ಟಲಿಗೆ ತುಟಿ ಇಡುತ್ತಿದ್ದರೆ ಇದೇ ಸ್ವರ್ಗ! ಆದರೆ ದುಡಿಮೆ ಎನ್ನವುದು ಇದೆಲ್ಲದಕ್ಕೆ ಅನುಕೂಲ ಮಾಡಿಕೊಡುವುದೆ? ಕೆಲಸದ ಒತ್ತಡಕ್ಕೆ ಬಿದ್ದ ಮೆದುಳು ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಹಠ ಹಿಡಿದು ಕುಳಿತುಬಿಡುತ್ತದೆ. ಆದರೆ ಕೆಲಸ ನಿಮಗಾಗಿ ಕಾಯುವುದೇ? ಗಡಿಯಾರ ನಿಮಗಾಗಿ ನಿಲ್ಲುವುದೆ? ಹೀಗಾದಾಗ ಏನು ಮಾಡಬೇಕು? ನಿಮ್ಮ ಬುದ್ಧಿಗೆ, ಕಣ್ಣಿಗೆ ಕಸರತ್ತು ಕೊಡಬೇಕು. ಇಲ್ಲೊಂದು ಭ್ರಮಾತ್ಮಕ ಚಿತ್ರವಿದೆ, ಗಮನಿಸಿ.

ಇಲ್ಲಿರುವ ರಾಶಿ ಝೀಬ್ರಾಗಳಲ್ಲಿ (Zebra) ಪಿಯಾನೊ ಅಡಗಿದೆ. 21 ಸೆಕೆಂಡುಗಳಲ್ಲಿ ನೀವದನ್ನು ಕಂಡುಹಿಡಿಯಬೇಕು. ಅನೇಕರು ಸೋಲನ್ನೊಪ್ಪಿಕೊಂಡಿದ್ದಾರೆ. ಕೆಲವೇ ಕೆಲವರು ಗುರುತಿಸುವಲ್ಲಿ ಶಕ್ಯರಾಗಿದ್ದಾರೆ. ಯಾಕೆ ಎಲ್ಲರೂ ಗುರುತಿಸಲು ಸಾಧ್ಯವಾಗಿಲ್ಲ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಕಣ್ಣಿನ ದೃಷ್ಟಿಗೆ ಇದು ಸವಾಲನ್ನೊಡ್ಡುತ್ತದೆ. ಹಾಗಿದ್ದರೆ ನಿಮ್ಮ ಸಮಯ ಇದೀಗ ಶುರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಿಕ್ಕಿತೇ ನಿಮಗೆ ಪಿಯಾನೋ? ಇಲ್ಲವಾ? ಪಿಯಾನೋ ನಿಮ್ಮ ಕಣ್ಣ ಮುಂದೆಯೇ ಅಡಗಿದೆ ಆದರೂ ಸಿಗುತ್ತಿಲ್ಲವೆ? ಸುಳಿವು ಬೇಕೆ? ಪಿಯಾನೋ ಕೀಗಳ ಆಕಾರವನ್ನು ಕಲ್ಪಿಸಿಕೊಳ್ಳೀ. ಈಗ ಮತ್ತೊಮ್ಮೆ ಗಮನಿಸಿ. ಆದರೆ ನಿಮ್ಮ ಸಮಯ ಮುಗಿದಿದೆ. ನೀವು ಈಗಾಗಲೇ ಪಿಯಾನೋ ಕಂಡುಹಿಡಿದಿದ್ದರೆ ನಿಮಗೆ ಅಭಿನಂದನೆ. ಇಲ್ಲವಾದರೆ ಬೇಸರಿಸಿಕೊಳ್ಳಬೇಡಿ. ಒಳ್ಳೆಯ ಪಝಲ್ ಮಾಸ್ಟರ್​​ಗಳು ಕೂಡ ಇಂಥ ಚಿತ್ರಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಸೋಲುತ್ತಾರೆ. ಈಗ ಈ ಕೆಳಗಿನ ಚಿತ್ರ ನೋಡಿ.

Viral Optical Illusion find the piano among zebras

ಇಲ್ಲಿದೆ ಉತ್ತರ!

ಅಂತೂ ಉತ್ತರ ಸಿಕ್ಕಿತಲ್ಲವೆ? ಇಂಥ ಭ್ರಮಾತ್ಮ ಚಿತ್ರಗಳಲ್ಲಿ ನಿಮ್ಮ ಮನಸ್ಸು ಮೆದುಳನ್ನು ತೊಡಗಿಸಿಕೊಳ್ಳುವುದರಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ಸಿಕ್ಕು ಚುರುಕುಗೊಳ್ಳುತ್ತದೆ. ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಉತ್ಸಾಹ ನಿಮ್ಮದಾಗುತ್ತದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:54 pm, Thu, 22 June 23

ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?