ಅಯೋಧ್ಯಾ ರಾಮ ಮಂದಿರ ಉದ್ಘಾಟನೆಯಾದ ವೇಳೆ ಗರ್ಭ ಗೃಹದಲ್ಲಿ ರಾಮ ಲಲ್ಲಾನ ಕೃಷ್ಣ ಶಿಲೆಯ ಭವ್ಯ ಮೂರ್ತಿ ಎಲ್ಲರ ಕಣ್ಮನ ಸೆಳೆದಿತ್ತು. ಇದೀಗಾ ಇದೇ ಮೂರ್ತಿಯನ್ನು ಹೋಲುವಂತೆ ನಡೆದಾಡುವ ಜೀವಂತ ರಾಮ ಲಲ್ಲಾನನ್ನು ಬಂಗಾಳದ ಕಲಾವಿದ ದಂಪತಿಗಳು ತಮ್ಮ ಕೈಚಳಕದಿಂದ ಸೃಷ್ಟಿಸಿದ್ದಾರೆ. ಪುಟ್ಟ ಬಾಲಕನಿಗೆ ಅಯೋಧ್ಯಾ ರಾಮ ಲಲ್ಲಾನ ರೀತಿಯಲ್ಲೇ ಮೇಕಪ್ ಮಾಡಲಾಗಿದೆ.
ಜನವರಿ 22 ರಂದು ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭ ನಡೆದಾಗಿನಿಂದ, ರಾಮ ಲಲ್ಲಾನನ್ನು ಹೋಲುವ ವಿಗ್ರಹವನ್ನು ರಚಿಸುವ ಆಳವಾದ ಆಸೆಯನ್ನು ಹೊಂದಿದ್ದ ಬಂಗಾಳದ ಕಲಾವಿದ ದಂಪತಿಗಳು. ನಿಖರವಾದ ಯೋಜನೆ ಮತ್ತು ಕಠಿಣ ಪರಿಶ್ರಮದಿಂದ ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಮೇಕಪ್ ಆರ್ಟಿಸ್ಟ್ ಆಶಿಶ್ ಕುಂದು ತನ್ನ ಪತ್ನಿಯ ಸಹಾಯದಿಂದ 9 ವರ್ಷದ ಬಾಲಕನನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾನ ವಿಗ್ರಹವನ್ನು ಹೋಲುವಂತೆ ಮೇಕಪ್ ಮಾಡಿದ್ದಾರೆ.
ಮನೆಯಲ್ಲಿ ತಯಾರಿಸಿದ ಮತ್ತು ಮಾರುಕಟ್ಟೆಯಲ್ಲಿ ಖರೀದಿಸಿದ ಮೇಕ್ಅಪ್ ಉತ್ಪನ್ನಗಳ ಸಂಯೋಜನೆಯ ಮೂಲಕ, ಕುಂದು ಅವರು ಕೇವಲ ತಿಂಗಳೊಳಗೆ ಈ ಅಸಾಮಾನ್ಯ ಸಾಧನೆಯನ್ನು ಮಾಡಿದರು.
ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ
ಬ್ಯೂಟಿ ಪಾರ್ಲರ್ ಮೂಲಕ ಜೀವನ ನಡೆಸುತ್ತಿದ್ದ ಕಲಾವಿದ ದಂಪತಿಗಳು, ಅಬೀರ್ ಎಂಬ ಬಾಲಕನನ್ನು ತಮ್ಮ ಕೈಚಳಕದ ಮೂಲಕ ರಾಮಲಲ್ಲಾನಾಗಿ ಪರಿವರ್ತಿಸಿದ್ದಾರೆ. ಬಾಲಕನನ್ನು ರಾಮ್ ಲಲ್ಲಾನ ವಿಗ್ರಹವಾಗಿ ಅಲಂಕರಿಸಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆದಿವೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ