Viral Video: ರಾಮ ಲಲ್ಲಾನಿಗೆ 14 ಬಗೆಯ ದೈವಿಕ ಶಕ್ತಿಯ ಆಭರಣ, ಇದನ್ನು ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ?  

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಸಾಂಗವಾಗಿ ನೆರವೇರಿದೆ. ಬಾಲ ರಾಮನ ಸುಂದರ ವಿಗ್ರಹವನ್ನು ಕಂಡು, ಈ  ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದು ರಾಮ ಭಕ್ತರು ಭಾವುಕರಾಗಿದ್ದಾರೆ. ಇನ್ನು ಬಾಲ ರಾಮನ ಸುಂದರ ವಿಗ್ರಹದ ಜೊತೆಗೆ ಬಾಲರಾಮನಿಗೆ ತೊಡಿಸಿದಂತಹ ವಿಶೇಷ ಆಭರಣಗಳು ಕೂಡಾ ಭಕ್ತರ ಮನ ಸೆಳೆದಿದೆ. ಅಷ್ಟಕ್ಕೂ ಈ ದೈವಿಕ ಶಕ್ತಿಯ  ಆಭರಣಗಳನ್ನು ತಯಾರಿಸಿದವರು ಯಾರು ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ. 

Viral Video: ರಾಮ ಲಲ್ಲಾನಿಗೆ 14 ಬಗೆಯ ದೈವಿಕ ಶಕ್ತಿಯ ಆಭರಣ, ಇದನ್ನು ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ?  
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 24, 2024 | 5:51 PM

ಕೋಟ್ಯಾಂತರ ಹಿಂದುಗಳ ಭವ್ಯ ರಾಮ ಮಂದಿರದ ಕನಸು ಸಾಕಾರಗೊಂಡಿದ್ದು, ಸೋಮವಾರದಂದು (ಜ.22) ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲ ರಾಮನಾಗಿ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾರೆ. ಬಾಲ ರಾಮನ ಸುಂದರ ವಿಗ್ರಹವನ್ನು ಕಂಡು, ಈ  ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದು ರಾಮ ಭಕ್ತರು ಭಾವುಕರಾಗಿದ್ದಾರೆ. ಇನ್ನು ಬಾಲ ರಾಮನ ಸುಂದರ ವಿಗ್ರಹದ ಜೊತೆಗೆ ಬಾಲರಾಮನಿಗೆ ತೊಡಿಸಿದಂತಹ ದೈವಿಕ ಶಕ್ತಿಯ  ಆಭರಣಗಳು ಕೂಡಾ ಭಕ್ತರ ಮನ ಸೆಳೆದಿದೆ. ರಾಮ ಲಲ್ಲಾ ವಿಗ್ರಹಕ್ಕೆ  ಅಲಂಕರಿಸಿರುವ ಪ್ರತಿಯೊಂದು ಆಭರಣವೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಈ ಆಭರಣಗಳ ವಿಶೇಷತೆಯ ಸಂಪೂರ್ಣ  ವಿವರಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಹಿರಂಗ ಪಡಡಿಸಿದೆ. ಅಷ್ಟಕ್ಕೂ ಈ ವಿಶೇಷ ಆಭರಣಗಳು ತಯಾರಿಸಿದವರು ಯಾರು ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಬಾಲ ರಾಮನ  ವಿಶೇಷ ಆಭರಣಗಳನ್ನು ಹರ್ಶೈಮಲ್ ಶ್ಯಾಮ್ಲಾಲ್ ಜ್ಯುವೆಲರ್ಸ್ (Harsahaimal Shiamalal Jewellers) ಅವರು ತಯಾರಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಧ್ಯಾತ್ಮ ರಾಮಾಯಣ, ವಾಲ್ಮೀಕಿ ರಾಮಾಯಣ, ರಾಮ ಚರಿತ ಮಾನಸ, ಆಳವಂದರ್ ಸ್ತೋತ್ರ ಸೇರಿದಂತೆ ಗ್ರಂಥಗಳ ಸಂಶೋಧನೆ ಮತ್ತು ಅಧ್ಯಯನಗಳ ಆಧಾರದ ಮೇಲೆ  ಬಾಲ ರಾಮನ ಆಭರಣಗಳನ್ನು ಉತ್ತರ ಪ್ರದೇಶದ ಲಕ್ನೋದ ಇಂಟರ್ ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ (IGI) ಪ್ರಮಾಣೀಕರಿಸಿದ ಹರ್ಶೈಮಲ್ ಶ್ಯಾಮ್ಲಾಲ್ ಜ್ಯುವೆಲರ್ಸ್ ವಿನ್ಯಾಸಗೊಳಿಸಿದೆ. ಮುಕುಟ, ಕುಂಡಲ, ಕಂಠ, ಕೌಸ್ತುಭ ಮಣಿ, ಪಡಿಕಾ, ವಿಜಯ ಹಾರ, ತೋಳು ಪಟ್ಟಿ, ಬಿಲ್ಲು ಬಾಣ, ತಿಲಕ, ಮುದ್ರಿಕ ಹೀಗೆ   ಬಾಲ ರಾಮನ 14 ಆಭರಣಗಳನ್ನು ಈ ಸಂಸ್ಥೆಯೇ ವಿನ್ಯಾಸಗೊಳಿಸಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Voompla (@voompla)

ಶ್ರೀ ರಾಮನ ಆಜ್ಞೆಯಂತೆ  ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಾಲ ರಾಮನಿಗೆ ಆಭರಣಗಳನ್ನು ರೂಪಿಸುವ ಜವಬ್ದಾರಿಯನ್ನು ನಮಗೆ ವಹಿಸಿಕೊಟ್ಟಿರುವುದಕ್ಕೆ, ನಮಗೆ ಅಪಾರ ಹೆಮ್ಮೆ ಮತ್ತು ಮತ್ತು ಗೌರವವಿದೆ ಎಂದು HSJ ಜ್ಯುವೆಲರ್ಸ್ ನಿರ್ದೇಶಕ ಅಂಕುರ್ ಆನಂದ್ ಹೇಳಿದ್ದಾರೆ.

@voompla ಎಂಬ ಇನ್ಸ್ಟಾಗ್ರಾಮ್  ಪೇಜ್ ಅಲ್ಲಿ ಈ ವಿಶೇಷ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಬಾಲ ರಾಮನಿಗಾಗಿ ಶುದ್ಧ ಚಿನ್ನ, ವಜ್ರ, ಪಚ್ಚೆ, ಮಾಣಿಕ್ಯ, ಮುತ್ತು ರತ್ನಗಳಿಂದ  ಮುಕುಟ, ತಿಲಕ, ವಿಜಯ ಹಾರ ಸೇರಿದಂತೆ 14 ಬಗೆಯ ಆಭರಣಗಳನ್ನು  ತಯಾರಿಸುತ್ತಿರುವಂತಹ ಪರಿಯನ್ನು ಕಾಣಬಹುದು.

ಇದನ್ನೂ ಓದಿ: ‘ಶ್ರೀಮಂತ ಹುಡುಗರನ್ನು ಸೆಳೆಯಲು ಯುವತಿಯರೇ ಈ ಸರ್ಜರಿ ಮಾಡಿಸಿ’; ಕಂಪನಿಗೆ ಕಂಟಕವಾದ ಈ ಜಾಹೀರಾತು

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 44 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ.  ಇನ್ನೂ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಆಭರಣ ತಯಾರಕರ ಪರಿಶ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:33 pm, Wed, 24 January 24

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್