Viral Photo: ನಿಮ್ಮ ಕಣ್ಣುಗಳಿಗೊಂದು ಸವಾಲು, ಈ ಚಿತ್ರದಲ್ಲಿ ಇರುವ ರಿಮೋಟ್​ ಅನ್ನು ಪತ್ತೆಹಚ್ಚಿ

ಸಣ್ಣ ಆಟ ಆಡೋಣವೇ? ಈ ವೈರಲ್ ಫೋಟೋದಲ್ಲಿ ಒಂದು ರಿಮೋಟ್​ ಅಡಗಿದೆ. ಇದನ್ನು ನಿಗದಿತ ಸಮಯದಲ್ಲಿ ಕಂಡುಹಿಡಿಯಿರಿ ಮತ್ತು ನಿಮ್ಮ ಬುದ್ಧಿವಂತಿಕೆ, ಸಾಮರ್ಥ್ಯವನ್ನು ತಿಳಿದುಕೊಳ್ಳಿ.

Viral Photo: ನಿಮ್ಮ ಕಣ್ಣುಗಳಿಗೊಂದು ಸವಾಲು, ಈ ಚಿತ್ರದಲ್ಲಿ ಇರುವ ರಿಮೋಟ್​ ಅನ್ನು ಪತ್ತೆಹಚ್ಚಿ
ವೈರಲ್ ಫೋಟೋ
Edited By:

Updated on: Jul 07, 2022 | 1:46 PM

ಬುದ್ಧಿವಂತಿಕೆಗೆ ಹಾಗೂ ಕಣ್ಣಿನ ಸಾಮರ್ಥ್ಯವನ್ನು ಪರೀಕ್ಷಿಸುವ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳು ಹಾಟ್​ಸ್ಪಾಟ್ ಆಗಿವೆ. ಇದೀಗ ಕಣ್ಣಿನ ಸಾಮರ್ಥ್ಯವನ್ನು ಅಳೆಯುವ ಮತ್ತು ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸುವ ಫೋಟೋವೊಂದು ವೈರಲ್ ಆಗುತ್ತಿದೆ. ಇದನ್ನೇ ಇಟ್ಟುಕೊಂಡು ಸಣ್ಣ ಆಟ ಆಡೋಣ. ಯುಕೆ ಮೂಲದ ಗೃಹೋಪಯೋಗಿ ಕಂಪನಿಯೊಂದು ರಚಿಸಿರುವ ಬ್ರೈನ್ ಟೀಸರ್​ನಲ್ಲಿ ಒಂದು ರಿಮೋಟ್​ ಅನ್ನು ಆದಷ್ಟು ಬೇಗ ಪತ್ತೆಹಚ್ಚಬೇಕು. ಹಲವರು ನಿಗದಿತ ಸಮಯದಲ್ಲಿ ರಿಮೋಟ್ ಪತ್ತೆಹಚ್ಚುವಲ್ಲಿ ಎಡವಿದ್ದಾರೆ. ಈಗ ನಿಮ್ಮ ಸರದಿ, ನೀವು ರೆಡಿ ಆಗಿದ್ದರೆ ಆ ವಸ್ತು ಕಂಡುಹಿಡಿಯಿರಿ, ಸಮಯದ ಷರತ್ತು ಅನ್ವಯವಾಗಲಿದೆ. ಎಷ್ಟು ಸಮಯ ಎಂದು ಮುಂದಕ್ಕೆ ಹೇಳುತ್ತೇವೆ.

ಇದನ್ನೂ ಓದಿ: Viral Video: ‘ಥಟ್ ಥಟ್’ ಎಂಬ ಹೊಸ ಹಾಡಿನೊಂದಿಗೆ ಬಂದ ಗಂಗ್ನಮ್ ಸ್ಟೈಲ್ ಖ್ಯಾತಿಯ Psy, ವೈರಲ್ ವಿಡಿಯೋ ಇಲ್ಲಿದೆ

ಬ್ರೈನ್ ಟೀಸರ್ ಅನ್ನು ScS ಹೆಸರಿನ ಗೃಹೋಪಯೋಗಿ ಕಂಪನಿಯು ಬ್ಲಾಗ್‌ನಲ್ಲಿ ಹಂಚಿಕೊಂಡಿದೆ. ಚಿತ್ರದಲ್ಲಿ ಸೋಫಾಗಳು, ಗೋಡೆ ಗಡಿಯಾರಗಳು, ಸಸ್ಯಗಳು, ಕುರ್ಚಿಗಳು, ಬೆಡ್​ಶೀಟ್​ಗಳು, ಫೋಟೋ ಫ್ರೇಮ್‌ಗಳು ಮತ್ತು ಕನ್ನಡಿಗಳಂತಹ ಹಲವಾರು ಪೀಠೋಪಕರಣಗಳನ್ನು ಒಳಗೊಂಡಿದೆ. ನೀವು ಇದರಲ್ಲಿ ಗುರುತಿಸಬೇಕಾದದ್ದು ರಿಮೋಟ್. ಕಂಪನಿಯು ಶೀರ್ಷಿಕೆಯೊಂದನ್ನು ಬರೆದು ರಿಮೋಟ್ ಎಲ್ಲಿದೆ? ಎಂದು ಪ್ರಶ್ನಿಸಿದೆ. ಅಲ್ಲದೆ ಶೇ.33ರಷ್ಟು ಮಂದಿಗೆ 1 ನಿಮಿಷದೊಳಗೆ ರಿಮೋಟ್ ಕಂಟ್ರೋಲ್ ಅನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ, ಈ ಸವಾಲನ್ನು ಜಯಿಸಲು 40 ಸೆಕೆಂಡುಗಳು ಎಂದು ಬರೆದುಕೊಂಡಿದೆ.

ಇದನ್ನೂ ಓದಿ:vViral: ನೀವು ಅನಿವಾಸಿ ಭಾರತೀಯರಾ? ನೆಟ್ಟಿಗರ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಅವರ ಉತ್ತರ ಏನು ಗೊತ್ತಾ?

ಈಗ ನೀವು ಮಾಡಬೇಕಿರುವುದು ಇಷ್ಟೆ, ಕೈಯಲ್ಲಿ ವಾಚ್ ಅಥವಾ ಟೈಮರ್ ಇದ್ದರೆ ತೆಗೆದುಕೊಳ್ಳಿ. ಕೇವಲ 40 ಸೆಕೆಂಡುಗಳ ಒಳಗಾಗಿ ಕೆಳಗೆ ಕಾಣಿಸುವ ಚಿತ್ರದಲ್ಲಿ ರಿಮೋಟ್ ಅನ್ನು ಪತ್ತೆಹಚ್ಚಬೇಕು. ಈಗ ನಿಮ್ಮ ಸಮಯ ಆರಂಭ, ರಿಮೋಟ್ ಹುಡುಕಿ.

1, 2, 3, …..40 ಈಗ ನಿಮ್ಮ ಸಮಯ ಮುಗಿದಿದೆ, ರಿಮೋಟ್ ಕಂಡುಹಿಡಿಯಲು ಎಷ್ಟು ಸೆಕೆಂಡುಗಳು ತೆಗೆದುಕೊಂಡಿತು? ನೀವು ನಿಗದಿತ ಸಮಯದೊಳಗೆ ಕಂಡುಹಿಡಿದಿದ್ದರೆ ನಿಮ್ಮ ಸಾಮರ್ಥ್ಯಕ್ಕೆ ಒಂದು ಸಲಾಮ್. ಆದರೆ ರಿಮೋಟ್ ಕಂಡುಹಿಡಿಯಲಾಗದೆ ಆ ಚಿತ್ರ ಇನ್ನೂ ನಿಮ್ಮ ತಲೆ ಕೆಡಿಸುತ್ತಿದೆಯೇ? ಹಾಗಿದ್ದರೆ ಕೆಳಗಿನ ಚಿತ್ರ ವೀಕ್ಷಿಸಿ ರಿಮೀಟ್​ಗೆ ಕೆಂಪು ಬಣ್ಣದ ವೃತ್ತ ಹಾಕಲಾಗಿದೆ.

ಇದನ್ನೂ ಓದಿ:Viral Video: ಇಂಗ್ಲೆಂಡ್ ರಾಜಕೀಯ ಬಿಕ್ಕಟ್ಟು: ನೇರಪ್ರಸಾರದ ವೇಳೆ ಮೇಜಿನ ಮೇಲೆ ಕಾಲಿಟ್ಟು ಆರಾಮವಾಗಿ ಕುಳಿತ ಟಿವಿ ನಿರೂಪಕನ ವಿಡಿಯೋ ವೈರಲ್