ಜೋರಾಗಿ ಮಳೆ ಸುರಿಯಲು ಆರಂಭಿಸುತ್ತಿದೆ ಅಂತಾದ್ರೆ ಆಶ್ರಯ ಹುಡುಕಲು ಓಡುತ್ತೇವೆ. ಆದರೆ ಕೊಲ್ಕತ್ತಾ ಪೊಲೀಸ್ ಹಂಚಿಕೊಂಡ ಒಂದು ಚಿತ್ರ ಹೃದಯಸ್ಪರ್ಶಿಯಾಗಿದೆ. ಮಳೆಯನ್ನೂ ಲೆಕ್ಕಿಸದೇ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಿರುವ ಟ್ರಾಫಿಕ್ ಪೊಲೀಸ್ಗೆ ಸಹಾಯಕರಾಗಿ ಶ್ವಾನಗಳು ನಿಂತಿವೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಚಿತ್ರದಲ್ಲಿ ಗಮನಿಸುವಂತೆ ಕೊಲ್ಕತ್ತಾದಲ್ಲಿ ಜೋರಾದ ಮಳೆ ಸುರಿಯುತ್ತಿದೆ. ಆ ಮಳೆಯಲ್ಲಿ ಛತ್ರಿ ಹಿಡಿದ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರು ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ತರುಣ್ ಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ. ವಾಹನಗಳಿಗೆ ನಿಲ್ಲುವಂತೆ ಕೈ ತೋರಿಸಿ ಸಿಗ್ನಲ್ ಮಾಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದು. ಅವರಿಗೆ ಬೆಂಬಲಿಗರಾಗಿ ಶ್ವಾನಗಳು ಅವರ ಬಳಿಯೇ ನಿಂತಿವೆ. ಮಳೆಯಲ್ಲಿ ನೆನೆಯುತ್ತಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡುತ್ತಿವೆ.
Moment of the Day!
Constable Tarun Kumar Mandal of East Traffic Guard, near the 7 point crossing at Park Circus. #WeCareWeDare pic.twitter.com/pnUGYIRKkA
— Kolkata Police (@KolkataPolice) September 18, 2021
ಕೊಲ್ಕತ್ತಾ ಪೊಲೀಸ್ ಈ ಹೃದಯಸ್ಪರ್ಶಿ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಾಕು ಪ್ರಾಣಿಯಾದ ನಾಯಿ ನಿಷ್ಠೆಯಿಂದ ಕೆಲಸ ನಿರ್ವಹಿಸುವಲ್ಲಿ ಹೆಸರು ಗಿಟ್ಟಿಸಿಕೊಂಡ ಪ್ರಾಣಿ. ನಾವು ಎಷ್ಟು ಪ್ರೀತಿ ತೋರುತ್ತೇವೆಯೋ ಅಷ್ಟೇ ನಮ್ಮ ರಕ್ಷಕನಾಗಿ ನಿಲ್ಲುತ್ತದೆ. ಮನುಷ್ಯರ ಒಡನಾಡಿ ಜೀವಿಯಾದ ಶ್ವಾನಗಳ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:
Viral Photo: ಒಂದು ಕೈಲಿ ಗನ್, ಮತ್ತೊಂದು ಕೈಲಿ ಐಸ್ಕ್ರೀಮ್; ಕಾಬೂಲ್ನಲ್ಲಿರುವ ತಾಲಿಬಾನ್ ಉಗ್ರರ ಫೋಟೋ ವೈರಲ್
Viral Photo: ಕಾರಿನ ಕಿಟಕಿಯಿಂದ ಎಕೆ-47 ತೋರಿಸಿದ ಯುವತಿ; ಆಮೇಲೆ ಆಗಿದ್ದೇನು?
(Viral Photo Dogs standing in support of Kolkata traffic police holding umbrellas in heavy rain heartwarming photo)