Viral Photo: ಅರುಣಾಚಲ ಪ್ರದೇಶದ ಸಿಎಂ ಜೊತೆ ವಾಲಿಬಾಲ್ ಆಡಿದ ಕೇಂದ್ರ ಸಚಿವ ಕಿರೆಣ್ ರಿಜಿಜು

Kiren Rijiju: ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಸ್ಥಳೀಯರೊಂದಿಗೆ ನೃತ್ಯ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಪ್ರಧಾನಿ ಅರುಣಾಚಲ ಪ್ರದೇಶದ ಸಿಎಂ ಜೊತೆ ಕಿರೆನ್ ರಿಜಿಜು ವಾಲಿಬಾಲ್ ಆಡಿದ್ದಾರೆ.

Viral Photo: ಅರುಣಾಚಲ ಪ್ರದೇಶದ ಸಿಎಂ ಜೊತೆ ವಾಲಿಬಾಲ್ ಆಡಿದ ಕೇಂದ್ರ ಸಚಿವ ಕಿರೆಣ್ ರಿಜಿಜು
ಅರುಣಾಚಲ ಪ್ರದೇಶದ ಸಿಎಂ ಜೊತೆ ವಾಲಿಬಾಲ್ ಆಡಿದ ಕೇಂದ್ರ ಸಚಿವ ಕಿರೆಣ್ ರಿಜಿಜು
Edited By:

Updated on: Nov 13, 2021 | 2:43 PM

ಕೇಂದ್ರ ಸರ್ಕಾರದ ಕಾನೂನು ಸಚಿವ ಕಿರೆಣ್ ರಿಜಿಜು ಇತ್ತೀಚೆಗೆ ಅರುಣಾಚಲ ಪ್ರದೇಶದ ಮೇಲ್ ಸುಬಾನ್‌ಸಿರಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನದಿ ದಡದ ಬಳಿ ಸಿಎಂ ಪೆಮಾ ಖಂಡು ಅವರೊಂದಿಗೆ ವಾಲಿಬಾಲ್ ಆಡಿರುವ ವಿಡಿಯೋ ವೈರಲ್ ಆಗಿದೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರೊಂದಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಕಿರೆಣ್ ರಿಜಿಜು ಈ ತಾವು ವಾಲಿಬಾಲ್ ಆಡಿದ ಫೋಟೋಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ಫೋಟೋಗಳಲ್ಲಿ ಒಂದರಲ್ಲಿ ಕಿರೆಣ್ ರಿಜಿಜು ಮತ್ತು ಸಿಎಂ ಪೆಮಾ ಖಂಡು ಬಿಲ್ಲುಗಾರಿಕೆ ಮಾಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಇಬ್ಬರೂ ನಾಯಕರು ವಾಲಿಬಾಲ್ ಆಡುತ್ತಿದ್ದಾರೆ. ಅರುಣಾಚಲ ಪ್ರದೇಶದ ಮೇಲಿನ ಸುಬನ್ಸಿರಿ ಜಿಲ್ಲೆಗೆ ಪ್ರವಾಸ ಮಾಡುವಾಗ ಸುಬನ್ಸಿರಿ ನದಿಯ ದಂಡೆಯ ಮಾರದಲ್ಲಿ ಬಿಲ್ಲುಗಾರಿಕೆ ಮತ್ತು ಬೀಚ್ ವಾಲಿಬಾಲ್ ಆಡಿದ್ದಾರೆ. ಪೆಮಾ ಖಂಡು ತಂಡವು ಪಂದ್ಯವನ್ನು ಗೆದ್ದಿದೆ ಎಂದು ಅರುಣಾಚಲ ಪ್ರದೇಶದ ಸಂಸದ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಬರೆದಿದ್ದಾರೆ.

ಜನರನ್ನು ಪ್ರೇರೇಪಿಸಲು ಕಿರೆಣ್ ರಿಜಿಜು ಆಗಾಗ್ಗೆ ಆರೋಗ್ಯ ಮತ್ತು ಫಿಟ್ನೆಸ್-ಸಂಬಂಧಿತ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ತಮ್ಮ ಹಾಡು, ನೃತ್ಯದ ಕೌಶಲ್ಯಗಳನ್ನು ಕೂಡ ಪ್ರದರ್ಶಿಸುತ್ತಿರುತ್ತಾರೆ. ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಸ್ಥಳೀಯರೊಂದಿಗೆ ನೃತ್ಯ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆ ನೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚಿದ್ದರು.

ಇದನ್ನೂ ಓದಿ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭರ್ಜರಿ ಡಾನ್ಸ್; ಅದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಏನು?

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Published On - 2:42 pm, Sat, 13 November 21