Viral: ಟ್ರಾಫಿಕ್‌ನಲ್ಲಿ ಹಾರ್ನ್ ಮಾಡಿದಾಗ ಏನಾಗುತ್ತದೆ? ಆಟೋ ರಿಕ್ಷಾದ ಹಿಂದೆ ಬರೆದ ಪ್ರಶ್ನೆ ವೈರಲ್

ಟ್ರಾಫಿಕ್​ನಲ್ಲಿ ಹಾರನ್ ಹಾಕುವ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಪ್ರಶ್ನೆಯೊಂದರ ಬ್ಯಾನರ್ ಅನ್ನು ಆಟೋ ರಿಕ್ಷಾದ ಹಿಂದೆ ಅಂಟಿಸಲಾಗಿದೆ. ಆ ವಿಭಿನ್ನ ಪ್ರಶ್ನೆ ಮತ್ತು ಅದಕ್ಕೆ ನೀಡಿದ ಆಯ್ಕೆಗಳು ಇಲ್ಲಿವೆ ನೋಡಿ.

Viral: ಟ್ರಾಫಿಕ್‌ನಲ್ಲಿ ಹಾರ್ನ್ ಮಾಡಿದಾಗ ಏನಾಗುತ್ತದೆ? ಆಟೋ ರಿಕ್ಷಾದ ಹಿಂದೆ ಬರೆದ ಪ್ರಶ್ನೆ ವೈರಲ್
ವೈರಲ್ ಆದ ಆಟೋ
Updated By: Rakesh Nayak Manchi

Updated on: Jul 15, 2022 | 11:37 AM

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಜನಪ್ರಿಯ ಗೇಮ್ ಶೋ ಎಲ್ಲರಿಗೂ ಗೊತ್ತೇ ಇದೆ. ಕನ್ನಡದಲ್ಲಿ ಈ ಹಿಂದೆ ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ನಡೆಸಿಕೊಡುತ್ತಿದ್ದರು. ಈ ಶೋದಲ್ಲಿ ಯಾವ ರೀತಿ ಪ್ರಶ್ನೆಯನ್ನು ಕೇಳಲಾಗುತ್ತದೆಯೋ ಅದೇ ರೀತಿ ಆಟೋ ರಿಕ್ಷಾ ಚಾಲಕರೊಬ್ಬರು ವಾಹನ ಚಾಲಕರಿಗೆ ವಿಭಿನ್ನವಾಗಿ ಪ್ರಶ್ನೆಯನ್ನು ಹಾಕಿದ್ದಾರೆ. ಟ್ರಾಫಿಕ್ ಜಾಮ್‌ಗಳ ಸಮಯದಲ್ಲಿ ಹಾರ್ನ್ ಮಾಡುವ ಸಮಸ್ಯೆ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಈ ಪ್ರಶ್ನೆಯನ್ನು ಎಲ್ಲರ ಗಮನಸೆಳಯುವಂತೆ ಕೇಳಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ಫೋಟೋ ವೈರಲ್ (Photo Viral) ಆಗುತ್ತಿದೆ.

ಇದನ್ನೂ ಓದಿ: Viral Video: ಮೀನುಗಾರರ ಬಲೆಗೆ ಸಿಕ್ಕಿಬಿದ್ದ 16 ಅಡಿ ಉದ್ದದ ಮೀನು! ಇದು ಭೂಕಂಪನದ ಸಂಕೇತವಂತೆ

ವೈರಲ್ ಫೋಟೋದಲ್ಲಿ ಇರುವಂತೆ, ಆಟೋ ರೀಕ್ಷಾದ ಹಿಂದೆ ಬ್ಯಾನರ್ ಒಂದನ್ನು ಹಾಕಲಾಗಿದ್ದು, ಇದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ತಮ್ಮನ್ನು ತಾವೇ ಪ್ರಶ್ನಿಸುವಂತೆ ಮಾಡಿದೆ. ಅಷ್ಟಕ್ಕೂ ಆಟೋದಲ್ಲಿದ್ದ ಪ್ರಶ್ನೆ ಮತ್ತು ಅದಕ್ಕೆ ನೀಡಲಾದ ಆಯ್ಕೆಗಳು ಈ ಕೆಳಗಿನಂತಿವೆ.

ಇದನ್ನೂ ಓದಿ: Viral Photo: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಈ ಜೋಡಿಗಳದ್ದು ಬೇರೆಯದ್ದೇ ‘ತುರ್ತು ಸ್ಥಿತಿ’

“ಟ್ರಾಫಿಕ್ ಮೇ ಹಾರ್ನ್ ಬಜಾನೆ ಸೆ ಕ್ಯಾ ಹೋತಾ ಹೈ (ನೀವು ಟ್ರಾಫಿಕ್‌ನಲ್ಲಿ ಹಾರ್ನ್ ಮಾಡಿದಾಗ ಏನಾಗುತ್ತದೆ)?”

ಎ) ಲೈಟ್ ಜಲ್ದಿ ಗ್ರೀನ್ ಹೋತಿ ಹೈ (ಟ್ರಾಫಿಕ್ ಲೈಟ್ ವೇಗವಾಗಿ ಹಸಿರು ಬಣ್ಣಕ್ಕೆ ತಿರುಗುತ್ತದೆ)

ಬಿ) ಸಡಕ್ ಚೌಡಿ ಹೋ ಜಾತಿ ಹೈ (ರಸ್ತೆ ಅಗಲವಾಗುತ್ತದೆ)

ಸಿ) ಗಾಡಿ ಉದ್ನೆ ಲಗ್ತಿ ಹೈ (ಕಾರು ಹಾರಲು ಪ್ರಾರಂಭಿಸುತ್ತದೆ)

ಡಿ) ಕುಚ್ ನಹೀ (ಏನೂ ಆಗುವುದಿಲ್ಲ)

ಈ ರೀತಿ ವಾಹನ ಸವಾರರಿಗೆ ಪ್ರಶ್ನೆಯೊಂದನ್ನು ಹಾಕಲಾಗಿರುವ ಆಟೋದ ಫೋಟೋವನ್ನು Tunku Varadarajan ಎಂಬ ಟ್ವಿಟ್ಟರ್‌ ಖಾತೆಯ್ಲಲಿ ಹಂಚಿಕೊಳ್ಳಲಾಗಿದ್ದು, “ದೆಹಲಿಯಲ್ಲಿ ತ್ರಿಚಕ್ರ ವಾಹನದಲ್ಲಿ, ಅದ್ಭುತ” ಎಂದು ಶೀರ್ಷಿಕೆ ನೀಡಲಾಗಿದೆ.

ಹಾರ್ನ್ ಮಾಡುವ ಸಮಸ್ಯೆಯ ಬಗ್ಗೆ ಜನರಲ್ಲಿ ಲಘುವಾದ ರೀತಿಯಲ್ಲಿ ಜಾಗೃತಿ ಮೂಡಿಸುವ ಈ ಪ್ರಯತ್ನವನ್ನು ಕಾಮೆಂಟ್‌ಗಳಲ್ಲಿ ಹಲವರು ಪ್ರಶಂಸಿಸಿದ್ದಾರೆ. ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ಕೆಬಿಸಿ ಮಾದರಿಯ ಪ್ರಶ್ನೆ… ವಿಸ್ಮಯ ಮತ್ತು ತಡೆರಹಿತ ಚಿಂತನೆ. ನಿಸ್ಸಂದೇಹವಾಗಿ ಒಬ್ಬರು ಪರಿಸ್ಥಿತಿಯ ಗುರುತ್ವವನ್ನು ಗ್ರಹಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: Viral Video: ಮೂರು ಸಿಂಹಗಳ ಮೇಲೆ ಏಕಾಂಗಿಯಾಗಿ ದಾಳಿ ನಡೆಸಿದ ನೀರಾನೆಯ ವಿಡಿಯೋ ವೈರಲ್

Published On - 11:21 am, Fri, 15 July 22