ಗುಜರಾತ್‌ನ ದಾಹೋದ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬಳು ಗುಜರಾತಿಯಲ್ಲಿ 200ಕ್ಕೆ 211 ಅಂಕ, ಗಣಿತದಲ್ಲಿ 200ಕ್ಕೆ 212 ಅಂಕ ಗಳಿಸಿದ್ದು, ಶಾಲಾ ಪರೀಕ್ಷೆಯ ಫಲಿತಾಂಶಗಳಲ್ಲಿನ ದೋಷವು ವಿವಾದವನ್ನು ಹುಟ್ಟುಹಾಕಿದೆ. ಖರಸಾನಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಂಶಿಬೆನ್ ಮನೀಶ್‌ಭಾಯ್ ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿನಿ ಇತ್ತೀಚೆಗೆ ಪರೀಕ್ಷೆಗೆ ಹಾಜರಾಗಿದ್ದಳು. ಇದೀಗ ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್ ಕಂಡು ಆಕೆಯ ಪೋಷಕರು ಶಾಕ್ ಆಗಿದ್ದಾರೆ. ಸದ್ಯ ಬಾಲಕಿಯ ಮಾರ್ಕ್ಸ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
200 ಅಂಕಗಳಿಗೆ ಪರೀಕ್ಷೆ ನಡೆದಿದ್ದು, ಆದರೆ ಎರಡು ವಿಷಯಗಳಲ್ಲಿ ವಿದ್ಯಾರ್ಥಿಗೆ 200ಕ್ಕೂ ಹೆಚ್ಚು ಅಂಕ ನೀಡಲಾಗಿದೆ. ಗುಜರಾತಿ ಭಾಷೆ ಪರೀಕ್ಷೆಯಲ್ಲಿ 200 ರಿಂದ 211 ಅಂಕಗಳನ್ನು ಮತ್ತು ಗಣಿತದಲ್ಲಿ 200 ರಿಂದ 212 ಅಂಕಗಳನ್ನು ನೀಡಲಾಗಿದೆ. ವಿದ್ಯಾರ್ಥಿ ವಂಶಿಬೆನ್ ಎಲ್ಲಾ ವಿಷಯಗಳಿಗೆ ಒಟ್ಟು 1000 ಅಂಕಗಳಿಗೆ 934 ಅಂಕಗಳನ್ನು ಪಡೆದಿದ್ದಾಳೆ.
ಇದನ್ನು ಓದಿ: ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು ಮದುವೆಯಾದ 70ರ ವೃದ್ಧನ ಬಂಧನ
ವಿದ್ಯಾರ್ಥಿನಿ ವಂಶಿಬೆನ್ ತಾನು ಪರೀಕ್ಷೆಯಲ್ಲಿ ಪಡೆದ ಈ ಅಂಕಗಳಿಗೆ ಸಂಬಂಧಿಸಿದ ಮಾರ್ಕ್ಸ್ ಕಾರ್ಡ್ ಅನ್ನು ತನ್ನ ಪೋಷಕರಿಗೆ ತೋರಿಸಿದ್ದಳು.ಇದನ್ನು ಕಂಡು ಪೋಷಕರು ಗೊಂದಲಕ್ಕೊಳಗಾಗಿದ್ದರು. ಸದ್ಯ ಈ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಪಂದಿಸಿದ ಶಿಕ್ಷಣ ಇಲಾಖೆ ತಪ್ಪಿಗೆ ಕಾರಣಗಳನ್ನು ಗುರುತಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ