Period Pain: ಮುಟ್ಟಿನ ನೋವು ತಡೆಯಲಾರದೆ ಪೇನ್ ಕಿಲ್ಲರ್ ಮಾತ್ರೆ ಸೇವಿಸಿ ಕೋಮಾಗೆ ಜಾರಿದ ಯುವತಿ
ಬ್ರೆಜಿಲ್‌ನ ಜಾಕ್ವೆಲಿನ್ ಗಮಾಕ್ ಎಂಬ 21 ವರ್ಷದ ಯುವತಿ ಮುಟ್ಟಿನ ನೋವು ತಾಳಲಾರದೇ ನೋವು ನಿವಾರಕ ಮಾತ್ರೆ ಸೇವಿಸಿದ್ದು, ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಕೋಮಾಗೆ ಜಾರಿದ್ದಾಳೆ. ಯುವತಿ ಮುಟ್ಟಿನ ನೋವಿಗೆ ಐಬುಪ್ರೊಫೆನ್ ಮಾತ್ರೆ ಸೇವನೆ ಮಾಡಿದ್ದಳು ಎಂದು ವರದಿಯಾಗಿದೆ.
ಮುಟ್ಟಿನ ಸೆಳೆತ ಅಥವಾ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ತುಂಬಾ ಸಾಮಾನ್ಯವಾಗಿದೆ. ಆದರೆ ಮುಟ್ಟಿನ ಸಮಯ ಹತ್ತಿರ ಬರುತ್ತಿದ್ದಂತೆ ಭಯ ಶುರುವಾಗುತ್ತದೆ. ಕೆಲವರು ವಿಪರೀತ ಹೊಟ್ಟೆ, ಸೊಂಟ ನೋವು ತಾಳಲಾರದೆ ಒದ್ದಾಡುತ್ತಾರೆ. ನೋವು ನಿವಾರಣೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವವರು ಇದ್ದಾರೆ. ಇತ್ತೀಚಿಗಷ್ಟೇ ವಿಪರೀತ ಮುಟ್ಟಿನ ನೋವಿನಿಂದ ಬಳಲುತ್ತಿದ್ದ ಇಂಗ್ಲೆಂಡ್ನ ಲೈಲಾ ಎಂಬ 16 ವರ್ಷದ ಬಾಲಕಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಳು. ಇದೀಗ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಬ್ರೆಜಿಲ್‌ನ ಜಾಕ್ವೆಲಿನ್ ಗಮಾಕ್ ಎಂಬ ಯುವತಿ ಮುಟ್ಟಿನ ನೋವು ತಾಳಲಾರದೇ ನೋವು ನಿವಾರಕ ಮಾತ್ರೆ ಸೇವಿಸಿದ್ದು, ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದ್ದು ಕೋಮಾಗೆ ಜಾರಿದ್ದಾಳೆ. ಯುವತಿ ಮುಟ್ಟಿನ ನೋವಿಗೆ ಐಬುಪ್ರೊಫೆನ್ ಮಾತ್ರೆ ಸೇವನೆ ಮಾಡಿದ್ದಾಳೆ. ಮಾತ್ರೆ ಸೇವಿಸಿದ ಕೆಲ ಹೊತ್ತಿನ ಬಳಿಕ ಕಣ್ಣು ನೋವು ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ಪೋಷಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ಐಸಿಯುಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಕೋಮಾಗೆ ಜಾರಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನು ಓದಿ: ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು ಮದುವೆಯಾದ 70ರ ವೃದ್ಧನ ಬಂಧನ
ಜಾಕ್ವೆಲಿನ್, ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಪರಿಣಾಮ ಆಕೆ ತೆಗೆದುಕೊಂಡ ನೋವು ನಿವಾರಕ ಮಾತ್ರೆ ಪ್ರಾಣಕ್ಕೆ ಕಂಟಕವಾಗಿದೆ. ಸದ್ಯ 17 ದಿನಗಳ ಬಳಿಕ ಯುವತಿ ಕೋಮಾದಿಂದ ಹೊರಬಂದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ವರದಿಯಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:05 am, Wed, 8 May 24