Viral Post: ಇಂಡಿಗೋ ಪ್ರಯಾಣಿಕರೊಬ್ಬರ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆ; ಫೋಟೋ ವೈರಲ್

|

Updated on: Feb 14, 2024 | 1:00 PM

ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿರುವ ಬಗ್ಗೆ ವಿಮಾನದಿಂದ ಹೊರಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​ ಹಂಚಿಕೊಂಡಿದ್ದಕ್ಕೆ ಇಂಡಿಗೋ ಪ್ರತಿಕ್ರಿಯಿಸಿದ್ದು, 'ಆರೋಪ ನಿಜವೇ ಆಗಿದ್ದಲ್ಲಿ ಕ್ಷಮೆ ಯಾಚಿಸುತ್ತಿದ್ದೇವೆ. ಆದರೆ, ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿರುವ ಘಟನೆ ನಮ್ಮಲ್ಲಿ ಪ್ರಯಾಣಿಸುವಾಗ ವರದಿಯಾಗಿಲ್ಲ' ಎಂದು ಹೇಳಿಕೊಂಡಿದೆ.

Viral Post: ಇಂಡಿಗೋ ಪ್ರಯಾಣಿಕರೊಬ್ಬರ  ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ  ಪತ್ತೆ; ಫೋಟೋ ವೈರಲ್
Viral Post
Follow us on

ಬೆಂಗಳೂರು-ಚೆನ್ನೈ ನಡುವೆ ಕಾರ್ಯನಿರ್ವಹಿಸುವ 6E-904 ವಿಮಾನದಲ್ಲಿ ಪ್ರಯಾಣಿಕರಿಗೊಬ್ಬರಿಗೆ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿದೆ. ಪ್ರಯಾಣಿಕ ತನ್ನ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ಯಾಂಡ್‌ವಿಚ್‌ನ ಫೋಟೋದೊಂದಿಗೆ ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗಿದೆ. ಫೆಬ್ರುವರಿ 1 ರಂದು ಈ ಘಟನೆ ನಡೆದಿದ್ದು, ಇದೀಗಾ ಈ ಕುರಿತು ಇಂಡಿಗೋ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದೆ.

ಆದರೆ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿರುವ ಬಗ್ಗೆ ವಿಮಾನದಿಂದ ಹೊರಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​ ಹಂಚಿಕೊಂಡಿದ್ದಕ್ಕೆ ಇಂಡಿಗೋ ಪ್ರತಿಕ್ರಿಯಿಸಿದ್ದು, ‘ಆರೋಪ ನಿಜವೇ ಆಗಿದ್ದಲ್ಲಿ ಕ್ಷಮೆ ಯಾಚಿಸುತ್ತಿದ್ದೇವೆ. ಆದರೆ, ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿರುವ ಘಟನೆ ನಮ್ಮಲ್ಲಿ ವರದಿಯಾಗಿಲ್ಲ’ ಎಂದು ಹೇಳಿಕೊಂಡಿದೆ.

“ನಮ್ಮ ವಿಮಾನದಲ್ಲಿನ ಊಟದ ಗುಣಮಟ್ಟ ಮತ್ತು ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರತಿಷ್ಠಿತ ಕ್ಯಾಟರರ್‌ಗಳಿಂದ ಪಡೆಯಲಾಗುತ್ತದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಮತ್ತು ಅತ್ಯುತ್ತಮವಾದ ವಿಮಾನದಲ್ಲಿನ ಅನುಭವವನ್ನು ಒದಗಿಸಲು ಮತ್ತು ಎಲ್ಲಾ ಆಹಾರದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ” ಎಂದು ಇಂಡಿಗೋ ಪೋಸ್ಟ್​​ಗೆ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ಮೋದಿ ಕಟೌಟ್‌ ತಬ್ಬಿಕೊಂಡು, ಸೊಂಟ ಬಳುಕಿಸುತ್ತಾ ರೀಲ್ಸ್​​ ಮಾಡಿದ ಮಹಿಳೆ

ಈ ಹಿಂದೆ ಇಂತದ್ದೇ ಘಟನೆಯೊಂದು ನಡೆದಿತ್ತು. ವಿಮಾನದಲ್ಲಿ ನೀಡಲಾದ ಸ್ಯಾಂಡ್‌ವಿಚ್‌ನಲ್ಲಿ ಹುಳು ಕಂಡುಬಂದಿದೆ. ಡಿಸೆಂಬರ್ 29 ರಂದು ದೆಹಲಿಯಿಂದ ಮುಂಬೈಗೆ 6E 6107 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ. ಜನವರಿ 2 ರಂದು, ಆಹಾರ ಸುರಕ್ಷತಾ ನಿಯಂತ್ರಕ ಎಫ್‌ಎಸ್‌ಎಸ್‌ಎಐ ಇಂಡಿಗೋಗೆ ಪ್ರಯಾಣಿಕರಿಗೆ ಅಸುರಕ್ಷಿತ ಆಹಾರವನ್ನು ನೀಡಿದ್ದಕ್ಕಾಗಿ ಶೋಕಾಸ್ ನೋಟಿಸ್ ನೀಡಿತ್ತು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ