IAS Factory: 75 ಮನೆಗಳಿರುವ ಈ ಸಣ್ಣ ಗ್ರಾಮ 51ಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳ ತವರೂರು
ಇಲ್ಲೊಂದು ಗ್ರಾಮ 'ಐಎಎಸ್ ಫ್ಯಾಕ್ಟರಿ' ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.ಈ ಪುಟ್ಟ ಹಳ್ಳಿಯಲ್ಲಿ ಒಟ್ಟು 75 ಮನೆಗಳಿದ್ದು,ಈ ಗ್ರಾಮದ 51ಕ್ಕೂ ಹೆಚ್ಚು ಮಂದಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಈ ಹಳ್ಳಿಯ ನೀರು-ಗಾಳಿಯಲ್ಲಿ ಏನಾದ್ರೂ ಮ್ಯಾಜಿಕ್ ಇರಲೇಬೇಕು ಎಂಬ ಪ್ರಶ್ನೆ ಹುಟ್ಟುವುದು ಸಹಜ.
ಐಎಎಸ್, ಐಪಿಎಸ್ ಅಧಿಕಾರಿಯಾಗಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗುವುದು ಅಷ್ಟು ಸುಲಭದ ಕೆಲಸವಲ್ಲ. ಈ ಪರೀಕ್ಷೆಗಳನ್ನು ಭೇದಿಸಲು ಅನೇಕ ವಿದ್ಯಾರ್ಥಿಗಳು ವರ್ಷಗಳ ಕಾಲ ಹೆಣಗಾಡುತ್ತಾರೆ. ಆದರೆ ಇಲ್ಲೊಂದು ಗ್ರಾಮ ‘ಐಎಎಸ್ ಫ್ಯಾಕ್ಟರಿ’ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಹೌದು ಈ ಪುಟ್ಟ ಹಳ್ಳಿಯಲ್ಲಿ ಒಟ್ಟು 75 ಮನೆಗಳಿದ್ದು,ಈ ಗ್ರಾಮದ 51ಕ್ಕೂ ಹೆಚ್ಚು ಮಂದಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಹಾಗಾಗಿಯೇ ಈ ಪುಟ್ಟ ಗ್ರಾಮ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಈ ಹಳ್ಳಿಯ ನೀರು-ಗಾಳಿಯಲ್ಲಿ ಏನಾದ್ರೂ ಮ್ಯಾಜಿಕ್ ಇರಲೇಬೇಕು ಎಂದು ನೆಟ್ಟಿಗರು ಹೇಳುತ್ತಾರೆ.
ಉತ್ತರ ಪ್ರದೇಶದ ಜೌನ್‌ಪುರ್ ಜಿಲ್ಲೆಯ ಮಾಧೋಪಟ್ಟಿ ಎಂಬ ಗ್ರಾಮದಲ್ಲಿ ಇದುವರೆಗೆ ಸುಮಾರು 51 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಇದ್ದಾರೆ . ಯುಪಿ ರಾಜಧಾನಿ ಲಕ್ನೋದಿಂದ 300 ಕಿಮೀ ದೂರದಲ್ಲಿರುವ ಮಾಧೋಪಟ್ಟಿ ಗ್ರಾಮವು ದೇಶದಲ್ಲಿ ಅತಿ ಹೆಚ್ಚು ಐಎಎಸ್ ಮತ್ತು ಐಪಿಎಸ್‌ಗಳನ್ನು ಹೊಂದಿರುವ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಷ್ಟೆಲ್ಲಾ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಹುಟ್ಟು ಹಾಕಿರುವ ಈ ಪುಟ್ಟ ಗ್ರಾಮ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಈ ಹಳ್ಳಿಯ ನೀರು-ಗಾಳಿಯಲ್ಲಿ ಏನಾದ್ರೂ ಮ್ಯಾಜಿಕ್ ಇರಲೇಬೇಕು. ಇಲ್ಲದಿದ್ದರೆ ಕೇವಲ 75 ಮನೆಗಳಿರುವ ಗ್ರಾಮದಲ್ಲಿ 51ಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳು ಇರೋದು ಹೇಗೆ? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಪ್ರತಿ ಮನೆಯಲ್ಲೂ ಐಎಎಸ್, ಐಪಿಎಸ್ ಇದ್ದಾರೆ.ಹಾಗಾಗಿ ಇದನ್ನು ಐಎಎಸ್ ಫ್ಯಾಕ್ಟರಿ ಎನ್ನುತ್ತಾರೆ. ಅಲ್ಲದೇ ಭಾರತದಲ್ಲಿ ಅತಿ ಹೆಚ್ಚು ನಾಗರಿಕ ಸೇವೆಗಳಲ್ಲಿ ಅಭ್ಯರ್ಥಿಗಳನ್ನು ಹೊಂದಿರುವ ಗ್ರಾಮವೂ ಕೂಡ ಹೌದು.
View this post on Instagram
ಮಧೋಪಟ್ಟಿ ಗ್ರಾಮ ಶಿಕ್ಷಣ ಕೇಂದ್ರವಾಗಿದೆ. ಈ ಗ್ರಾಮದ ಅನೇಕ ಅಧಿಕಾರಿಗಳು ಬಾಹ್ಯಾಕಾಶ, ಪರಮಾಣು ಸಂಶೋಧನೆ, ಕಾನೂನು ಸೇವೆಗಳು ಮತ್ತು ಬ್ಯಾಂಕಿಂಗ್‌ನಲ್ಲಿ ಉನ್ನತ ವೃತ್ತಿಜೀವನದಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಮೋದಿ ಕಟೌಟ್ ತಬ್ಬಿಕೊಂಡು, ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ ಮಹಿಳೆ
ಈ ಗ್ರಾಮವು ನಾಲ್ವರು ಐಎಎಸ್ ಸಹೋದರರಾದ ವಿನಯ್ ಕುಮಾರ್ ಸಿಂಗ್, ಛತ್ರಪಾಲ್ ಸಿಂಗ್, ಅಜಯ್ ಕುಮಾರ್ ಸಿಂಗ್ ಮತ್ತು ಶಶಿಕಾಂತ್ ಸಿಂಗ್ ಅವರಿಗೆ ಹೆಸರುವಾಸಿಯಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ