Viral Post: ಕೇವಲ 5ವರ್ಷ ದುಡಿದು, ಜೀವನಪೂರ್ತಿ ಆರಾಮಾಗಿರಿ, ವಿದ್ಯಾರ್ಹತೆ ಅಗತ್ಯವಿಲ್ಲ; ಜಾಹೀರಾತು ವೈರಲ್​​

|

Updated on: Dec 22, 2023 | 2:39 PM

ದಿನಪತ್ರಿಕೆಯೊಂದರಲ್ಲಿ ಬಂದ ಜಾಹೀರಾತೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಕೆಲಸವು ಐದು ವರ್ಷಗಳವರೆಗೆ ಇರುತ್ತದೆ. ಅದರ ನಂತರ ನಿಮ್ಮ ಜೀವನದುದ್ದಕ್ಕೂ ನೀವು ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತೀರಿ ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.

Viral Post: ಕೇವಲ 5ವರ್ಷ ದುಡಿದು, ಜೀವನಪೂರ್ತಿ ಆರಾಮಾಗಿರಿ, ವಿದ್ಯಾರ್ಹತೆ ಅಗತ್ಯವಿಲ್ಲ; ಜಾಹೀರಾತು ವೈರಲ್​​
Viral Advertisement
Image Credit source: Pinterest
Follow us on

ಮಹಾರಾಷ್ಟ್ರ: ದಿನಪತ್ರಿಕೆಯೊಂದರಲ್ಲಿ ಬಂದ ಜಾಹೀರಾತೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 288 ಹುದ್ದೆಗಳನ್ನು ಭರ್ತಿ ಮಾಡುವ ಜಾಹೀರಾತು ಇದಾಗಿದ್ದು, ನಿಮಗೆ ಭಾರಿ ಸಂಬಳ ಮತ್ತು ಹಲವು ಸೌಲಭ್ಯಗಳು ಸಿಗುತ್ತವೆ ಎಂದು ಹೇಳಲಾಗಿದೆ. ಈ ಕೆಲಸವು ಐದು ವರ್ಷಗಳವರೆಗೆ ಇರುತ್ತದೆ. ಅದರ ನಂತರ ನಿಮ್ಮ ಜೀವನದುದ್ದಕ್ಕೂ ನೀವು ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತೀರಿ ಎಂದು ಬರೆಯಲಾಗಿದೆ. ಆದರೆ ಜಾಹೀರಾತು ನೀಡಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರನ್ನು ಒಳಗೊಂಡಿಲ್ಲ. ಇದು 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ವಿಶಿಷ್ಟ ಜಾಹೀರಾತಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಏನಿದು ಜಾಹೀರಾತು ?

ಮಹಾರಾಷ್ಟ್ರ ವಿಧಾನಸಭೆಯ 288 ಶಾಸಕ ಸ್ಥಾನಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಕೇವಲ 5 ವರ್ಷ ಶಾಸಕರಾಗಿ ಕೆಲಸ ಮಾಡಿ. ನಂತರ ನೀವು ನಿಮ್ಮ ಜೀವನದಲ್ಲಿ ಮತ್ತೆ ಕೆಲಸ ಮಾಡುವ ಅಗತ್ಯವಿಲ್ಲ. ಈ ಹುದ್ದೆಗೆ ಯಾವುದೇ ಅನುಭವದ ಅಗತ್ಯವಿಲ್ಲ. ವಿದ್ಯಾಭ್ಯಾಸ ಮಾಡದಿದ್ದರೂ ಮುಂದುವರೆಯುತ್ತದೆ. ಅಪರಾಧಗಳಿದ್ದರೂ ನಡೆಯುತ್ತದೆ. ಅಲ್ಲದೆ, ನೀವು ಕಚೇರಿಯಲ್ಲಿ ಇಲ್ಲದಿದ್ದರೂ ಸಹ ತಿಂಗಳಿಗೆ 1 ಲಕ್ಷ 90 ಸಾವಿರ ಸಂಬಳ ಸಿಗಲಿದೆ ಎಂದು ಜಾಹೀರಾತಿನಲ್ಲಿ ನಮೂದಿಸಲಾಗಿದೆ.

ಸೌಲಭ್ಯಗಳು ಏನೇನು?

  • ಮುಂಬೈನಲ್ಲಿ ಶಾಸಕರ ನಿವಾಸಗಳಲ್ಲಿ ಯಾವುದೇ ಶುಲ್ಕ ಪಾವತಿಸದೆ ಫ್ಲ್ಯಾಟ್‌ಗಳನ್ನು ಪಡೆಯಬಹುದಾಗಿದೆ. ಅಂದರೆ ಶಾಸಕರಿಗೆ ಉಚಿತ ವಸತಿ ಸೌಲಭ್ಯ ಸಿಗಲಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.
  • ಶಾಸಕರಿಗೆ ಶಾಸಕರ ಕ್ಯಾಂಟೀನ್‌ನಲ್ಲಿ ಕೇವಲ 20/- ರೂ.ಗಳ ಊಟ ಸಿಗಲಿದೆ.
  • ಶಾಸಕರಿಗೆ ಫೋನ್ ಮಾಡಲು 15,000/- ಭತ್ಯೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ 3 ಉಚಿತ ದೂರವಾಣಿಗಳು.
  • ಶಾಸಕರಿಗೆ 50 ಸಾವಿರ ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಅಲ್ಲದೆ ನಾಲ್ಕು ಸಾವಿರ ಲೀಟರ್ ನೀರು ಉಚಿತ. ಜೊತೆಗೆ ಕುಟುಂಬದೊಂದಿಗೆ 34 ವಿಮಾನ ಪ್ರಯಾಣ ಉಚಿತವಾಗಿರುತ್ತದೆ. ಉಚಿತ ಪೆಟ್ರೋಲ್ ದೊರೆಯಲಿದೆ.
  • ರೈಲ್ವೆಯಲ್ಲಿ ಮೊದಲ ಎಸಿ (ಫಸ್ಟ್ ಎಸಿ) ಅನಿಯಮಿತ ಪ್ರಯಾಣ ಕನಿಷ್ಠ 5 ವರ್ಷಗಳವರೆಗೆ ಲಭ್ಯವಿರುತ್ತದೆ.

ಇದನ್ನೂ ಓದಿ: ಪತ್ನಿಯ ಮೇಲಿನ ಕೋಪಕ್ಕೆ ರಸ್ತೆಬದಿ ನಿಲ್ಲಿಸಿದ್ದ 20 ಕಾರುಗಳ ಗಾಜು ಹೊಡೆದು ಕೋಪ ತೀರಿಸಿಕೊಂಡ ಪತಿರಾಯ

ಎಲ್ಲಾ ಮೂಲಸೌಕರ್ಯಗಳಿರುವ ಆರಾಮದಾಯಕ ಜೀವನ ನಿಮ್ಮದಾಗಿಸಬಹುದು. ಎಂಎಲ್ ಎ ಆಗು. ನಿಮ್ಮೊಂದಿಗೆ ನಿಮ್ಮ ಮೊಮ್ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಈ ಜಾಹೀರಾತು ಎಲ್ಲಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ.
ಜೊತೆಗೆ ಸಾಕಷ್ಟು ಟೀಕೆಗೂ ಕಾರಣವಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: