Viral Video: ಅವಧಿಪೂರ್ವವಾಗಿ ಜನಿಸಿದ ಶಿಶುಗಳ ಪ್ರಾಣ ರಕ್ಷಣೆಗೆ ಹೊಸ ತಂತ್ರಜ್ಞಾನ, ಪ್ರಯೋಗಕ್ಕೆ ಕುರಿ ಮರಿಯ ಬಳಕೆ 

ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇಲ್ಲೊಂದು ವಿಜ್ಞಾನಿಗಳ ತಂಡ ಅವಧಿಪೂರ್ವವಾಗಿ ಜನಿಸಿದ ಶಿಶುಗಳ ಪ್ರಾಣ ರಕ್ಷಣೆಗಾಗಿ  ಮತ್ತು ಅಂತಹ ಶಿಶುಗಳ ಸರಿಯಾದ ಬೆಳವಣಿಗೆಗಾಗಿ ಕೃತಕ ಗರ್ಭಾಶಯ ತಂತ್ರಜ್ಞಾನವನ್ನು ಕಂಡುಹಿಡಿದಿದೆ. 

Viral Video: ಅವಧಿಪೂರ್ವವಾಗಿ ಜನಿಸಿದ ಶಿಶುಗಳ ಪ್ರಾಣ ರಕ್ಷಣೆಗೆ ಹೊಸ ತಂತ್ರಜ್ಞಾನ, ಪ್ರಯೋಗಕ್ಕೆ ಕುರಿ ಮರಿಯ ಬಳಕೆ 
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 22, 2023 | 4:08 PM

ವಿಜ್ಞಾನ ಕ್ಷೇತ್ರದಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಮಾನವನ ಕೆಲಸವನ್ನು ಸುಲಭಗೊಳಿಸುವ ಯಂತ್ರಗಳನ್ನು, ರೋಬೋಟ್ ಸೇರಿದಂತೆ ಜೀವಗಳನ್ನು ಉಳಿಸಲು ವೈದ್ಯಕೀಯ ಕ್ಷೇತ್ರಗಳಲ್ಲೂ ಹಲವಾರು ಆವಿಷ್ಕಾರಗಳು ನಡೆಯುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವಿಜ್ಞಾನಿಗಳ ತಂಡ ಅವಧಿಪೂರ್ವವವಾಗಿ ಜನಿಸಿದ ಶಿಶುಗಳ ಪ್ರಾಣ ರಕ್ಷಣೆಗಾಗಿ ಮತ್ತು  ಸರಿಯಾದ ಬೆಳವಣಿಗೆಗಾಗಿ ಕೃತಕ ಗರ್ಭಾಶಯ ತಂತ್ರಜ್ಞಾನವನ್ನು ಕಂಡುಹಿಡಿದಿದೆ.  ಕೆಲವೊಮ್ಮೆ ಅವಧಿ ಪೂರ್ವವಾಗಿ ಜನಿಸಿದ ಶಿಶುಗಳು ಸರಿಯಾದ ಪೋಷಣೆ ಸಿಗದೆ ಸಾವನ್ನಪ್ಪುವ ಅಥವಾ ಸರಿಯಾಗಿ ಬೆಳವಣಿಗೆ ಹೊಂದದಿರುವ ಸಾಧ್ಯತೆಯಿರುತ್ತವೆ.  ಹಾಗಾಗಿ ಪ್ರಸವಪೂರ್ವವಾಗಿ  ಜನಿಸಿದ ಶಿಶುಗಳ ರಕ್ಷಣೆಗಾಗಿ ಈ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರಸ್ತುತ ಅವಧಿ ಪೂರ್ವವಾಗಿ ಜನಿಸಿದ ಶಿಶುಗಳನ್ನು ಕಾಪಾಡಿಕೊಳ್ಳಲು ವೆಂಟಿಲೇಟರ್ ವ್ಯವಸ್ಥೆಯಲ್ಲಿ ಆ ಶಿಶುಗಳನ್ನು ಇರಿಸಗುತ್ತದೆ. ಇದರಿಂದ ಮಗು ಸಂಪೂರ್ಣವಾಗಿ  ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.   ಅದೇ ರೀತಿ ಇದೀಗ ಅವಧಿ ಪೂರ್ವವಾಗಿ ಜನಿಸಿದ ಶಿಶುಗಳನ್ನು ಬದುಕಿಸಿ  ಜೋಪಾನವಾಗಿರಿಸಲು ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನದ ಸಹಾಯದಿಂದ ಅಕಾಲಿಕವಾಗಿ ಜನಿಸಿದ ಶಿಶುವಿಗೆ ಗರ್ಭದೊಳಗಿರುವಂತಹ ಉಷ್ಣತೆಯ ವಾತಾವರಣವನ್ನು ಒದಗಿಸಿ, ಮಗುವಿಗೆ ಉತ್ತಮ ಆರೋಗ್ಯಕರ ಜೀವನವನ್ನು ನೀಡಬಹುದು.  ಇದೀಗ  ಪ್ರಸವಪೂರ್ವ ಕುರಿ ಮರಿಯ ಮೇಲೆ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು Massimo ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅವಧಿಪೂರ್ವವಾಗಿ ಜನಿಸಿದ ಶಿಶುಗಳನ್ನು ಉಳಿಸಲು ವಿಜ್ಞಾನಿಗಳು ಕೃತಕ ಗರ್ಭದ ರೀತಿಯ ಸಾಧನವನ್ನು ರಚಿಸಿದ್ದಾರೆ. ಈ ಸಾಧನವನ್ನು ಉಪಯೋಗಿಸಿಕೊಂಡು ಕುರಿ ಮರಿಯ ಮೇಲೆ ಪ್ರಯೋಗ ನಡೆಸಲಾಗಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.  ಈ ವೈರಲ್ ವಿಡಿಯೋದಲ್ಲಿ  ಕೃತಕ ಗರ್ಭಾಶಯದಂತಿರುವ ಸಾಧನದೊಳಗೆ ಅವಧಿ ಪೂರ್ವವಾಗಿ ಜನಿಸಿದ ಕುರಿ ಮರಿಯನ್ನು ಪ್ರಯೋಗಕ್ಕೆ ಒಳಪಡಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ: ಇದು ಭಾರೀ ಖತರ್ನಾಕ್ ಗಿಳಿ… ಧರ್ಮಕ್ಕೆ ಎಳನೀರು, ದುಡಿದು ತಿನ್​​ಬೇಕು ಮಾರ್ರೆ

ಡಿಸೆಂಬರ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.  ಹಾಗೂ ಹಲವಾರು ಲೈಕ್ಸ್ಗಳನ್ನು ಪಡುಕೊಂಡಿದೆ.  ಒಬ್ಬ ಬಳಕೆದಾರರು ಇದು ತುಂಬಾ ಉಪಯುಕ್ತವಾಗಲಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಕೃತಕ ಗರ್ಭಾಶಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಅನೇಕರಲ್ಲಿ ಭರವಸೆಯ ಕಿರಣವನ್ನು ಮೂಡಿಸುವ ಒಂದೊಳ್ಳೆ ತಂತ್ರಜ್ಞಾನʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು