Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದು ಭಾರೀ ಖತರ್ನಾಕ್ ಗಿಳಿ… ಧರ್ಮಕ್ಕೆ ಎಳನೀರು, ದುಡಿದು ತಿನ್​​ಬೇಕು ಮಾರ್ರೆ

ಗಿಳಿ ತುಂಬಾ ಬುದ್ಧಿವಂತ ಪಕ್ಷಿಯಾಗಿದ್ದು, ಅದು ಮನುಷ್ಯನಂತೆಯೇ ಮಾತನಾಡಬಲ್ಲ ಹಕ್ಕಿಯಾಗಿದೆ. ಗಿಳಿಗಳು ಮನುಷ್ಯರಂತೆ  ಮಾತನಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದ್ರೆ ಈ ಗಿಳಿ ಯಾವತ್ತಾದ್ರೂ ಮನುಷ್ಯರಂತೆ ತೆಂಗಿನ ಮರದಿಂದ ಕಾಯಿ  ಕಿತ್ತು ಎಳನೀರು ಕುಡಿಯುವುದನ್ನು ನೀವು ನೋಡಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ವೈರಲ್ ವಿಡಿಯೋ

Viral Video: ಇದು ಭಾರೀ ಖತರ್ನಾಕ್ ಗಿಳಿ... ಧರ್ಮಕ್ಕೆ ಎಳನೀರು, ದುಡಿದು ತಿನ್​​ಬೇಕು ಮಾರ್ರೆ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 22, 2023 | 2:52 PM

ಮನುಷ್ಯರು ಈ ಪ್ರಪಂಚದಲ್ಲಿ ತಾವೇ ಬುದ್ಧಿವಂತ ಜೀವಿಗಳು ಅಂತ ಜಂಬ ಕೊಚ್ಚಿಕೊಳ್ಳುತ್ತಾರೆ. ನಿಮಗಿಂತ ನಾವೇನು ಕಮ್ಮಿ ಇಲ್ಲ ಅಂತ ಪ್ರಾಣಿ, ಪಕ್ಷಿಗಳು ಸಹ ತಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತಿರುತ್ತವೆ. ಗಿಳಿ ಮನುಷ್ಯರಂತೆ, ಮಾತನಾಡುವ, ಆನೆ ಮನುಷ್ಯರಂತೆ ಡಾನ್ಸ್ ಮಾಡುವ ಹೀಗೆ  ಪ್ರಾಣಿ ಪಕ್ಷಿಗಳು ಮುನುಷ್ಯರಂತೆ ವರ್ತಿಸುವ   ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಈಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಇಲ್ಲೊಂದು ಗಿಳಿರಾಯ ಮನುಷ್ಯರಂತೆ ತೆಂಗಿನ ಮರದಿಂದ ಕಾಯಿ ಕಿತ್ತು ಎಳನೀರು ಕುಡಿದಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಬ್ಬಬ್ಬಾ!! ಈ ಗಿಳಿಯ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

ಸಾಮಾನ್ಯವಾಗಿ ಮಂಗಗಳು ತೆಂಗಿನಮರವೇರಿ ಮರದಲ್ಲಿ ಇರುವಂತಹ ಎಳನೀರುಗಳನ್ನೆಲ್ಲಾ ಕುಡಿದು ಖಾಲಿ ಮಾಡಿಬಿಡುತ್ತದೆ. ಅದೇ ರೀತಿ ಇಲ್ಲೊಂದು ಬುದ್ಧಿವಂತ ಮಕಾವ್ ಗಿಳಿ ಕೂಡಾ ತನ್ನ ಬಾಯಾರಿಕೆಯನ್ನು ತಣಿಸಲು ತೆಂಗಿನ ಮರದಿಂದ  ಎಳನೀರನ್ನು ಕಿತ್ತು ಕುಡಿದಿದೆ. ಈ ವಿಡಿಯೋವನ್ನು ಸತ್ಯನ್ ಎಂಬವರು  (@sathyan_vkps) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

View this post on Instagram

A post shared by sathyan (@sathyan_vkps)

ವೈರಲ್ ವಿಡಿಯೋದಲ್ಲಿ ಬಹಳ ಸುಂದರವಾಗಿರುವ  ಮಕಾವ್ ಗಿಳಿಯೊಂದು ತೆಂಗಿನಮರದಲ್ಲಿ ಕುಳಿತು ಕಾಯಿ ಕೀಳುವಂತಹ ದೃಶ್ಯವನ್ನು ಕಾಣಬಹುದು. ಕಾಯಿ ಕಿತ್ತಿದ್ದು ಮಾತ್ರವಲ್ಲದೆ ತನ್ನ ಬಾಯಾರಿಕೆಯನ್ನು ತಣಿಸಲು  ಥೇಟ್ ಮನುಷ್ಯರಂತೆಯೇ ಸ್ಟೈಲ್ ಆಗಿ  ಎಳನೀರನ್ನು ಸಹ ಕುಡಿದಿದೆ.

ಇದನ್ನೂ ಓದಿ: ಕೇವಲ 5ವರ್ಷ ದುಡಿದು, ಜೀವನಪೂರ್ತಿ ಆರಾಮಾಗಿರಿ, ವಿದ್ಯಾರ್ಹತೆ ಅಗತ್ಯವಿಲ್ಲ; ಜಾಹೀರಾತು ವೈರಲ್​​

ಅಕ್ಟೋಬರ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.1 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼಮಂಗಗಳ ಭಯ ಹೋಗಿ ಈಗ ತೆಂಗು ಬೆಳೆಗಾರರಿಗೆ ಹೊಸ ಭಯ ಶುರುವಾಗಿದೆ” ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಗಿಳಿರಾಯನ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದು ಕಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: