Viral Video: ಕಸದ ಬುಟ್ಟಿಯಲ್ಲಿ ಅಪಾಯಕಾರಿ ಮೊಸಳೆಯನ್ನು  ಸೆರೆ ಹಿಡಿದ ಧೀರ

ಮೊಸಳೆ ಎಷ್ಟು ಅಪಾಯಕಾರಿ ಜೀವಿ ಎಂಬುದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿ ಮೊಸಳೆಗಳ ತಂಟೆಗೆ ಅಷ್ಟಾಗಿ ಯಾರು ಹೋಗಲ್ಲ. ಅಲ್ಲದೆ ಮೊಸಳೆಗಳೇ ನಮ್ಮ ತಂಟೆಗೆ ಬಂದ್ರೂ, ಆ ದೈತ್ಯ ಜೀವಿಯನ್ನು ಕಂಡು ನಾವೆಲ್ಲರೂ ಕಾಲ್ಕಿತ್ತು ಓಡಿ ಹೋಗುತ್ತೇವೆ. ಆದ್ರೆ ಇಲ್ಲೊಬ್ಬ ಎಂಟೆದೆ ಬಂಟ ಮನೆಯ ಬಳಿ ಬಂದಂತಹ ಮೊಸಳೆಯನ್ನು ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಹಿಡಿದು ಹೆಡೆಮುರಿ ಕಟ್ಟಿ, ಅದನ್ನು  ಸರೋವರದ ಬಳಿ ಬಿಟ್ಟು ಬಂದಿದ್ದಾನೆ.  ಈ ವಿಡಿಯೋ ಇದೀಗ ವೈರಲ್ ಆಗಿದೆ. 

Viral Video: ಕಸದ ಬುಟ್ಟಿಯಲ್ಲಿ ಅಪಾಯಕಾರಿ ಮೊಸಳೆಯನ್ನು  ಸೆರೆ ಹಿಡಿದ ಧೀರ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 22, 2023 | 2:18 PM

ಮೊಸಳೆಗಳು ಎಷ್ಟು  ಅಪಾಯಕಾರಿ  ಜೀವಿಗಳು ಎಂಬುದು ಎಲ್ಲರಿಗೂ ತಿಳಿದಿದೆ,  ಆದ್ದರಿಂದಲೇ  ಮೊಸಳೆಗಳ ತಂಟೆಗೆ ಯಾರು ಹೋಗುವುದಿಲ್ಲ.  ಕೆಲವರು ಈ ಪ್ರದೇಶದಲ್ಲಿ ಮೊಸಳೆ ಇದೆ ಅಂದ್ರೆ ಅತ್ತ ಕಡೆ ತಲೆ ಹಾಕಿ ಕೂಡಾ ಮಲಗೋದಿಲ್ಲ. ಇನ್ನೂ ಮೊಸಳೆಗಳು ಜನವಸತಿ ಪ್ರದೇಶಕ್ಕೆ ಬಂದ್ರೆ ಹೇಗಿರಬಹುದು? ಖಂಡಿತವಾಗಿ ನಾವೆಲ್ಲರೂ ಆ ಅಪಾಯಕಾರಿ ಜೀವಿಯನ್ನು ಕಂಡು ಓಡಿ ಹೋಗುತ್ತಿದ್ದೆವು.  ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಯಾವುದೇ ಭಯವಿಲ್ಲದೆ ಧೈರ್ಯದಿಂದ ಮನೆ ಬಳಿ ಬಂದಂತಹ ಮೊಸಳೆಯನ್ನು ಹೆಡೆಮುರಿ ಕಟ್ಟಿ ಸರೋವರದ ಬಳಿ ಬಿಟ್ಟು ಬಂದಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಆ ವ್ಯಕ್ತಿಯ ಸಾಹಸವನ್ನು ಕಂಡು ಹಲವರು ಆಶ್ಚರ್ಯಚಕಿತರಾಗಿದ್ದಾರೆ.

ಈ ಘಟನೆ  2 ವರ್ಷಗಳ ಹಿಂದೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದ್ದು,  ಈ  ಕುರಿತ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.   MindBlowing ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಫ್ಲೋರಿಡಾದ ವ್ಯಕ್ತಿ ಕಸದ ಬುಟ್ಟಿಯ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.  ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮನೆ ಬಾಗಿಲಿಗೆ ಬಂದಂತಹ  ಮೊಸಳೆಯನ್ನು ಸೆರೆ ಹಿಡಿಯುವುದನ್ನು ಕಾಣಬಹುದು.

ಇದನ್ನೂ ಓದಿ: ಪ್ರಧಾನಿಗೊಂದು ಕಾಶ್ಮೀರದ ಮುತ್ತು: ಮೋದಿ ಎಂದರೆ ಕಾಶ್ಮೀರಿಗರಿಗೆ ಎಷ್ಟು ಪ್ರೀತಿ ನೋಡಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ, ಮೊಸಳೆಯೊಂದು ನಿಧಾನಕ್ಕೆ ಮನೆಯ ಅಂಗಳದ ಬಳಿ ಬರುತ್ತಿರುವುದನ್ನು ಕಾಣಬಹುದು. ಈ ಅಪಾಯಕಾರಿ ಜೀವಿಯನ್ನು ಕಂಡು ಅಕ್ಕ ಪಕ್ಕದ ಮನೆಯವರೆಲ್ಲರೂ  ಗಾಬರಿಗೊಂಡು ಕಿರಿಚಾಡುತ್ತಾರೆ.  ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಈ ಮೊಸಳೆಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕು, ಇಲ್ಲದಿದ್ರೆ, ತುಂಬಾ ಕಷ್ಟ ಇದೆ ಎನ್ನುತ್ತಾ, ಧೈರ್ಯ ಮಾಡಿ  ಅಲ್ಲೇ ಇದ್ದ ದೊಡ್ಡ ಕಸದ ಬುಟ್ಟಿಯನ್ನು ತೆಗೆದುಕೊಂಡು ತನ್ನ ಸಾಹಸ ಮತ್ತು ಸಮಯ ಪ್ರಜ್ಞೆಯಿಂದ  ಮೊಸಳೆಯನ್ನು  ಆ ಕಸದ ಬುಟ್ಟಿಯೊಳಗೆ ಬೀಳಿಸಿ, ನಂತರ ಕಸದ ಬುಟ್ಟಿಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ, ಮೊಸಳೆಯನ್ನು ಸೆರೆಹಿಡಿಯುತ್ತಾನೆ. ಹೀಗೆ ಸೆರೆ ಹಿಡಿದ ಮೊಸಳೆಯನ್ನು   ತೆಗೆದುಕೊಡು ಹೋಗಿ ಅಲ್ಲೇ ಸಲ್ವ ದೂರದಲ್ಲಿದ್ದ ಸರೋವರದ  ಬಳಿ ಬಿಟ್ಟು ಬರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!