AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪ್ರಧಾನಿಗೊಂದು ಕಾಶ್ಮೀರದ ಮುತ್ತು: ಮೋದಿ ಎಂದರೆ ಕಾಶ್ಮೀರಿಗರಿಗೆ ಎಷ್ಟು ಪ್ರೀತಿ ನೋಡಿ

ಶ್ರೀನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ಇರಿಸಲಾಗಿದ್ದ  ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಗೆ ಕಾಶ್ಮೀರದ ವ್ಯಕ್ತಿಯೊಬ್ಬರು ಪ್ರೀತಿಯಿಂದ ಮುತ್ತಿಟ್ಟು, ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ  ಭಾವುಕ ಕ್ಷಣದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. 

Viral Video: ಪ್ರಧಾನಿಗೊಂದು ಕಾಶ್ಮೀರದ ಮುತ್ತು: ಮೋದಿ ಎಂದರೆ ಕಾಶ್ಮೀರಿಗರಿಗೆ ಎಷ್ಟು ಪ್ರೀತಿ ನೋಡಿ
ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಗೆ ಮುತ್ತಿಟ್ಟ ಕಾಶ್ಮೀರಿ ವ್ಯಕ್ತಿ
Follow us
ಮಾಲಾಶ್ರೀ ಅಂಚನ್​
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 21, 2023 | 9:25 PM

ಪ್ರಧಾನಿ ಮೋದಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಯುವಜನತೆ ಮಾತ್ರವಲ್ಲದೆ ಅದೆಷ್ಟೋ ಪುಟ್ಟ ಮಕ್ಕಳು ಕೂಡಾ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ಅಭಿಮಾನಿಗಳು.  ಹೀಗೆ ಪ್ರಧಾನಿ ಮೋದಿಯವರಿಗೆ ದೇಶ ವಿದೇಶಗಳಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಇದಕ್ಕೆ ಉದಾಹರಣೆಯೆಂಬಂತೆ ಆಗಾಗ್ಗೆ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಕಾಶ್ಮೀರದ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯವರ ಪ್ರತಿಕೃತಿಗೆ ಪ್ರೀತಿಯಿಂದ  ಮುತ್ತಿಟ್ಟು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಭಾವುಕ ಕ್ಷಣದ  ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚುಗೆಯನ್ನು ಪಡೆದುಕೊಂಡಿದೆ.

ಶೇಖ್ ಇಮ್ರಾನ್  (@Sheikhimran_) ಎಂಬವರು ತಮ್ಮ  X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಕ್ಲಾಕ್ ಟವರ್  ಮುಂಭಾಗದಲ್ಲಿ ಪ್ರಧಾನಿ ಮೋದಿಯವರ ಪ್ರತಿಕೃತಿಗೆ ಮುತ್ತಿಟ್ಟ ಕಾಶ್ಮೀರಿ ವ್ಯಕ್ತಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪ್ರಧಾನಿ ಮೋದಿಯವರ ಪ್ರತಿಕೃತಿಯನ್ನು ಕಂಡು ವ್ಯಕ್ತಿಯೊಬ್ಬರು ಭಾವುಕರಾಗಿ ಆ ಪ್ರತಿಕೃತಿಗೆ ಪ್ರೀತಿಯಿಂದು ಮುತ್ತಿಡುವ ದೃಶ್ಯವನ್ನು  ಕಾಣಬಹುದು.

ವೈರಲ್ ವಿಡಿಯೋದಲ್ಲಿ ಶ್ರೀನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ಇರಿಸಲಾದ ಪ್ರಧಾನಿ ಮೋದಿಯವರ ಪ್ರತಿಕೃತಿಯನ್ನು ಕಂಡು  ಭಾವುಕರಾಗಿ ಆ ಪ್ರತಿಕೃತಿಗೆ ಕಾಶ್ಮೀರಿ ವ್ಯಕ್ತಿಯೊಬ್ಬರು ಪ್ರೀತಿಯಿಂದ ಮುತ್ತಿಟ್ಟು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೋದಿಯವರ ಪ್ರತಿಕೃತಿಯನ್ನು ತಬ್ಬಿಕೊಂಡು ಫೋಟೋ ಕೂಡಾ ಕ್ಲಿಕ್ಕಿಸಿಕೊಂಡು, ಭಾವುಕರಾದ ಕ್ಷಣವನ್ನು ವಿಡಿಯೋದಲ್ಲಿ ಕಾಣಬಹುದು.

ಡಿಸೆಂಬರ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.8K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ  ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ.  ಅನೇಕರು ಸುಂದರ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:13 pm, Thu, 21 December 23