ಫ್ಯಾಶನ್ ಹ್ಯಾಕ್; ಪಾರ್ಲೆ-ಜಿ ಬಿಸ್ಕೆಟ್ ಕವರ್ನಿಂದ ಸ್ಲಿಂಗ್ ಬ್ಯಾಗ್ ತಯಾರಿಸಿದ ಯುವತಿ
ನಾವೆಲ್ಲರೂ ಸಾಮಾನ್ಯವಾಗಿ ಬಿಸ್ಕೆಟ್, ಇತ್ಯಾದಿ ತಿಂಡಿಗಳನ್ನು ತಿಂದ ಮೇಲೆ ಅದರ ಕವರ್ಗಳನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ. ಆದ್ರೆ ಇಲ್ಲೊಬ್ಬ ಯುವತಿ ಬಿಸ್ಕೆಟ್ ಕವರ್ನಿಂದ ಸುಂದರವಾದ ಬ್ಯಾಗ್ ತಯಾರಿಸಿದ್ದು, ಪ್ಲಾಸ್ಟಿಕ್ ಕವರ್ಗಳನ್ನು ಎಸೆಯುವ ಬದಲು ಅದನ್ನು ಮರುಬಳಕೆ ಮಾಡಿ, ಅದರಿಂದ ಸೃಜನಾತ್ಮಕವಾದ DIY ಉತ್ಪನ್ನಗಳನ್ನು ತಯಾರಿಸಬಹುದಲ್ವಾ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಸಾಮಾನ್ಯವಾಗಿ ನಾವೆಲ್ಲರೂ ಮನೆಯಲ್ಲಿರುವ ಹಳೆಯ ವಸ್ತಗಳು ಅಥವಾ ಪ್ಲಾಸ್ಟಿಕ್ ಕವರ್ಗಳನ್ನೆಲ್ಲಾ, ಇದು ಇನ್ನು ಯಾವುದಕ್ಕೂ ಉಪಯೋಗವಾಗಲ್ಲ ಎಂದು ಎಸೆದು ಬಿಡುತ್ತೇವೆ. ಇದು ಒಂದು ರೀತಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ವಸ್ತುಗಳನ್ನು ಎಸೆಯುವ ಬದಲು, ಅವುಗಳನ್ನು ಮರುಬಳಕೆ ಮಾಡಿ, DIY ಉತ್ಪನ್ನಗಳನ್ನು ತಯಾರಿಸಬಹುದಲ್ವಾ ಎಂಬುದನ್ನು ಯುವತಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ. ಹೌದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಲೋಕದಲ್ಲಿ ಈ ಒಂದು ಹೊಸ DIY (ಡು ಇಟ್ ಯುವರ್ಸೆಲ್ಫ್) ಟ್ರೆಂಡ್ ಹೆಚ್ಚು ಸುದ್ದಿಯಲ್ಲಿದೆ. ಇದು ಹಳೆಯ ವಸ್ತುಗಳನ್ನು ಮರುಬಳಕೆ ಮಾಡಿ, ಅವುಗಳಿಂದ ಹೊಸ ಹೊಸ ವಸ್ತುಗಳನ್ನು ತಯಾರು ಮಾಡುವಂತಹ ಮೋಜಿನ ಹವ್ಯಾಸವಾಗಿದೆ. ಹೀಗೆ ಹಳೆಯ ವಸ್ತುಗಳನ್ನು ಉಪಯೋಗಿಸಿಕೊಂಡು ಡಿಸೈನರ್ ಬಟ್ಟೆ, ಮ್ಯಾಟ್, ಕಿವಿಯೋಲೆ, ಬ್ಯಾಗ್ ಇತ್ಯಾದಿಗಳನ್ನು ತಯಾರು ಮಾಡುವ ವಿಡಿಯೋಗಳನ್ನು ನೋಡಿರುತ್ತೇವೆ. ಅದೇ ರೀತಿ ಈ ಯುವತಿ ಪಾರ್ಲೆ-ಜಿ ಬಿಸ್ಕಟ್ ಕವರ್ ಅನ್ನು ಉಪಯೋಗಿಸಿಕೊಂಡು ಅದರಿಂದ ಸ್ಲಿಂಗ್ ಬ್ಯಾಗ್ ತಯಾರಿಸಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಯುವತಿಯ ಕ್ರಿಯೇಟಿವಿಟಿಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಈ ವಿಡಿಯೋವನ್ನು ಶ್ವೇತಾ (@shwetmahadik) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಅವರು ವೇಸ್ಟ್ ಪಾರ್ಲೆ-ಜಿ ಬಿಸ್ಕೆಟ್ ಕವರ್ ಅನ್ನು ಬಳಸಿಕೊಂಡು ಸುಂದರವಾದ ಸ್ಲಿಂಗ್ ಬ್ಯಾಗ್ ಅನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ:
View this post on Instagram
ಈ ವೈರಲ್ ವಿಡಿಯೋದಲ್ಲಿ ಶ್ವೇತಾ ಅವರು ದೊಡ್ಡ ಪಾರ್ಲೆ-ಜಿ ಬಿಸ್ಕೆಟ್ ಕವರ್ ಅನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ, ನಂತರ ಅದನ್ನು ಸಮಭಾಗವನ್ನಾಗಿ ಕತ್ತರಿಸಿ ಎರಡು ಭಾಗಗಳಾಗಿ ವಿಭಜಿಸುತ್ತಾರೆ. ನಂತರ ಅದರಿಂದ ಒಂದು ಕವರ್ ತೆಗೆದುಕೊಂಡು ಅದನ್ನು ಎರಡು ಟ್ರಾನ್ಫರೆಂಟ್ ಪ್ಲಾಸ್ಟಿಕ್ ಕವರ್ ಮಧ್ಯೆ ಇಟ್ಟು ಸ್ಟಿಚ್ ಮಾಡಿಕೊಳ್ಳುತ್ತಾರೆ. ಇನ್ನೊಂದು ಕವರ್ ಅನ್ನು ಸಹ ಇದೇ ರೀತಿ ಸ್ಟಿಚ್ ಮಾಡಿಕೊಳ್ಳುತ್ತಾರೆ. ಕೊನೆಯಲ್ಲಿ ಈ ಎರಡು ಕವರ್ ಗಳನ್ನು ಜೋಡಿಸಿ, ಅದಕ್ಕೆ ಜಿಪ್ ಕೂಡಾ ಹಾಕಿ, ಸುಂದರವಾದ DIY ಸ್ಲಿಂಗ್ ಬ್ಯಾಗ್ ತಯಾರಿಸುವುದನ್ನು ಕಾಣಬಹುದು.
ಇದನ್ನೂ ಓದಿ: ಈ ಹೋಟೆಲ್ ರೂಮ್ಗಳಲ್ಲಿ ಕಡ್ಡಾಯವಾಗಿ ಕಾಂಡೋಮ್ ಇಟ್ಟಿರಲೇಬೇಕಂತೆ; ಇದು ಸರ್ಕಾರದ ರೂಲ್ಸ್
ಡಿಸೆಂಬರ್ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 86.3K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್ಗಳು ಬಂದಿವೆ. ಒಬ್ಬ ಬಳಕೆದಾರರು ʼವೇಸ್ಟ್ ವಸ್ತುಗಳನ್ನು ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ಸುಂದರವಾಗಿ ವಿವರಿಸಿದ್ದೀರಿʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಕಾನ್ಸೆಪ್ಟ್ ತುಂಬಾ ಅದ್ಭುತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಇವರ ಕ್ರಿಯೇಟಿವಿಟಿ ಮತ್ತು ರೀಸೈಕ್ಲಿಂಗ್ ಐಡಿಯಾಗಳಿಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: