Viral Video: ಪಾಪ ಅಣ್ಣನಿಗೆ ಜ್ವರ, ತಗೊ ಮೊದ್ಲು ಸಿರಪ್ ಕುಡಿ: ಅಣ್ಣನ ಆರೈಕೆಯಲ್ಲಿ ತಂಗಿ
ಈ ಜಗತ್ತಿನಲ್ಲಿ ಅಣ್ಣ ತಂಗಿಯ ಸಂಬಂಧ ತುಂಬಾ ವಿಶೇಷವಾದದ್ದು, ಅಣ್ಣನಾದವನು ತನ್ನ ತಂಗಿಯನ್ನು ನೆರಳಾಗಿ ಕಾಪಾಡಿದರೆ, ತಂಗಿಯಾದವಳು ತನ್ನ ಅಣ್ಣನಿಗೆ ತಾಯಿ ಪ್ರೀತಿಯನ್ನು ನೀಡುತ್ತಾಳೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದೆ. ಮುದ್ದು ತಂಗಿಯೊಬ್ಬಳು, ಜ್ವರದಿಂದ ಬಳಲುತ್ತಿದ್ದಂತಹ ತನ್ನ ಅಣ್ಣನ ಆರೈಕೆಯಲ್ಲಿ ತೊಡಗಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಈ ಅಣ್ಣ ತಂಗಿಯ ಸುಂದರ ಬಾಂಧವ್ಯಕ್ಕೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ಲಭಿಸಿದೆ.
ಅಣ್ಣ ತಂಗಿಯ ಸಂಬಂಧವನ್ನು ಜಗತ್ತಿನ ಅತ್ಯಂತ ಸುಂದರ ಬಂಧವೆಂದು ಹೇಳಲಾಗುತ್ತದೆ. ಅಣ್ಣನಾದವನು ತಂಗಿಗೆ ಪ್ರತಿಯೊಂದು ಹಂತದಲ್ಲೂ ನೆರಳಾಗಿ ಕಾಪಾಡಿದರೆ, ತಂಗಿಯಾದವಳು ಅಣ್ಣನಿಗೆ ತಾಯಿ ಪ್ರೀತಿಯನ್ನು ನೀಡುತ್ತಾಳೆ. ಈ ಸುಂದರ ಬಾಂಧವ್ಯದಲ್ಲಿ ಮುದ್ದಾಟದ ಜೊತೆಗೆ ಕೊಂಚ ಗುದ್ದಾಟವೂ ಇರುತ್ತೆ. ಹೌದು ಈ ಅಣ್ಣ ತಂಗಿಯರು ಯಾವಾಗ ಜಗಳವಾಡುತ್ತಾರೆ, ಯಾವಾಗ ಒಂದಾಗುತ್ತಾರೆ ಎಂಬುದೇ ಗೊತ್ತಾಗಲ್ಲ. ಎಷ್ಟೇ ಜಗಳವಾಡಿದರೂ, ಇವರಿಬ್ಬರ ನಡುವಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ಈ ಅಣ್ಣ ತಂಗಿಯರ ಸುಂದರವಾದ ಬಾಂಧವ್ಯಕ್ಕೆ, ಪ್ರೀತಿಗೆ ಸಂಬಂಧಿಸಿದ ಅನೇಕ ಸಿನಿಮಾಗಳನ್ನು, ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಈಗ ಅಂತಹದ್ದೇ ಒಂದು ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು ಜ್ವರದಿಂದ ಹುಷಾರು ತಪ್ಪಿ ಮಲಗಿದ್ದಂತಹ ಬಾಲಕನಿಗೆ, ಆತನ ಪುಟಾಣಿ ತಂಗಿಯೊಬ್ಬಳು ಮದ್ದು ಕುಡಿಸಿ, ತಾಯಿಯಂತೆ ಆರೈಕೆ ಮಾಡಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದೆ.
RVJ Media ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಪುಟ್ಟ ಬಾಲಕಿ ತನ್ನ ಅಣ್ಣನನ್ನು ಕಾಳಜಿ ವಹಿಸುವ ರೀತಿ ತುಂಬಾ ಮುದ್ದಾಗಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಜ್ವರದಿಂದ ಹುಷಾರು ತಪ್ಪಿ ಮಲಗಿದ್ದಂತಹ ಪುಟ್ಟ ಬಾಲಕನನ್ನು, ಆತನ ಪುಟ್ಟ ತಂಗಿ ತಾಯಿಯಂತೆ ಆರೈಕೆ ಮಾಡುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
The Way She Is Caring For Her Brother 🥺❤️pic.twitter.com/TprmgvRhap
— RVCJ Media (@RVCJ_FB) December 22, 2023
ವೈರಲ್ ವಿಡಿಯೋದಲ್ಲಿ, ಜ್ವರದಿಂದ ಹುಷಾರು ತಪ್ಪಿ ಮಲಗಿದ್ದ ಅಣ್ಣನನ್ನು ಪುಟ್ಟ ತಂಗಿ ಆರೈಕೆ ಮಾಡಿದ್ದಾಳೆ. ಆ ಪುಟ್ಟ ಬಾಲಕಿ ಅಣ್ಣನಿಗೆ ಮದ್ದು (ಸಿರಪ್) ಕುಡಿಸಿ, ತಾಯಿಯಂತೆ ಪ್ರೀತಿಯಿಂದ ಮುದ್ದು ಮಾಡುವ ಸುಂದರವಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅವಧಿಪೂರ್ವವಾಗಿ ಜನಿಸಿದ ಶಿಶುಗಳ ಪ್ರಾಣ ರಕ್ಷಣೆಗೆ ಹೊಸ ತಂತ್ರಜ್ಞಾನ, ಪ್ರಯೋಗಕ್ಕೆ ಕುರಿ ಮರಿಯ ಬಳಕೆ
ಡಿಸೆಂಬರ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 177K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆಹಾ!! ಎಂತಹ ಸುಂದರ ಬಂಧವಿದುʼ ಎಂದು ಭಾವುಕರಾಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವಿಡಿಯೋ ಎಷ್ಟು ಮುದ್ದಾಗಿದೆ. ಆದ್ರೆ ನಾನು ಮತ್ತು ನನ್ನ ಸಹೋದರನ ನಡುವೆ ಯಾವಾಗ ನೋಡಿದ್ರೂ ಮಹಾ ಯುದ್ಧವೇ ನಡೆಯುತ್ತಿರುತ್ತೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಅಯ್ಯೋ ದೇವ್ರೆ ಈ ಅಣ್ಣ ತಂಗಿಯ ಬಾಂಧವ್ಯ ಎಷ್ಟು ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: