Oldest lioness: ತಿರುಪತಿ ಮೃಗಾಲಯದ 23ವರ್ಷದ ಅತ್ಯಂತ ಹಿರಿಯ ಸಿಂಹಿಣಿ ‘ಸೀತಾ’ ಸಾವು

ದೇಶದಲ್ಲೇ ಅತ್ಯಂತ ಹಿರಿಯ ವಯಸ್ಸಿನ ಸಿಂಹಿಣಿಗಳಲ್ಲಿ ಒಂದಾದ ಸೀತಾ ಎಂಬ 23 ವರ್ಷದ ಸಿಂಹಿಣಿ ಶುಕ್ರವಾರ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ಕೊನೆಯುಸಿರೆಳೆದಿದೆ. ಸೀತಾ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Oldest lioness: ತಿರುಪತಿ ಮೃಗಾಲಯದ 23ವರ್ಷದ ಅತ್ಯಂತ ಹಿರಿಯ ಸಿಂಹಿಣಿ 'ಸೀತಾ' ಸಾವು
A 23-year-old lioness named 'Seetha'
Follow us
ಅಕ್ಷತಾ ವರ್ಕಾಡಿ
|

Updated on:Dec 23, 2023 | 10:45 AM

ತಿರುಪತಿ ಶ್ರೀ ವೆಂಕಟೇಶ್ವರ ಮೃಗಾಲಯದಲ್ಲಿ ಮತ್ತೊಂದು ಸಿಂಹ ಸಾವನ್ನಪ್ಪಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಇದೇ ಮೃಗಾಲಯದ ಅನುರಾಗ್ ಎಂಬ ಗಂಡು ಸಿಂಹ ಸಾವನ್ನಪ್ಪಿತ್ತು. ಇದೀಗಾ ಇಪ್ಪತ್ಮೂರು ವರ್ಷದ ಹಿರಿಯ ಸಿಂಹಿಣಿ ಸೀತಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ(ಡಿ.22) ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಮೃಗಾಲಯದ ಮೇಲ್ವಿಚಾರಕರಾದ ಸೆಲ್ವಂ ಮಾಹಿತಿ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಹಿಣಿಯ ಆಹಾರಕ್ರಮದಲ್ಲಿ ಬದಲಾವಣೆ ಮಾಡಿದರೂ ಕೂಡ ಕೆಲ ದಿನಗಳ ಹಿಂದಿನಿಂದ ಆಹಾರ ಸೇವಿಸುವುದನ್ನು ಬಿಟ್ಟಿದ್ದಳು. ಆದ್ದರಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

2001ರಲ್ಲಿ ಸರ್ಕಸ್ ಕಂಪನಿಯಿಂದ ಎಸ್ ವಿ ಮೃಗಾಲಯಕ್ಕೆ ವರ್ಗಾವಣೆಗೊಂಡ 82 ಸಿಂಹಗಳಲ್ಲಿ ಸೀತಾ ಕೂಡ ಒಂದು. ಆದರೆ 82 ಸಿಂಹಗಳಲ್ಲಿ ಎರಡು ದಶಕಗಳ ವರೆಗೆ ಬದುಕುಳಿದ ಏಕೈಕ ಸಿಂಹಿಣಿ ಈ ಸೀತಾ. ಸೀತಾ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನೂ ಸರಾಸರಿ ಸಿಂಹಗಳ ಜೀವಿತಾವಧಿಯ ಬಗ್ಗೆ ಹೇಳುವುದಾದರೆ ಸಾಮಾನ್ಯವಾಗಿ ಸೆರೆಯಲ್ಲಿ ಇರಿಸಲಾದ ಸಿಂಹದ ಸರಾಸರಿ ಜೀವಿತಾವಧಿಯು ಅಪರೂಪವಾಗಿ 18 ರಿಂದ 20 ವರ್ಷಗಳನ್ನು ಮೀರುತ್ತದೆ. ಆದರೆ ಕಾಡಿನಲ್ಲಿ ಅಂತಹ ಪ್ರಾಣಿಗಳ ಸರಾಸರಿ ಜೀವಿತಾವಧಿ 12 ರಿಂದ 16 ವರ್ಷಗಳ ನಡುವೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಅವಧಿಪೂರ್ವವಾಗಿ ಜನಿಸಿದ ಶಿಶುಗಳ ಪ್ರಾಣ ರಕ್ಷಣೆಗೆ ಹೊಸ ತಂತ್ರಜ್ಞಾನ, ಪ್ರಯೋಗಕ್ಕೆ ಕುರಿ ಮರಿಯ ಬಳಕೆ

ಅತ್ಯಂತ ಹಿರಿಯ ಸಿಂಹದ ಪಟ್ಟಿಗೆ ಸೀತಾ:

ದೇಶದಲ್ಲೇ ಅತ್ಯಂತ ಹಿರಿಯ ವಯಸ್ಸಿನ ಸಿಂಹಿಣಿಗಳಲ್ಲಿ ಒಂದಾದ 23ವರ್ಷದ ಸಿಂಹಿಣಿ ಸೀತಾ. ಇದಲ್ಲದೇ ಬಾಂಧವಗಢದ ರಕ್ಷಣಾ ಕೇಂದ್ರದಲ್ಲಿ 30 ವರ್ಷ ಬದುಕಿದ್ದ ರಾಜನಂತಹ ದೀರ್ಘಾಯುಷ್ಯ ಸಿಂಹಗಳ ಸಾಲಿಗೆ ಸೀತೆ ಸೇರುತ್ತಾಳೆ. ಜೈಪುರ ಮೃಗಾಲಯದಲ್ಲಿ 28 ವರ್ಷ ಬದುಕಿದ್ದ ಬಾದ್‌ಶಾ 2014 ರಲ್ಲಿ ನಿಧನವಾಗಿತ್ತು. ರಾಯ್‌ಪುರದ ನಂದನ್ ವಾನ್ ಮೃಗಾಲಯದಲ್ಲಿ, ರಾಜಾ ಎಂಬ ಹೆಸರಿನ ಮತ್ತೊಂದು ಸಿಂಹವು 2016 ರಲ್ಲಿ ಸಾವನ್ನಪ್ಪಿತ್ತು,ಈ ಮೂಲಕ 25 ವರ್ಷಗಳ ಕಾಲ ಬದುಕಿತ್ತು.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:44 am, Sat, 23 December 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್