AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿದ ಮಹಿಳೆ; ಇದಕ್ಕೆ ಪ್ರತಿಯಾಗಿ ಹಣ ಕೇಳಲಿಲ್ಲವೆಂದು ಮಹಿಳೆಗೆ ತ್ರಿವಳಿ ತಲಾಕ್ ನೀಡಿದ ಪತಿ

ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಹಿಳೆಯೊಬ್ಬರು ತನ್ನ ಅಣ್ಣ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನ ಮಾಡಿದ್ದು, ಕಿಡ್ನಿ ದಾನ ಮಾಡಿದ್ದಾಕ್ಕಾಗಿ ಸಹೋದರನಿಂದ 40 ಲಕ್ಷ ರೂಪಾಯಿ ಹಣವನ್ನು ಕೇಳಬೇಕೆಂದು ಆ ಮಹಿಳೆಯ ಪತಿ ಆಕೆಯನ್ನು ಪೀಡಿಸಿದ್ದಾನೆ.  ನಾನು ಯಾವುದೇ ಕಾರಣಕ್ಕೂ ಹಣವನ್ನು ಕೇಳುವುದಿಲ್ಲ ಎಂದು ಹೇಳಿದ ಆ ಮಹಿಳೆಗೆ ಇದೀಗ ಆಕೆಯ ಪತಿ ವಾಟ್ಸಾಪ್ ಕರೆಯ ಮೂಲಕ  ತ್ರಿವಳಿ ತಲಾಖ್ ನೀಡಿದ್ದಾನೆ. 

Viral: ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿದ ಮಹಿಳೆ; ಇದಕ್ಕೆ ಪ್ರತಿಯಾಗಿ ಹಣ ಕೇಳಲಿಲ್ಲವೆಂದು ಮಹಿಳೆಗೆ ತ್ರಿವಳಿ ತಲಾಕ್ ನೀಡಿದ ಪತಿ
ಪ್ರಾತಿನಿಧಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಕಿರಣ್ ಹನುಮಂತ್​ ಮಾದಾರ್|

Updated on:Dec 22, 2023 | 7:44 PM

Share

ಉತ್ತರ ಪ್ರದೇಶ, ಡಿ.22: ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ತನ್ನ ಅಣ್ಣನ ಜೀವವನ್ನು ಉಳಿಸಲು ತಮ್ಮ ಕಿಡ್ನಿಯನ್ನು ದಾನ ಮಾಡಿದ್ದಾರೆ. ಕಿಡ್ನಿ ದಾನ ಮಾಡಿದ್ದಕ್ಕಾಗಿ ಅಣ್ಣನಿಂದ ಹಣವನ್ನು ಕೇಳಲಿಲ್ಲವೆಂಬ ಕಾರಣಕ್ಕೆ ಆ ಮಹಿಳೆಗೆ ಆಕೆಯ  ಪತಿ ವಾಟ್ಸಾಪ್ ಕರೆಯ ಮೂಲಕ  ತ್ರಿವಳಿ ತಲಾಖ್ ನೀಡಿದ್ದಾನೆ. ಈ ಘಟನೆ  ಉತ್ತರ ಪ್ರದೇಶ(uttara pradesh)ದ ಗೊಂಡಾ ಜಿಲ್ಲೆಯ ಧನೇಪುರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತನ್ನ ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿದ ಮಹಿಳೆಯೊಬ್ಬರಿಗೆ ಆಕೆಯ ಪತಿ ವಿಚ್ಛೇದನವನ್ನು ನೀಡಿದ್ದಾನೆ.  ಈ ಮಹಿಳೆಯ ಪತಿ ಕಿಡ್ನಿ ನೀಡಿದ್ದಕ್ಕಾಗಿ ನಿನ್ನ ಅಣ್ಣನ ಬಳಿ 40 ಲಕ್ಷ ರೂಪಾಯಿ ಹಣವನನು ಕೇಳು ಎಂದು ಪೀಡಿಸಿದ್ದಾನೆ.  ಇದಕ್ಕೆ ಈ ಮಹಿಳೆ ಒಪ್ಪದಿದ್ದ ಕಾರಣ  ಆಕೆಯ ಪತಿ  ವಾಟ್ಸಾಪ್ ಕರೆಯ ಮೂಲಕ  ತ್ರಿವಳಿ ತಲಕ್ ನೀಡಿದ್ದಾನೆ.  ಈ ಬಗ್ಗೆ  ಮಹಿಳೆ ತನ್ನ ಪತಿಯ ವಿರುದ್ಧ ಠಾಣೆಯಲ್ಲಿ ಕೇಸ್  ದಾಖಲಿಸಿದ್ದಾರೆ.  ಸಂತ್ರಸ್ತೆ ತರನ್ನುಮ್ (42) ಅವರ  ದೂರಿನ ಮೇರೆಗೆ ಆಕೆಯ ಪತಿ ಮೊಹಮ್ಮದ್ ರಶೀದ್ ವಿರುದ್ಧ ಗೊಂಡಾ ಜಿಲ್ಲೆಯ ಧಾನೇಪುರ್  ಪೋಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

25 ವರ್ಷಗಳ ಹಿಂದೆ, ಗೊಂಡಾ ಜಿಲ್ಲೆಯ ಧನೇಪುರ್ ಪೋಲೀಸ್ ಠಾಣೆ ವ್ಯಾಪ್ತಿಯ  ಬೌರಿಯಾಹಿ ಗ್ರಾಮದ ನಿವಾಸಿ ತರನ್ನುಮ್, ನೆರೆಯ ಜೈತಾಪುರ ಗ್ರಾಮದ ನಿವಾಸಿ ಮೊಹಮ್ಮದ್ ರಶೀದ್ ಅವರನ್ನು ವಿವಾಹವಾಗಿದ್ದರು. ಮತ್ತು   ಜೀವನೋಪಾಯಕ್ಕಾಗಿ ಈಕೆಯ ಪತಿ  ಮೊಹಮ್ಮದ್ ರಶೀದ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ತರನ್ನುಮ್ ಮುಂಬೈಯಲ್ಲಿ ಟೈಲರ್ ವೃತ್ತಿಯಲ್ಲಿ ತೊಡಗಿದ್ದಾರೆ.  ಈ ಮಧ್ಯೆ ತರನ್ನುಮ್ ಅವರ ಹಿರಿಯ ಸಹೋದರ ಮೊಹಮ್ಮದ್ ಶಾಕಿರ್ ಅವರು ಮೂತ್ರಪಿಂಡದ ವೈಫಲ್ಯಕ್ಕೆ ತುತ್ತಾಗಿ, ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು, ಮತ್ತು ಅವರ ಜೀವ ಉಳಿಸಬೇಕೆಂದರೆ ಮೂತ್ರ ಪಿಂಡದ ಕಸಿ ಮಾಡಿಸಿದರೆ ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ. ಹೀಗೆ ತನ್ನ ಸಹೋದರನ ಜೀವವನ್ನು ಹೇಗಾದರೂ ಮಾಡಿ ಉಳಿಸಬೇಕೆಂದು ದೃಢ ನಿರ್ಧಾರವನ್ನು  ತೆಗೆದುಕೊಂಡು, ತರನ್ನುಮ್ ತನ್ನ ಪತಿಯೊಂದಿಗೆ ಮಾತನಾಡಿ, ತನ್ನ ಒಂದು ಕಿಡ್ನಿಯನ್ನು ಸಹೋದರನಿಗೆ ದಾನ ಮಾಡುತ್ತಾರೆ.

ಇದಾದ ಕೆಲವು ದಿನಗಳ ನಂತರ ಕಿಡ್ನಿ ದಾನ ಮಾಡಿದ್ದಕ್ಕಾಗಿ 40 ಲಕ್ಷ ರೂಪಾಯಿಯನ್ನು ನಿನ್ನ ಸಹೋದರನ ಬಳಿ ಕೇಳಬೇಕೆಂದು ತರನ್ನುಮ್ ಪತಿ, ಆಕೆಗೆ ಪೀಡಿಸುತ್ತಾನೆ. ಇದಕ್ಕೆ ತರನ್ನುಮ್  ಒಪ್ಪದ ಕಾರಣ,  ಆಕೆಯ ಪತಿ ಕೋಪಗೊಂಡು ವಾಟ್ಸಾಪ್ ಕರೆ ಮಾಡಿ ಮೂರು ಬಾರಿ ತಲಾಖ್ ಹೇಳಿ, ವಿಚ್ಛೇದನವನ್ನು ನೀಡಿದ್ದಾನೆ. ಈ ಘಟನೆ 4 ತಿಂಗಳ ಹಿಂದೆ ನಡೆದಿದ್ದು, ಈ ಘಟನೆಯ ಬಳಿಕ ಗಂಡನ ಮನೆಯಿಂದ  ತರನ್ನುಮ್ ಅವರನ್ನು ಹೊರ ಹಾಕಿದ್ದು, ಈಗ ಆಕೆ ತನ್ನ ತಾಯಿ ಮನೆಯಲ್ಲಿ ವಾಸವಿದ್ದಾರೆ. ತನಗಾದ ಮೋಸದ ಕಾರಣ ಇದೀಗ ಪತಿ ಮೊಹಮ್ಮದ್ ರಶೀದ್ ವಿರುದ್ಧ ತರನ್ನುಮ್ ಧಾನೇಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Fri, 22 December 23