Viral Video: ತನ್ನ ಮೇಲೆ ಚಪ್ಪಲಿ ಎಸೆದವರಿಗೆ ಸರಿಯಾಗಿ ಬುದ್ಧಿ ಕಲಿಸಿದ ಹಾವು 

ಹಾವುಗಳೆಂದರೆ ಬಹುತೇಕ ಎಲ್ಲರಿಗೂ ಭಯ.  ಒಂದು ಸಣ್ಣ ಹಾವನ್ನು ಕಂಡರೂ ಭಯಪಟ್ಟು ಓಡಿ ಹೋಗುವ ಅದೆಷ್ಟೋ ಜನರಿದ್ದಾರೆ.  ಅದೇ ರೀತಿ ಇಲ್ಲೊಂದು ಮನೆ ಹತ್ತಿರ ಹಾವು ಬಂತೆಂದು, ಭಯದಿಂದ ಮಹಿಳೆಯೊಬ್ಬರು ಹಾವಿನ ಮೇಲೆ ಚಪ್ಪಳಿಯನ್ನು ಎಸೆದಿದ್ದಾರೆ.   ನನ್ ಮೇಲೇನೇ ಚಪ್ಲಿ ಎಸೆಯುವಷ್ಟು ಧೈರ್ಯನಾ, ಇರಿ ನಿಮ್ಗೆ ಸರಿಯಾಗಿ ಬುದ್ಧಿ ಕಳಿಸ್ತೀನಿ ಎನ್ನುತ್ತಾ, ತನ್ನ ಮೇಲೆ ಎಸೆದಂತಹ ಚಪ್ಪಲಿಯನ್ನೇ ಹಾವು  ಬಾಯಲ್ಲಿ ಕಚ್ಚಿಕೊಂಡು ಓಡಿ ಹೋಗಿದೆ. ಈ  ಹಾಸ್ಯಮಯ ವಿಡಿಯೋ  ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಇದ್ಯಾರು ಹೊಸ ಚಪ್ಲಿ ಕಳ್ಳ ಅಂತ ನೆಟ್ಟಿಗರು ತಮಾಷೆ ಮಾಡಿದ್ದಾರೆ. 

Viral Video: ತನ್ನ ಮೇಲೆ ಚಪ್ಪಲಿ ಎಸೆದವರಿಗೆ ಸರಿಯಾಗಿ ಬುದ್ಧಿ ಕಲಿಸಿದ ಹಾವು 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 23, 2023 | 11:54 AM

ಹಾವುಗಳೆಂದರೆ ಬಹುತೇಕ ಎಲ್ಲರಿಗೂ ಭಯ. ಸಾಮಾನ್ಯವಾಗಿ ಹಾವುಗಳು ಮನೆ ಸುತ್ತಮುತ್ತ ಆಹಾರವನ್ನರಸುತ್ತಾ ಬರುತ್ತವೆ. ಹೀಗೆ ಬಂತಂತಹ ಹಾವುಗಳನ್ನು ಕಂಡು, ಅವುಗಳನ್ನು ಹಿಡಿದು ಕಾಡಿಗೆ ಬಿಡುವವರು ಒಂದು ಕಡೆಯಿದ್ದರೆ, ಇನ್ನೂ ಕೆಲವರು ಈ ಹಾವುಗಳನ್ನು ಕಂಡು ಭಯಪಟ್ಟು ಓಡಿ ಹೋಗುತ್ತಾರೆ.  ಅದೇ ರೀತಿ ಇಲ್ಲೊಂದು ಮನೆಯ ಬಳಿ  ಆಹಾರವನ್ನರಸುತ್ತಾ ಹಾವೊಂದು ಬಂದಿದ್ದು, ಅದನ್ನು ಕಂಡು ಮಹಿಳೆಯೊಬ್ಬರು ಭಯದಿಂದ ಚಪ್ಪಲಿಯನ್ನು ಹಾವಿನ ಮೇಲೆ ಎಸೆಯುತ್ತಾರೆ.  ನನ್ ಮೇಲೆ ಚಪ್ಪಲಿ ಎಸೆಯೋಕೆ ನಿಮಗೆಷ್ಟು ಧೈರ್ಯ ಎನ್ನುತ್ತಾ, ಆ ಹಾವು ತನ್ನ ಮೇಲೆ ಎಸೆದಂತಹ ಚಪ್ಪಲಿಯನ್ನೇ ಕಚ್ಚಿಕೋಡು ಓಡಿ ಹೋಗಿದೆ. ಈ ಹಾಸ್ಯಮಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋವನ್ನು  @ghantaa ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಹಾವೊಂದು ತನ್ನ ಮೇಲೆ ಎಸೆದಂತಹ  ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು  ಹೋಗುವಂತಹ ತಮಾಷೆಯ ದೃಶ್ಯವಾವಳಿಯನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by ghantaa (@ghantaa)

ವೈರಲ್ ವಿಡಿಯೋದಲ್ಲಿ,  ಮನೆಯ ಅಂಗಳಕ್ಕೆ ಹಾವೊಂದು ಸರಸರನೇ ತೆವಳಿಕೊಂಡು ಬರುತ್ತೆ, ಹೀಗೆ ಬಂದಂತಹ  ಹಾವನ್ನು  ಕಂಡು ಭಯಪಟ್ಟ ಮಹಿಳೆಯೊಬ್ಬರು, ಹಾವನ್ನು ಓಡಿಸಲು ಚಪ್ಪಲಿಯನ್ನು ಹಾವಿನ ಮೇಲೆ ಎಸೆದುಬಿಡುತ್ತಾರೆ. ನನ್ ಮೇಲೇನೇ ಚಪ್ಲಿ ಎಸೆತೀರಾ, ಇರೀ ನಿಮ್ಗೆ ಸರಿಯಾಗಿ ಬುದ್ಧಿ ಕಳಿಸ್ತೀನಿ ಎನ್ನುತ್ತಾ ಆ ಹಾವು ತನ್ನ ಮೇಲೆ ಎಸೆದ ಚಪ್ಪಲಿಯನ್ನೇ ಬಾಯಲ್ಲಿ ಕಚ್ಚಿಕೊಂಡು ಹೋಗುವ ತಮಾಷೆಯ ದೃಶ್ಯಾವಳಿಯನ್ನು ಕಾಣಬಹುದು.

ಇದನ್ನೂ ಓದಿ: ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿದ ಮಹಿಳೆ; ಇದಕ್ಕೆ ಪ್ರತಿಯಾಗಿ ಹಣ ಕೇಳಲಿಲ್ಲವೆಂದು ಮಹಿಳೆಗೆ ತ್ರಿವಳಿ ತಲಾಕ್ ನೀಡಿದ ಪತಿ

ನವೆಂಬರ್ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 278 ಸಾವರಿ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳೂ  ಹರಿದುಬಂದಿವೆ. ಒಬ್ಬ ಬಳಕೆದಾರರು ʼಇದೆಂತಹ ತಮಾಷೆ, ಪಾಪ ಆ ಹಾವಿನ ಕೋರೆ ಹಲ್ಲಿಗೆ ಚಪ್ಪಲಿ ಸಿಕ್ಕಿಹಾಕಿಕೊಂಡಿದೆ, ಅದ್ರಿಂದ ಹಾವು ತುಂಬಾ ಕಷ್ಟ ಪಡ್ತಿದೆʼ ಎಂದು  ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು  ʼನಾನು ಮೊದಲ ಬಾರಿಗೆ ಕಾಲಿಲ್ಲದ ಜೀವಿ, ಚಪ್ಪಲಿ ಕದಿಯುವುದನ್ನು ನೋಡಿದ್ದುʼ ಎಂದು ತಮಾಷೆ ಮಾಡಿದ್ದಾರೆ.  ಇನ್ನು ಅನೇಕರು ಇದ್ಯಾರು ಮುದ್ದಾದ ಚಪ್ಪಲಿ ಕಳ್ಳ ಎಂದು ತಮಾಷೆಯ ಕಮೆಂಟ್ಗಳನ್ನು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ