Viral Video: ಡೋಲೋ 650 ಮಾತ್ರೆಯಿಂದ ಬಟ್ಟೆಯ ಕಲೆ ಮಾಯ! ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದ ಮಹಿಳೆಯ ಪ್ರಯೋಗ
ಸಾಮಾನ್ಯವಾಗಿ ಜ್ವರ ಭಾದಿಸಿದ್ರೆ ನಾವೆಲ್ಲರೂ ಪ್ಯಾರಾಸಿಟಮಲ್ ಅಥವಾ ಡೋಲೋ 650 ಮಾತ್ರೆಯನ್ನ ಕುಡಿತೀವಿ. ಆ ಮಾತ್ರೆ ಜ್ವರವನ್ನು ಹೋಗಲಾಡಿಸಲು ಮಾತ್ರವಲ್ಲದೆ ಬಟ್ಟೆಗಳಲ್ಲಿನ ಕಲೆಗಳನ್ನು ಸಹ ತೆಗೆದುಹಾಕಲು ಉಪಯೋಗಕಾರಿ ಅನ್ನೋ ವಿಷ್ಯ ನಿಮ್ಗೆ ಗೊತ್ತಾ? ಅರೇ ಡೋಲೋ-650 ಮಾತ್ರೆಯಿಂದ ಅದೇಗೆ ಕಲೆ ಹೋಗಲಾಡಿಸಲು ಸಾಧ್ಯ ಎಂದು ನೀವು ತಲೆ ಕೆಡಿಸಿಕೊಂಡಿದ್ದೀರಾ ಹಾಗಿದ್ರೆ ಈ ವಿಡಿಯೋವನ್ನು ಒಮ್ಮೆ ನೋಡಿ.
ಸಾಮಾನ್ಯವಾಗಿ ಬಟ್ಟೆಗಳಲ್ಲಿ ಕೊಳೆ ಅಥವಾ ಕಲೆಗಳಾದ್ರೆ ಆ ಕಲೆಗಳನ್ನು ಡಿಟರ್ಜೆಂಟ್ ಪೌಡರ್ ಅಥವಾ ಡಿಟರ್ಜೆಂಟ್ ಲಿಕ್ವಿಡ್ ಅಥವಾ ಸಾಬೂನಿನ ಸಹಾಯದಿಂದ ಹೋಗಲಾಡಿಸುತ್ತೇವೆ. ಆದ್ರೂ ಈ ಬಟ್ಟೆಗಳನ್ನು ಎಷ್ಟೇ ತಿಕ್ಕಿ ತೊಳೆದ್ರೂ ಆ ಕಲೆಗಳು ಅಷ್ಟು ಸುಲಭವಾಗಿ ಹೋಗಲಾರದು. ಹೀಗಿರುವಾಗ ಡೋಲೋ-650 ಮಾತ್ರೆಗಳನ್ನು ಬಳಸಿಕೊಂಡು ಸುಲಭವಾಗಿ ಬಟ್ಟೆಗಳಲ್ಲಿನ ಕಲೆಯನ್ನು ತೆಗೆದು ಹಾಕ್ಬೋದು ಅನ್ನೋ ವಿಷ್ಯ ನಿಮ್ಗೆ ಗೊತ್ತಾ? ಅರೇ ಜ್ವರಕ್ಕೆ ಕುಡಿಯುವ ಮಾತ್ರೆಯಿಂದ ಅದೇಗೆ ಬಟ್ಟೆಗಳ ಕೊಳೆಗಳನ್ನು ತೆಗೆಯಲು ಸಾಧ್ಯ ಅಂತ ನೀವು ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನೋಮ್ಮೆ ನೋಡಿ.
ನಂದು ನಾಯರ್ (@nair_nandu08) ಎಂಬವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಡೋಲೋ 650 ಮಾತ್ರೆಯ ಹೊಸ ಬಳಕೆ ಮಾರುಕಟ್ಟೆಗೆ ಬಂದಿದೆ, ಅಮೇರಿಕಾದ ವಿಜ್ಞಾನಿಗಳು ಭಾರತದ ಈ ಆವಿಷ್ಕಾರಕ್ಕೆ ಬೆರಗಾಗಿದ್ದಾರೆ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಡೋಲೋ-650 ಮಾತ್ರೆಯನ್ನು ಬಳಸಿಕೊಂಡು ಬಿಳಿ ಬಟ್ಟೆಯ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Dolo 650 new use has come in market. American scientists are amazed at indian innovation😃😃😄😝😝😝 pic.twitter.com/GrrCkHzzKm
— 🥀🌹N𝖆𝖓d𝖚 Nair🌹🥀 (@nair_nandu08) December 22, 2023
ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಟ್ಟೆಗಳಲ್ಲಿನ ಕಲೆಗಳನ್ನು ಡೋಲೋ-650 ಮಾತ್ರೆಯನ್ನು ಬಳಸಿ ಹೇಗೆ ತೆಗೆದುಹಾಕಬಹುದು ಎಂಬುದನ್ನು ಹೇಳಿಕೊಡುತ್ತಿರುವುನ್ನು ಕಾಣಬಹುದು. ಆ ಮಹಿಳೆ ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಗ್ಯಾಸ್ ಒಲೆಯ ಮೇಲೆ ಕುದಿಯಲು ಇಡುತ್ತಾರೆ. ನಂತರ ಎರಡು ಡೋಲೋ-650 ಮಾತ್ರೆಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕ್ತಾರೆ. ಬಳಿಕ ಆ ನೀರಿಗೆ ಎರಡು ಚಮಚ ಬೇಕಿಂಗ್ ಸೋಡಾ ಮತ್ತು ಅರ್ಧ ಕಪ್ ಡಿಟರ್ಜೆಂಟ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾರೆ. ಹೀಗೆ ನೀರನ್ನು ಚೆನ್ನಾಗಿ ಕುದಿಸಿ, ನಂತರ ಕಲೆಯಾಗಿರುವಂತಹ ಬಿಳಿ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಎರಡು ನಿಮಿಷಗಳ ಕಾಲ ಡೋಲೋ-650 ಮಾತ್ರೆಯನ್ನು ಹಾಕಿದ ನೀರಿನಲ್ಲಿ ಅದ್ದಿಡುತ್ತಾರೆ. ಕೊನೆಯಲ್ಲಿ ಬಟ್ಟೆಯನ್ನು ತಿಕ್ಕಿ ತೊಳೆಯದೆಯೂ ಸುಲಭವಾಗಿ ಬಟ್ಟೆಯ ಕಲೆ ತೆಗೆದು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ರಸ್ತೆ ಮಧ್ಯೆ ಯುವತಿಯ ಹುಚ್ಚಾಟ, ಹೆತ್ತವರೇ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂದ ನೆಟ್ಟಿಗರು
ಡಿಸೆಂಬರ್ 22ರಂದು ಹಂಚಿಕೊಳ್ಳಲಾದ ಈ ವಿಡಿಯೋ 452 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕದಾರರು ʼಮೊದಲಿಗೆ ನಾನು ಆಕೆ ಪ್ಯಾರೆಸಿಟಮಾಲ್ ಮಾತ್ರೆಯಿಂದ ಖೀರ್ ತಯಾರಿಸುತ್ತಿದ್ದಾಳೆ ಅಂತಾ ಭಾವಿಸಿದೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಡೋಲೋ-650 ಮಾತ್ರೆಯ ಹೊಸ ತರಹದ ಪ್ರಚಾರವಾಗಿರಬಹುದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜಕ್ಕೂ ಅದ್ಭುತ ಮತ್ತು ನಂಬಲಾಸಾಧ್ಯವಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ತಂತ್ರ ನಿಜಕ್ಕೂ ಪರಿಣಾಮಕಾರಿಯೇ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: