Viral Video: ರಸ್ತೆ ಮಧ್ಯೆ ಯುವತಿಯ ಹುಚ್ಚಾಟ, ಹೆತ್ತವರೇ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂದ ನೆಟ್ಟಿಗರು
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡೋ ಭರದಲ್ಲಿ ಸಾರ್ವಜನಿಕರಿಗೆ ತೊಂದರೆಕೊಡುವಂತಹ ಪ್ರಸಂಗಗಳು ಬಹಳ ಹೆಚ್ಚಾಗುತ್ತಿವೆ. ಇದೇ ರೀತಿಯ ಘಟನೆಯೊಂದು ನಡೆದಿದ್ದು, ವಾಹನಗಳು ಸಂಚರಿಸುತ್ತಿದ್ದ ವೇಳೆಯಲ್ಲಿಯೇ ರಸ್ತೆ ಮಧ್ಯೆ ಕಾಲೇಜು ಯುವತಿಯೊಬ್ಬಳು, ಡಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದಿದ್ದಾಳೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇದೆಂತಹ ಹುಚ್ಚಾಟ ಎಂದು ನೆಟ್ಟಿಗರು ಯುವತಿಯ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ರೀಲ್ಸ್ ಹುಚ್ಚು ಬಹಳ ಹೆಚ್ಚಾಗಿದೆ. ಕೆಲವೊಬ್ರು ಸಾಮಾಜಿಕ ಜಾಲತಾಣದಲ್ಲಿ ತಾವು ಫೇಮಸ್ ಆಗ್ಬೇಕು ಎಂಬ ಕಾರಣಕ್ಕೆ ಎಂತಹ ಹುಚ್ಚು ಸಾಹಸಕ್ಕೂ ಬೇಕಾದರೂ ಕೈ ಹಾಕುತ್ತಾರೆ. ಹೀಗೆ ರೈಲು, ಮೆಟ್ರೋಗಳಲ್ಲಿ ಡಾನ್ಸ್ ಮಾಡುತ್ತಾ ಹುಚ್ಚಾಟ ಮೆರೆಯುವಂತಹವರ ರೀಲ್ಸ್ ವಿಡಿಯೋಗಳನ್ನು ನಾವೆಲ್ಲರೂ ನೋಡಿರುತ್ತೇವೆ. ಅದರಲ್ಲೂ ಈಗೀಗ ರೀಲ್ಸ್ ಮಾಡೋ ಭರದಲ್ಲಿ ಸಾರ್ವಜನಿಕರಿಗೆ ತೊಂದರೆಕೊಡುವಂತಹ ಪ್ರಸಂಗಗಳು ಬಹಳ ಹೆಚ್ಚಾಗಿವೆ. ಹೆಚ್ಚಿನವರು ತಾವು ಫೇಮಸ್ ಆಗ್ಬೇಕು ಅಂತಾ ರೈಲು ಅಥವಾ ಮೆಟ್ರೋಗಳಲ್ಲಿ ಡಾನ್ಸ್ ವಿಡಿಯೋಗಳನ್ನು ಮಾಡಿದ್ರೆ, ಇಲ್ಲೊಬ್ಬಳು ಕಾಲೇಜು ಯುವತಿ ಹೆದ್ದಾರಿ ಮಧ್ಯೆಯೇ ಡಾನ್ಸ್ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇದೆಂತಹ ಹುಚ್ಚಾಟ ಎಂದು ಯುವತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಗೌರಂಗ್ ಭಾರಧ್ವಾಜ್ (@GaurangBharawa1) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಯುವತಿಯೊಬ್ಬಳ ರಸ್ತೆ ಮಧ್ಯೆ ಡಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
इंटरनेट महँगा ही अच्छा था। 🤦♂️ pic.twitter.com/QFPI5a7Q4d
— Raja Babu (@GaurangBhardwa1) December 22, 2023
ವೈರಲ್ ವಿಡಿಯೋದಲ್ಲಿ ಹೆದ್ದಾರಿಯೊಂದರಲ್ಲಿ ಸಾರ್ವಜನಿಕರು ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್ ಬಿದ್ದ ವೇಳೆಯಲ್ಲಿ ಕಾಲೇಜು ಯುವತಿಯೊಬ್ಬಳು, ತನ್ನ ಭುಜದ ಮೇಲಿದ್ದ ಬ್ಯಾಗನ್ನು ಎಸೆದು, ರಸ್ತೆ ಮಧ್ಯೆ ಬಂದು ಡಾನ್ಸ್ ಮಾಡುತ್ತಾ, ಹುಚ್ಚಾಟ ಮೆರೆಯುತ್ತಿರುವಂತಹ ದೃಶ್ಯಾವಳಿಯನ್ನು ಕಾಣಬಹುದು.
ಇದನ್ನೂ ಓದಿ: ತನ್ನ ಮೇಲೆ ಚಪ್ಪಲಿ ಎಸೆದವರಿಗೆ ಸರಿಯಾಗಿ ಬುದ್ಧಿ ಕಲಿಸಿದ ಹಾವು
ಡಿಸೆಂಬರ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವವರ ವಿರುದ್ಧ ಪೋಲಿಸರು ದೂರು ದಾಖಲಿಸಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂದಿನ ಯುವ ಜನತೆ ಎತ್ತ ಸಾಗುತ್ತಿದೆ, ಫೇಮಸ್ ಆಗಬೇಕು ಎನ್ನುವ ಗೋಜಿನಲ್ಲಿ ಇದೆಂತಹ ಹುಚ್ಚಾಟ ಮೆರೆಯುತ್ತಿದ್ದಾರೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಂದೆ ತಾಯಿ ಕಷ್ಟ ಪಟ್ಟು ಮಕ್ಕಳು ಚೆನ್ನಾಗಿ ಓದಿ ಒಂದೊಳ್ಳೆ ಭವಿಷ್ಯವನ್ನು ಕಟ್ಟಿಕೊಳ್ಳಲಿ ಎಂದು ಕಾಲೇಜಿಗೆ ಕಳಿಸಿದ್ರೆ, ಮಕ್ಕಳು ಮಾತ್ರ ಹಾದಿ ತಪ್ಪುತ್ತಿದ್ದಾರೆʼ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: