ಇಂದಿನ ಕಾಲಮಾನದಲ್ಲಿ ಯಾವುದೇ ಬಿಸಿನೆಸ್ ಪ್ರಾರಂಭಿಸಿ ಲಾಭ ಗಳಿಸುವುದು ಅಷ್ಟು ಸುಲಭವಲ್ಲ. ಆಹಾರದ ಗುಣಮಟ್ಟ ಹಾಗೂ ಸ್ಥಳೀಯತೆಯನ್ನು ಹೊರತುಪಡಿಸಿ ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಜನರನ್ನು ತಮ್ಮತ್ತ ಸೆಳೆಯುವುದು ಅಗತ್ಯವಾಗಿರುತ್ತದೆ. ಇದೀಗಾ ವಿಭಿನ್ನ ರೀತಿಯ ಹೆಸರಿನಿಂದಲೇ ಬೆಂಗಳೂರಿನ ಆರ್ ಟಿ ನಗರದ ಸಣ್ಣ ಚಾಟ್ಸ್ ಅಂಗಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದೆ. ಅಂಗಡಿಗೆ ‘ಎಕ್ಸ್ ಗರ್ಲ್‌ಫ್ರೆಂಡ್ ಚಾಟ್ ಸೆಂಟರ್’ ಎಂಬ ಹೆಸರನ್ನು ಇಡಲಾಗಿದ್ದು, ಈ ಅಂಗಡಿಯ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಚಾಟ್ ಸೆಂಟರ್ನ ಬೋರ್ಡನ್ನು @dankchikidang ಎಂಬ ಟ್ವಿಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗಾಗಲೇ ಲಕ್ಷಾಂತರ ನೆಟ್ಟಿಗರನ್ನು ತಲುಪಿದೆ. ಜನವರಿ 29ರಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ರೆಸ್ಟೋರೆಂಟ್‌ನ ಹೆಸರನ್ನು ಓದಿದ ನಂತರ, ಜನರು ವಿವಿಧ ರೀತಿಯ ಕಾಮೆಂಟ್‌ಗಳನ್ನು ನೀಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 1 ಕಪ್ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಯಾಕಿಷ್ಟು ದುಬಾರಿ?; ವಿಡಿಯೋ ವೈರಲ್
Looking to chat about your breakup? Fear no more. pic.twitter.com/VmMPgKttYT
— Farrago Metiquirke (@dankchikidang) January 29, 2024
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, ‘ಯಾರೂ ತಮ್ಮ ಗೆಳತಿಯೊಂದಿಗೆ ಇಲ್ಲಿಗೆ ಹೋಗಲು ಇಷ್ಟಪಡಲ್ಲ’ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ‘ಈ ಬೋರ್ಡ್ ನನ್ನ ಮಾಜಿ ಪ್ರೇಯಸಿಯನ್ನೇ ನೆನಪಿಸಿತು’ ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ