ಮಾನವರಾದ ನಾವು ತಪ್ಪು ಮಾಡುವುದು ಸಹಜ, ಅದರಲ್ಲೂ ಕಾಗುಣಿತದಲ್ಲಿನ ತಪ್ಪುಗಳು. ಜನಸಾಮಾನ್ಯರಾದರೆ ಅಷ್ಟೊಂದು ಗಂಭೀರವಾಗುವುದಿಲ್ಲ ಆದರೆ ದೊಡ್ಡ ವ್ಯಕ್ತಿಗಳು ತಪ್ಪು ಮಾಡಿದರೆ ಅದು ಹೆಚ್ಚು ಗಮನಸೆಳೆಯುತ್ತದೆ. ಇದೀಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಆಂಗ್ಲ ಭಾಷೆಯಲ್ಲಿನ ಅಭಿಯಾನ ಪದದಲ್ಲಿ ಬರೆಯಲಾದ ತಪ್ಪಾದ ಕಾಗುಣಿತದಿಂದಾಗಿ ಹೆಚ್ಚು ವೈರಲ್ ಆಗುತ್ತಿದ್ದಾರೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ಪಿಚ್ ಮಾಡುವ ಮೊದಲ ದೂರದರ್ಶನ ಚರ್ಚೆಯಲ್ಲಿ ರಿಷಿ ಸುನಕ್ ಅವರು ಭಾಗವಹಿಸಿದ್ದಾರೆ. ಸಂದರ್ಶಕರ ಮುಂದೆ ಕುಳಿತಿದ್ದ ರಿಷಿ ಅವರ ಹಿಂಬದಿಯಲ್ಲಿ ಅಭಿಯಾನದ ಬ್ಯಾನರ್ ಅನ್ನು ಹಾಕಲಾಗಿತ್ತು. ಈ ಅಭಿಯಾನದ ಬ್ಯಾನರ್‌ನಲ್ಲಿ ಅಭಿಯಾನ ಎಂಬ ಆಂಗ್ಲ ಪದವೇ ತಪ್ಪಾಗಿ ಬರೆದಿರುವುದು ಕೆಲವು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡು ರಿಷಿ ಸುನಕ್ ಅವರನ್ನು ಪ್ರಚಾರದ ಬ್ಯಾನರ್‌ನಲ್ಲಿ ಕಾಗುಣಿತ ದೋಷವಿದೆ ಎಂದು ವೀಕ್ಷಕರು ಇಂಟರ್ನೆಟ್ನಲ್ಲಿ ಜರಿಯಲು ಪ್ರಾರಂಭಿಸಿದ್ದಾರೆ.
ಅಷ್ಟಕ್ಕೂ ರಿಷಿ ಸುನಕ್ ಅವರ ಅಭಿಯಾನದ ಬ್ಯಾನರ್‌ನಲ್ಲಿ Campaign ಎಂದು ಬರೆಯುವ ಬದಲು Campiaign ಎಂದು ಬರೆಯಲಾಗಿದೆ. ಕಾಗುಣಿತ ತಪ್ಪಾಗಿರುವುದನ್ನು ಮುಂದಿಟ್ಟುಕೊಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಂಮೆಂಟ್ಗಳನ್ನು ಮಾಡಲು ಮುಂದಾಗಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, ”ರಿಷಿ ಸುನಕ್ ಅವರು ತಪ್ಪಾಗಿ ಬರೆದ ‘ಅಭಿಯಾನ’ ಪದದ ಮುಂದೆ ಕುಳಿತುಕೊಳ್ಳದಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು” ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, “ರಿಷಿ ಸುನಕ್ ಕೋಟ್ಯಾಧಿಪತಿಯಾಗಿರಬಹುದು, ಆದರೆ ಅವರು ಅಭಿಯಾನವನ್ನು ಉಚ್ಚರಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
I’m so sick of @RishiSunak bleating on about honesty. In March 2020, he said “No one would be left behind” except he conveniently forgets to tell people that he left 10% of the workforce with no Covid support. He is a professional liar. #FBEUA @OfficialEUA #NeverRishi #NOTHANKS pic.twitter.com/JXzEGb1PKt
— Excluded and Forgotten (@AndExcluded) July 15, 2022
ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗುರುವಾರ ನಡೆದ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಒಬ್ಬ ಅಭ್ಯರ್ಥಿ ಚುನಾವಣಾ ಸುತ್ತಿನಿಂದ ಹೊರ ಬಿದ್ದಿದ್ದಾರೆ. ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜೂನಿಯರ್ ಟ್ರೇಡ್ ಮಿನಿಸ್ಟರ್ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದಿದ್ದಾರೆ. ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ 27 ಮತಗಳೊಂದಿಗೆ ಸುತ್ತಿನಿಂದ ಹೊರನಡೆದಿದ್ದಾರೆ. ಶಾಸಕ ಟಾಮ್ ತುಗೆಂಧತ್ 32 ಮತಗಳನ್ನು ಪಡೆದರೆ, ಕೆಮಿ ಬಡೆನೋಚ್ 49 ಮತಗಳನ್ನು ಪಡೆದಿದ್ದಾರೆ.
Published On - 11:13 am, Sat, 16 July 22