Video: ಇದು ಒಡಹುಟ್ಟಿದವರ ಶುದ್ಧ ಪ್ರೀತಿ, ಮರಿ ಆನೆಗಳ ಕ್ಯೂಟ್ ಚುಂಬನ

ಸಾಮಾಜಿಕ ಜಾಲತಾಣದಲ್ಲಿ ಆನೆಗಳ ಮುದ್ದಾದ ವಿಡಿಯೋ ವೈರಲ್​​ ಆಗುತ್ತಲೇ ಇರುತ್ತದೆ. ಅವುಗಳು ಮಾಡುವ ತುಂಟಾಟಗಳನ್ನು ನೋಡಿ ನಗುವುದು ಇದೆ. ಆದರೆ ಇಲ್ಲೊಂದು ಆನೆಗಳ ವಿಡಿಯೋ ಸಖತ್‌ ವೈರಲ್​​ ಆಗಿದೆ. ಆದರೆ ಇದು ತುಂಬಾ ಭಾವನ್ಮಾಕವಾಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಹಂಚಿಕೊಂಡಿದ್ದಾರೆ.

Video: ಇದು ಒಡಹುಟ್ಟಿದವರ ಶುದ್ಧ ಪ್ರೀತಿ, ಮರಿ ಆನೆಗಳ ಕ್ಯೂಟ್ ಚುಂಬನ
ವೈರಲ್​​ ವಿಡಿಯೋ
Image Credit source: Twitter

Updated on: Jul 29, 2025 | 1:14 PM

ಈ ಕಾಡು ಪ್ರಾಣಿಗಳ ಕೆಲವೊಂದು ಕ್ಯೂಟ್​​​ ಆಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ವೈರಲ್​​ ಆಗುತ್ತಲೇ ಇರುತ್ತದೆ. ಅದರಲ್ಲೂ ಈ ಆನೆಗಳ (Elephant) ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಿಕ್ಕಪಟ್ಟೆ ಟ್ರೆಂಡ್​​​ ಆಗುತ್ತಿರುತ್ತದೆ. ಇದೀಗ ಇಲ್ಲೊಂದು ಆನೆಗಳ ವಿಡಿಯೋ ವೈರಲ್​​ ಆಗಿದೆ. ಎರಡು ಮರಿ ಆನೆಗಳು ಚುಂಬಿಸುತ್ತಿರುವ (Elephants Kissing) ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋದಲ್ಲಿ ಆನೆಗಳು ತಮ್ಮ ಸೊಂಡಿಲುಗಳನ್ನು ನಿಧಾನವಾಗಿ ಎತ್ತಿ ಕಿಸ್​​ ಮಾಡುವುದನ್ನು ಕಾಣಬಹುದು.

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಒಡಹುಟ್ಟಿದವರ ಪ್ರೀತಿ ಎಂದಿಗೂ ಇಷ್ಟು ಮುದ್ದಾಗಿ ಕಾಣಲಿಲ್ಲ, ಎರಡು ಮರಿ ಆನೆಗಳು ಮುತ್ತು ಹಂಚಿಕೊಳ್ಳುತ್ತಿವೆ. ಪ್ರಕೃತಿಯ ನೇರವಾಗಿ ಕಾಣುವ ಶುದ್ಧ ಕಾಡು ಪ್ರೀತಿ” ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಎರಡು ಆನೆಗಳು ಪರಸ್ಪರ ಹತ್ತಿರ ನಿಂತಿರುವುದು ಕಾಣಬಹುದು, ನಿಧಾನವಾಗಿ ಎರಡು ಆನೆಗಳು ತಲೆಯನ್ನು ಹತ್ತಿರ ತರುತ್ತದೆ. ಆನೆಗಳು ಪರಸ್ಪರ ತಮ್ಮ ಸೊಂಡಿಗಳನ್ನು ಸ್ಪರ್ಶಿಸುವುದನ್ನು ನೀವಿಲ್ಲಿ ನೋಡಬಹುದು. ಇದು ಎರಡು ಕೂಡ ಚುಂಬಿಸಿದಂತಿದೆ.

ಇದನ್ನೂ ಓದಿ
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಅಮೆರಿಕಕ್ಕಿಂತ ಈ ದೇಶವೇ ಬೆಸ್ಟ್, ಇಲ್ಲಿ ಇರಲು ಲೆಕ್ಕವಿಲ್ಲದಷ್ಟು ಕಾರಣಯಿದೆ
ಅಪ್ಪನಿಗೆ ಮೇಕಪ್ ಮಾಡೋದ್ರಲ್ಲಿ ಬ್ಯುಸಿ ಈ ಪುಟಾಣಿ
ನಡುರಸ್ತೆಯಲ್ಲಿ ಬೈಕ್ ಸವಾರನ ಮೇಲೆ ಅಟ್ಯಾಕ್ ಮಾಡಲು ಬಂದ ಚಿರತೆ

ಇದನ್ನೂ ಓದಿ: ಯುವತಿಯರನ್ನು ಹಿಂಬಾಲಿಸಿಕೊಂಡು ಬಂದ ಪುಂಡರ ಗುಂಪು, ಬೆಂಗಳೂರು ಎಷ್ಟು ಸೇಫ್ ಎಂದ ಯುವತಿಯರು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರೂ, ಸಹೋದರ ಪ್ರೀತಿ ಮತ್ತು ಬಾಂಧವ್ಯದ ಸಂಕೇತವೆಂದು ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಜುಲೈ 28ಕ್ಕೆ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಮೂರು ಸಾವಿರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್​​ ಮಾಡಿದ್ದಾರೆ. ಮನುಷ್ಯರಂತೆ ಎರಡು ಕೂಡ ತಮ್ಮ ಸಂಬಂಧಗಳನ್ನು ವ್ಯಕ್ತಪಡಿಸುತ್ತಿದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಆನೆಗಳು ತುಂಬಾ ದೊಡ್ಡದಾಗಿರಬಹುದು, ಆದರೆ ಅವುಗಳ ಹೃದಯಗಳು ತುಂಬಾ ಸೂಕ್ಷ್ಮವಾಗಿರುತ್ತದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 1:13 pm, Tue, 29 July 25